ಜಿಯೋ ಸಿಮ್ ಐಡಿಯಾ ಕೊಟ್ಟಿದ್ದು ಯಾರು? ಮುಖೇಶ್ ಅಂಬಾನಿ ಬಿಚ್ಚಿಟ್ಟ ರಹಸ್ಯವಿದು!

Published : Oct 24, 2016, 02:37 AM ISTUpdated : Apr 11, 2018, 12:55 PM IST
ಜಿಯೋ ಸಿಮ್ ಐಡಿಯಾ ಕೊಟ್ಟಿದ್ದು ಯಾರು? ಮುಖೇಶ್ ಅಂಬಾನಿ ಬಿಚ್ಚಿಟ್ಟ ರಹಸ್ಯವಿದು!

ಸಾರಾಂಶ

ಜಿಯೋ ಸಿಮ್ ಎಂಬ ಐಡಿಯಾ ಹೊಳೆಯಲು ನನ್ನ ಮಗಳು ಇಶಾ ಅಂಬಾನಿ ಕೊಟ್ಟ ದೂರು ಕಾರಣ ಎಂದಿರುವ ಅಂಬಾನಿ ಘಟನೆಯ ಸಂಪೂರ್ಣ ವಿವರವನ್ನೂ ಈ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಮೆರಿಕಾದಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಪದವಿ ಮಾಡುತ್ತಿದ್ದ ಇಶಾ ಅಂಬಾನಿ 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಳು. ಈ ವೇಳೆ ತನ್ನ ವಿದ್ಯಾಭ್ಯಾಸಕ್ಕೆ ವೇಗವಾದ ಇಂಟರ್'ನೆಟ್ ಸೇವೆ ಸಿಗದ ಕಾರಣ ತೊಡಕಾಡಿದ್ದಳು. ಈ ಕುರಿತಾಗಿ ಅಂಬಾನಿಗೂ ದೂರು ನೀಡಿದ್ದು, ಅಮೆರಿಕಾದಲ್ಲಿ ಲಭ್ಯವಿರುವ ಇಂಟರ್'ನೆಟ್ ವೇಗ ಹಾಗೂ ಅದರ ಲಾಭವನ್ನೂ ತಂದೆಗೆ ವಿವರವಾಗಿ ತಿಳಿಸಿದ್ದಳು.

ಮುಂಬೈ(ಅ.24): ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಜಿಯೋನಿಂದಾಗಿ ರಿಲಾಯನ್ಸ್ ಇಂಡಸ್ಟ್ರಿ ಮಾಲಿಕ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಗ್ರಾಹಕರ ಮನೆ ಮಾತಾಗಿದ್ದರು. ಇದೀಗ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಂಬಾನಿ ಜಿಯೋ ಸಿಮ್ ಐಡಿಯಾ ಹೊಳೆಯಲು ಕಾರಣರಾದವರ ಹೆಸರನ್ನು ಬಿಚ್ಚಿಟ್ಟಿದ್ದಾರೆ.

ಜಿಯೋ ಸಿಮ್ ಎಂಬ ಐಡಿಯಾ ಹೊಳೆಯಲು ನನ್ನ ಮಗಳು ಇಶಾ ಅಂಬಾನಿ ಕೊಟ್ಟ ದೂರು ಕಾರಣ ಎಂದಿರುವ ಅಂಬಾನಿ ಘಟನೆಯ ಸಂಪೂರ್ಣ ವಿವರವನ್ನೂ ಈ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಮೆರಿಕಾದಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಪದವಿ ಮಾಡುತ್ತಿದ್ದ ಇಶಾ ಅಂಬಾನಿ 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಳು. ಈ ವೇಳೆ ತನ್ನ ವಿದ್ಯಾಭ್ಯಾಸಕ್ಕೆ ವೇಗವಾದ ಇಂಟರ್'ನೆಟ್ ಸೇವೆ ಸಿಗದ ಕಾರಣ ತೊಡಕಾಡಿದ್ದಳು. ಈ ಕುರಿತಾಗಿ ಅಂಬಾನಿಗೂ ದೂರು ನೀಡಿದ್ದು, ಅಮೆರಿಕಾದಲ್ಲಿ ಲಭ್ಯವಿರುವ ಇಂಟರ್'ನೆಟ್ ವೇಗ ಹಾಗೂ ಅದರ ಲಾಭವನ್ನೂ ತಂದೆಗೆ ವಿವರವಾಗಿ ತಿಳಿಸಿದ್ದಳು.

ಇದೇ ದೂರು ಇಂದು ಜಿಯೋ ಸಿಮ್ ಬಿಡುಗಡೆಗೊಳಿಸಲು ಅಂಬಾನಿಯವರಿಗೆ ಪ್ರೇರಣೆಯಾಗಿದ್ದಂತೆ. 'ಮಗಳಿಂದ ಮಾಹಿತಿ ಪಡೆದ ನಾನು ಅತಿ ಕಡಿಮೆ ವೆಚ್ಚದಲ್ಲಿ ವೇಗದ ಇಂಟರ್'ನೆಟ್ ನೀಡಲು ಟೆಲಿಕಾಂ  ಕ್ಷೇತ್ರಕ್ಕೆ ಕಾಲಿಟ್ಟೆ, ಇದೀಗ ಇದರಲ್ಲಿ ಯಶಸ್ವಿಯಾಗಿದ್ದೇನೆ' ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಘೋಸ್ಟ್‌ ಪೇರಿಂಗ್‌ ಮೂಲಕ ವಾಟ್ಸಪ್‌ ಹ್ಯಾಕ್‌ ಭೀತಿ! ಎಚ್ಚರಿಕೆ ಜಾರಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!