ಇನ್ಫೋಸಿಸ್‌ನಿಂದ ಸ್ವಯಂಚಾಲಿತ ಕಾರು!

By Suvarna Web DeskFirst Published Jul 15, 2017, 11:27 AM IST
Highlights

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ಭಾರೀ ಚರ್ಚೆಯಲ್ಲಿರುವ ಚಾಲಕ ರಹಿತ ಕಾರು ನಿರ್ಮಾಣದಲ್ಲಿ ಇದೀಗ ಇನ್ಫೋಸಿಸ್ ಕೂಡಾ ಯಶಸ್ವಿಯಾಗಿದೆ. ಸಂಸ್ಥೆಯ ಮೈಸೂರು ವಿಭಾಗ ತಯಾರಿಸಿರುವ ಚಾಲಕ ರಹಿತ ಕಾರನ್ನು, ಕಂಪನಿ ಸಿಇಒ ವಿಶಾಲ್ ಸಿಕ್ಕಾ ಶುಕ್ರವಾರ ಅನಾವರಣ ಮಾಡಿದ್ದಾರೆ. ಶುಕ್ರವಾರ ಕಂಪನಿಯ ತ್ರೈಮಾಸಿಕ ವರದಿ ಬಿಡುಗಡೆಗೆ ಸಿಕ್ಕಾ ಇದೇ ಕಾರಿನಲ್ಲಿ ಆಗಮಿಸುವ ಮೂಲಕ ಗಮನ ಸೆಳೆದರು.

ಬೆಂಗಳೂರು(ಜು.15): ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಜಗತ್ತಿನ ಮುಂಚೂಣಿ ಕಂಪನಿಗಳ ಪೈಕಿ ಒಂದಾದ ಬೆಂಗಳೂರು ಮೂಲದ ಇನ್ಫೋಸಿಸ್ ಇದೀಗ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ಭಾರೀ ಚರ್ಚೆಯಲ್ಲಿರುವ ಚಾಲಕ ರಹಿತ ಕಾರು ನಿರ್ಮಾಣದಲ್ಲಿ ಇದೀಗ ಇನ್ಫೋಸಿಸ್ ಕೂಡಾ ಯಶಸ್ವಿಯಾಗಿದೆ. ಮುಂಚೂಣಿ ಕಂಪನಿಗಳ ಪೈಕಿ ಒಂದಾದ ಬೆಂಗಳೂರು ಮೂಲದ ಇನ್ಫೋಸಿಸ್ ಇದೀಗ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ಭಾರೀ ಚರ್ಚೆಯಲ್ಲಿರುವ ಚಾಲಕ ರಹಿತ ಕಾರು ನಿರ್ಮಾಣದಲ್ಲಿ ಇದೀಗ ಇನ್ಫೋಸಿಸ್ ಕೂಡಾ ಯಶಸ್ವಿಯಾಗಿದೆ. ಸಂಸ್ಥೆಯ ಮೈಸೂರು ವಿಭಾಗ ತಯಾರಿಸಿರುವ ಚಾಲಕ ರಹಿತ ಕಾರನ್ನು, ಕಂಪನಿ ಸಿಇಒ ವಿಶಾಲ್ ಸಿಕ್ಕಾ ಶುಕ್ರವಾರ ಅನಾವರಣ ಮಾಡಿದ್ದಾರೆ. ಶುಕ್ರವಾರ ಕಂಪನಿಯ ತ್ರೈಮಾಸಿಕ ವರದಿ ಬಿಡುಗಡೆಗೆ ಸಿಕ್ಕಾ ಇದೇ ಕಾರಿನಲ್ಲಿ ಆಗಮಿಸುವ ಮೂಲಕ ಗಮನ ಸೆಳೆದರು. ಜಾಗತಿಕ ಐಟಿ ದೈತ್ಯ ಗೂಗಲ್ ಸೇರಿದಂತೆ ಹಲವು ಕಂಪನಿಗಳು ಇಂಥ ಯತ್ನ ನಡೆಸುತ್ತಿರುವಾಗಲೇ ಇನ್ಫಿ ತನ್ನ ತಂತ್ರಜ್ಞರ ಸಾಧನೆಯನ್ನು ಜನರ ಮುಂದಿಟ್ಟಿದೆ.

ಸೆನ್ಸರ್‌ಗಳನ್ನು ಅಳವಡಿಸಿರುವ ಈ ಚಾಲಕ ರಹಿತ ಕಾರು, ತನ್ನ ಸುತ್ತಲಿನ ಪರಿಸರವನ್ನು ಗಮನಿಸಿ, ಮಾನವರ ಹಸ್ತಕ್ಷೇಪ ಇಲ್ಲದೆಯೇ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರಿನಲ್ಲಿ ಅಳವಡಿಸಿರುವ ಸುಧಾರಿತ ನಿಯಂತ್ರಣ ಸಾಧನಗಳು, ರಸ್ತೆಯ ಉಬ್ಬು ತಗ್ಗು ಮತ್ತು ರಸ್ತೆಯ ಬದಿಯಲ್ಲಿ ಹಾಕಿರುವ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಇದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಸ್ವಾಯತ್ತ ಕಾರು. ಇದರ ಬಗ್ಗೆ ನಮಗೆ ಪೂರ್ಣ ಹೆಮ್ಮೆ ಇದೆ. ಮೈಸೂರಿನ ವಿಜ್ಞಾನಿಗಳ ತಂಡ ಈ ಸಾಧನೆ ಮಾಡಿದೆ. ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆ ಭವಿಷ್ಯದ ತಂತ್ರಜ್ಞಾನ. ಈ ನಿಟ್ಟಿನಲ್ಲಿ ನಾವಿಂದು ಹೊಸ ಹೆಜ್ಜೆ ಇಟ್ಟಿದ್ದೇವೆ ಎಂದು ಸಿಕ್ಕಾ ಕಾರಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕಾರು ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವ ಕಾರಿನ ಪೂರ್ಣರೂಪ ಅಲ್ಲದೇ ಹೋದರೂ, ಭವಿಷ್ಯದಲ್ಲಿ ಅದೇ ಹಾದಿಯಲ್ಲಿ ಸಾಗಲು ಈ ಕಾರು ಮೊದಲ ಹೆಜ್ಜೆ ಎಂದೇ ಬಣ್ಣಿಸಲಾಗಿದೆ. ಜಗತ್ತಿನ ಐಟಿ ಕಂಪನಿಗಳು ಸಾಫ್ಟ್‌ವೇರ್ ಹೊರತುಪಡಿಸಿ ಇತರೆ ಹಲವು ಕ್ಷೇತ್ರಗಳಲ್ಲಿ ಕಾಲಿಡುತ್ತಿರುವಾಗಲೇ ಇನ್ಫೋಸಿಸ್ ಕೂಡಾ ತಾನು ಅದೇ ಹಾದಿಯಲ್ಲಿ ಸಾಗುತ್ತಿರುವ ಮುನ್ಸೂಚನೆ ನೀಡಿದೆ.

(ಕನ್ನಡಪ್ರಭ ವಾರ್ತೆ)

click me!