2021ರ ಕೊನೆಯ ದಿನದಂದು ಫುಡ್ ಡೆಲಿವರಿ ಅಪ್ಲಿಕೇಶನ್ 20 ಲಕ್ಷ ಆರ್ಡರ್‌ಗಳನ್ನು ಪಡೆದುಕೊಂಡಿವೆ ಎಂದು ಸ್ವಿಗ್ಗಿ ಮತ್ತು ಜೊಮಾಟೊ ಟ್ವಿಟರ್‌ನಲ್ಲಿ ಹಂಚಿಕೊಂಡಿವೆ.
Tech Desk: ವರ್ಷಾರಂಭದಿಂದಲೇ ಇ-ಕಾಮರ್ಸ್ ಆಪರೇಟರ್‌ಗಳಾದ ಸ್ವಿಗ್ಗಿ, ಝೊಮ್ಯಾಟೋದಂಥ (Swiggy and Zomato) ತಿಂಡಿ-ತಿನಿಸು ಪೂರೈಕೆ ಸೇವೆಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ (GST) ಹಾಕಲಾಗುತ್ತಿದೆ. ಹೀಗಾಗಿ ಆನಲೈನ್ ಫುಡ್ ಆರ್ಡರ್ ಮಾಡುವವರ ಜೇಬಿಗೆ ಕತ್ತರಿ ಬೀಳಲಿದೆ. ಆದರೆ 2022ರ ಆರಂಭಕ್ಕೂ ಮುನ್ನ ಅಂದರೆ ಡಿಸೆಂಬರ್ 31ರಂದು ಸ್ವಿಗ್ಗಿ, ಝೊಮ್ಯಾಟೋ ಭರ್ಜರಿ ಬ್ಯಾಟಿಂಗ್ ಮಾಡಿವೆ. ಈಗಾಗಲೇ ಭಾರತದಲ್ಲಿ ಒಮಿಕ್ರೋನ್ (Omicron) ಸಾವಿರದ ಗಡಿ ದಾಟಿದೆ. ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಮಧ್ಯೆ ಪಾರ್ಟಿ ಪ್ರಿಯರು ಹೊಸ ವರ್ಷವನ್ನು ಮನೆಯಲ್ಲಿಯೇ ಆಚರಿಸಿದಂತಿದೆ. ಇದಕ್ಕೆ ಉದಾಹರಣೆ 2021ರ ಕೊನೆಯ ದಿನ ಸುಮಾರು 20 ಲಕ್ಷಕ್ಕೂ ಹೆಚ್ಚು ಆನ್‌ಲೈನ್ ಫುಡ್ ಡಲಿವರಿ (Online Food delivery) ಆಗಿರುವುದು. ಸ್ವಿಗ್ಗಿ ಪ್ರತಿ ನಿಮಿಷಕ್ಕೆ 9000 ಆರ್ಡರ್‌ಗಳನ್ನು ಸ್ವೀಕರಿಸಿದ್ದರೆ ಝೊಮ್ಯಾಟೋ ಪ್ರತಿ ನಿಮಿಷಕ್ಕೆ ಆರ್ಡರ್‌ಗಳ ಸಂಖ್ಯೆ 8000 ದಾಟಿದೆ.
2021ರ ಕೊನೆಯ ದಿನದಂದು ಫುಡ್ ಡೆಲಿವರಿ ಅಪ್ಲಿಕೇಶನ್ 20 ಲಕ್ಷ ಆರ್ಡರ್‌ಗಳನ್ನು ಪಡೆದುಕೊಂಡಿವೆ ಎಂದು ಸ್ವಿಗ್ಗಿ ಮತ್ತು ಜೊಮಾಟೊ ಟ್ವಿಟರ್‌ನಲ್ಲಿ ಹಂಚಿಕೊಂಡಿವೆ.. ಕಳೆದ ವರ್ಷದಂತೆ ಈ ವರ್ಷ ಸ್ವಿಗ್ಗಿ ತನ್ನದೇ ದಾಖಲೆಗಳನ್ನು ಮುರಿದಿದೆ. ಕಳೆದ ವರ್ಷ ಸ್ವಿಗ್ಗಿ ಪ್ರತಿ ನಿಮಿಷಕ್ಕೆ ಸ್ವೀಕರಿಸಿದ ಆರ್ಡರ್‌ಗಳ ಸಂಖ್ಯೆ ಕೇವಲ 5500 ಆಗಿತ್ತು. ಆದರೆ ಈ ವರ್ಷ ಒಟ್ಟು ಆರ್ಡರ್‌ಗಳ ಸಂಖ್ಯೆ ನಿಮಿಷಕ್ಕೆ 9000 ಕ್ಕೆ ಏರಿದೆ. ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರ ಪದಾರ್ಥ ಬಿರಿಯಾನಿ ಎಂದು ಸ್ವಿಗ್ಗಿ ಬಹಿರಂಗಪಡಿಸಿದೆ.
ಒಂದು ನಿಮಿಷದಲ್ಲಿ 1229 ಬಿರಿಯಾನಿ ಡೆಲಿವರಿ!
"ನಮ್ಮದು ಬಿರಿಯಾನಿ ಪ್ರಿಯ ರಾಷ್ಟ್ರ ಮತ್ತು ಅದು ಈಗ ಸಾಬೀತಾಗಿದೆ. ಒಂದು ನಿಮಿಷದಲ್ಲಿ 1229 ಬಿರಿಯಾನಿಗಳನ್ನು 'ಡೆಲಿವರಿ'ಮಾಡಲಾಗಿದೆ" ಎಂದು ಸ್ವಿಗ್ಗಿ ಹೇಳಿದೆ. ಇನ್ನು ಬಿರಿಯಾನಿಯನ್ನು ಹೊರತುಪಡಿಸಿ ಭಾರತೀಯರು ಬಟರ್ ನಾನ್, ಮಸಾಲಾ ದೋಸೆ, ಪನೀರ್ ಬಟರ್ ಮಸಾಲಾ ಮತ್ತು ಚಿಕನ್ ಫ್ರೈಡ್ ರೈಸ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರ್ಡರ್ ಮಾಡಿದ್ದಾರೆ.
ಹೊಸ ವರ್ಷದ ಮುಂಚಿನ ದಿನ ಭಾರತೀಯರು ಉಪಹಾರಕ್ಕಾಗಿ ಕೂಡ ವಿವಿಧ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಹೇಳಿದೆ. ಆಹಾರ-ವಿತರಣಾ ಅಪ್ಲಿಕೇಶನ್ 15,458 ಮೊಟ್ಟೆಯ ಕಾರ್ಟನ್‌ಗಳು, 35,177 ಚೀಲಗಳಷ್ಟು ಟೊಮೆಟೊಗಳು, 27,574 ಚೀಲಗಳಷ್ಟು ಈರುಳ್ಳಿ ಮತ್ತು 7822 ಬ್ರೆಡ್ ಪ್ಯಾಕೆಟ್‌ಗಳನ್ನು ಆರ್ಡರ್ ಮಾಡಲಾಗಿದೆ.
taking a tweet break. crossed 2 million orders on Swiggy and many more lined up. brb!
— Swiggy (@swiggy_in)
2 ಮಿಲಿಯನ್‌ಗೂ ಹೆಚ್ಚು ಝೋಮ್ಯಾಟೋ ಆರ್ಡರ್ಸ್!
ಇನ್ನು ಝೋಮ್ಯಾಟೋ ಕೂಡ ಡಿ.31 ರಂದು ಕೂಡ 2 ಮಿಲಿಯನ್‌ಗೂ ಹೆಚ್ಚು ಆರ್ಡರ್ಗಳನ್ನು ಪಡೆದುಕೊಂಡಿದೆ. ಆದರೆ ಆರ್ಡರ್‌ಗಳ ಸಂಖ್ಯೆಯಲ್ಲಿನ ಹೆಚ್ಚಳವು ಯುಪಿಐ ಪೇಮೆಂಟ್‌ಗಳ ಮೇಲೆ ಪರಿಣಾಮ ಬೀರಿದೆ ಎಂದು ಸಿಇಒ ದೀಪಿಂದರ್ ಗೋಯಲ್ ಬಹಿರಂಗಪಡಿಸಿದ್ದಾರೆ. “ಯುಪಿಐ ಯಶಸ್ಸಿನ ದರವು ಎಲ್ಲಾ UPI ಅಪ್ಲಿಕೇಶನ್‌ಗಳಲ್ಲಿ ತೀವ್ರವಾಗಿ ಕಡಿಮೆಯಾಗಿದೆ. UPI ಸಕ್ಸಸ್ ರೇಟ್ 70%+ ನಿಂದ ಸದ್ಯ 40% ಕ್ಕೆ ಇಲಿದಿದೆ" ಎಂದು ದೀಪಿಂದರ್ ಹೇಳಿದ್ದಾರೆ. ಜನರು ಆಹಾರವನ್ನು ಆರ್ಡರ್ ಮಾಡಿರುವುದು ಮಾತ್ರವಲ್ಲದೆ, ಸ್ವಿಗ್ಗಿ ಮತ್ತು ಝೊಮಾಟೊದ ಕಿರಾಣಿ ಪ್ಲಾಟ್‌ಫಾರ್ಮ್‌ಗಳು ಇನ್ಸ್ಟಾಮಾರ್ಟ್ ಮತ್ತು ಲೆಟ್ಸ್‌ಬ್ಲಿಂಕಿಟ್ ಸಹ ಸಾವಿರಾರು ಆರ್ಡರ್‌ಗಳನ್ನು ಸ್ವೀಕರಿಸಿವೆ.
Swiggy ಮತ್ತು Zomato ಜನವರಿ 1 ರಿಂದ ದುಬಾರಿಯಾಗಲಿದೆ. ಆಹಾರ-ವಿತರಣಾ ಅಪ್ಲಿಕೇಶನ್‌ಗಳು ಸರ್ಕಾರಿ ಆದೇಶಗಳ ಪ್ರಕಾರ ತಮ್ಮ ರೆಸ್ಟೋರೆಂಟ್ ಸೇವೆಗಳ ಮೇಲೆ 5 ಶೇಕಡಾ ಸರಕು ಮತ್ತು ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಸ್ವಿಗ್ಗಿ ಮತ್ತು ಜೊಮಾಟೊದಂತಹ ಆಹಾರ-ವಿತರಣಾ ವೇದಿಕೆಗಳು ಕ್ಲೌಡ್ ಕಿಚನ್‌ಗಳು ಮತ್ತು ಸೆಂಟ್ರಲ್ ಕಿಚನ್‌ಗಳು ಸೇರಿದಂತೆ ತಮ್ಮ ಪಾಲುದಾರ ರೆಸ್ಟೋರೆಂಟ್‌ಗಳ ಪರವಾಗಿ ಜಿಎಸ್‌ಟಿ ಪಾವತಿಸಬೇಕು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ, ಸೇವೆಗಳು . ಸ್ವಿಗ್ಗಿ ಮತ್ತು ಜೊಮಾಟೊ ಇದಕ್ಕೆ ಒಪ್ಪಿಕೊಂಡಿದ್ದು ಇದು 2022 ರ ಮೊದಲ ದಿನದಿಂದ ಜಾರಿಯಾಗಲಿದೆ.