
ಮುಂಬೈ(ಜು.12): ಧನ್ ಧನಾ ಧನ್ ಆಫರ್ ಮುಕ್ತಾಯಗೊಳ್ಳುತ್ತಿದ್ದು, ಈಗಾಗಲೇ ಹೊಸ ಆಫರ್'ಅನ್ನು ಜಾರಿಗೊಳಿಸಿದೆ. ಈ ನಡುವೆ ಬ್ರಾಡ್'ಬ್ಯಾಂಡ್ ಬಳಕೆದಾರರಿಗೆ ಜಿಯೋ ಹೊಸ ಆಫರ್ ಘೋಷಿಸಲು ತಯಾರಾಗಿದೆ.
ಈ ವರ್ಷದ ಆರಂಭದಲ್ಲಿ ರಿಲಯನ್ಸ್ ಸಂಸ್ಥೆಯು ಬ್ರಾಡ್'ಬ್ಯಾಂಡ್ ಸೇವಾದಾರರಿಗಾಗಿಯೇ ಜಿಯೋ ಫೈಬರ್ ಎಂಬ ಆಫರ್'ಅನ್ನು ಮುಂಬೈ, ದೆಹಲಿ-ಎನ್'ಸಿಆರ್, ಅಹಮದಾಬಾದ್, ಜಾಮ್ನಾ ನಗರ ಸೇರಿದಂತೆ ಕೆಲವು ನಗರಗಳಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಿತ್ತು.
ಆದರೆ ಈಗ ಅಧಿಕೃತವಾಗಿ ಜಾರಿಗೊಳಿಸುತ್ತಿದ್ದು, ವೆಬ್'ಸೈಟ್ ಒಂದು ಬಿಡುಗಡೆ ಮಾಡಿರುವ ವರದಿ, ಪೋಸ್ಟರ್ ಪ್ರಕಾರ ಮೂರು ತಿಂಗಳ ಕಾಲ ತಿಂಗಳಿಗೆ 100ಜಿಬಿಯಂತೆ 100 ಎಂಬಿಪಿಎಸ್ ವೇಗದಲ್ಲಿ ಉಚಿತ ಆಫರ್'ಅನ್ನು ಪ್ರಕಟಿಸಲಿದೆಯಂತೆ.ಈ ಆಫರ್'ಗೆ ತಿಂಗಳ ಶುಲ್ಕವಿರುವುದಿಲ್ಲ ಆದರೆ ಅಳವಡಿಕೆಗಾಗಿ 4500 ರೂ. ಪಾವತಿಸಬೇಕು. ಕೆಲವು ದಿನಗಳು ಕಳೆದ ನಂತರ ಈ ಮೊತ್ತವನ್ನು ಸಂಸ್ಥೆಯು ಮರು ಪಾವತಿಸುತ್ತದೆ. ಅಂದರೆ ಗ್ರಾಹಕರಿಗೆ 3 ತಿಂಗಳು ಉಚಿತವಾಗಿ ದೊರಯಲಿದೆ.
ಬ್ರಾಡ್'ಬ್ಯಾಂಡ್ ಆಫರ್'ನಲ್ಲಿ ಜಿಯೋ ಮೀಡಿಯಾ ಶೇರ್ ಡಿವೈಸ್, ಸ್ಮಾರ್ಟ್ ಸೆಟ್ ಅಪ್ ಬಾಕ್ಸ್, ರೂಟರ್ ಹಾಗೂ ಪವರ್ ಲೈನ್ ಕಮ್ಯುನಿಕೇಷನ್ ಡಿವೈಸ್ ಒಳಗೊಂಡಿರುತ್ತದೆ. ಆಫರ್ ಅವಧಿ ಮುಗಿದ ನಂತರ 100 ಎಂಬಿಪಿಎಸ್ ವೇಗದಲ್ಲಿ 600 ಜಿಬಿಗೆ 500ರೂ. ಹಾಗೂ 2000 ರೂ.ಗಳಿಗೆ 1000 ಜಿಬಿ ಸೇವೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಜಿಯೋ'ದ ಈ ಆಫರ್'ನಿಂದ ಪ್ರಸ್ತುತ ಬ್ರಾಡ್'ಬ್ಯಾಂಡ್ ಸೇವೆ ನೀಡುತ್ತಿರುವ ಏರ್'ಟೆಲ್, ಬಿಎಸ್'ಎನ್'ಎಲ್ ಹಾಗೂ ಎಂಟಿಎನ್'ಎಲ್ ಸಂಸ್ಥೆಗಳಿಗೆ ನಡುಕ ಶುರುವಾಗುವುದು ಖಚಿತ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.