ಉಚಿತ 4ಜಿ ಸೇವೆಯ ಬಳಿಕ, ಫ್ರೀ DTH ಸೇವೆ ನೀಡಲು ಸಜ್ಜಾಗುತ್ತಿದೆ ಜಿಯೋ!

By Suvarna Web DeskFirst Published Feb 11, 2017, 8:29 AM IST
Highlights

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿ ಇತರ ಕಂಪೆನಿಗಳ ನಿದ್ದೆಗೆಡಿಸಿದ್ದ ಜಿಯೋ, ಬಳಿಕ ಸ್ಮಾರ್ಟ್ ಫೋನ್'ನ್ನೂ ಬಿಡುಗಡೆಗೊಳಿಸಿ ಅಪಾರ ಪ್ರಮಾಣದ ಗ್ರಾಹಕರನ್ಗನು ತನ್ನತ್ತ ಸೆಳೆದಿತ್ತು. ಇವೆಲ್ಲದರ ಬಳಿಕ ಇದೀಗ ಜಿಯೋ ಮತ್ತೊಂದು ಅದ್ಭುತ ಸೇವೆಯನ್ನು ನೀಡಲು ಸಜ್ಜಾಗುತ್ತಿದೆ.

ನವದೆಹಲಿ(ಫೆ.11): ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿ ಇತರ ಕಂಪೆನಿಗಳ ನಿದ್ದೆಗೆಡಿಸಿದ್ದ ಜಿಯೋ, ಬಳಿಕ ಸ್ಮಾರ್ಟ್ ಫೋನ್'ನ್ನೂ ಬಿಡುಗಡೆಗೊಳಿಸಿ ಅಪಾರ ಪ್ರಮಾಣದ ಗ್ರಾಹಕರನ್ಗನು ತನ್ನತ್ತ ಸೆಳೆದಿತ್ತು. ಇವೆಲ್ಲದರ ಬಳಿಕ ಇದೀಗ ಜಿಯೋ ಮತ್ತೊಂದು ಅದ್ಭುತ ಸೇವೆಯನ್ನು ನೀಡಲು ಸಜ್ಜಾಗುತ್ತಿದೆ.

ಇದೀಗ ರಿಲಾಯನ್ಸ್ ಜಿಯೋ DTH(ಡೈರೆಕ್ಟ್ ಟು ಹೋಮ್) ಸೇವೆ ನೀಡಿ ಟಿವಿ ವೀಕ್ಷಕರ ಮನಗೆಲ್ಲಲು ಸಕಲ ಸಿದ್ಧತೆ ನಡೆಸುತ್ತಿದೆ. ಲಭ್ಯವಾದ ಮಾಹಿತಿ ಅನ್ವಯ ಅತಿ ಶೀಘ್ರದಲ್ಲೇ ಜಿಯೋ DTH ಸೇವೆಯನ್ನು ಲಾಂಚ್ ಮಾಡುವ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಹೇಗೆ ತನ್ನ ಗ್ರಾಹಕರಿಗೆ ಇದು ಉಚಿತ ಕಾಲಿಂಗ್, ಡೇಟಾ, ರೋಮಿಂಗ್ ಹಾಗೂ ಮೆಸೇಜ್ ಸೌಲಭ್ಯ ನೀಡಿತ್ತೋ, ಹಾಗೆಯೇ ಗ್ರಾಹಕರ ಸಂಖ್ಯೆ ಹಚ್ಚಾಗುವವರೆಗೆ DTH ಸೌಲಭ್ಯವೂ ಉಚಿತವಾಗಿ ನೀಡಲಿದೆ.

ಜಿಯೋನ ಅದ್ಭುತ ಮೊಬೈಲ್ ಪ್ಲಾನ್'ನಂತೆಯೇ DTH ಸೇವೆಗೂ ಅತಿ ಕಡಿಮೆ ಶುಲ್ಕ ವಿಧಿಸಲಿದೆ. ಪ್ರಸಾರವಾಗಿರುವ ಸುದ್ದಿಯನ್ವಯ ಜಿಯೋ ತನ್ನ ಆರಂಭಿಕ ಸೇವೆ 45-55 ರೂಪಾಯಿ ಇರಲಿದ್ದು, ಇದರ ದುಬಾರಿ ಎಂದರೆ 200 ರಿಂದ 250 ರೂಪಾಯಿ ಇರಲಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಪುಷ್ಠೀಕರಿಸುವಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಈಗಾಗಲೇ ಜಿಯೋ ಸೆಟ್ ಟಾಪ್ ಬಾಕ್ಸ್'ನ ಜಾಹೀರಾತು ವೈರಲ್ ಆಗುತ್ತಿವೆ. ಜಿಯೋ ಈ ಸೇವೆಯನ್ನು ಶೀಘ್ರದಲ್ಲೇ ಪರಿಚಯಿಸಲಿದ್ದು, ಭಾರತೀಯರು ಇದರ ುಪಯೋಗಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆಯೇ ಏರ್'ಟೆಲ್, ವೊಡಾಫೋನ್, ಐಡಿಯಾ ಕಂಪೆನಿಗಳಿಗೆ ಶಾಕ್ ನೀಡಿದ್ದ ಜಿಯೋ, DTH ಸೌಲಭ್ಯ ನೀಡುವ ಮೂಲಕ ಯಾರ ನಿದ್ದೆ ಕಸಿಯಲಿದೆ ಎಂಬುವುದನ್ನು ಕಾದು ನೋಡಬೇಕಷ್ಟೇ.

click me!