ಯಮಹಾ RX100 -ನೋಡಲೇ ಬೇಕು ಈ ಕಸ್ಟಮೈಸಡ್ ಬೈಕ್!

Published : Aug 28, 2018, 06:41 PM ISTUpdated : Sep 09, 2018, 08:53 PM IST
ಯಮಹಾ RX100 -ನೋಡಲೇ ಬೇಕು ಈ ಕಸ್ಟಮೈಸಡ್  ಬೈಕ್!

ಸಾರಾಂಶ

ಯಮಹಾ RX100 ಬೈಕ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಯಮಹ RX100 ಸ್ಥಗಿತಗೊಂಡು 22 ವರ್ಷಗಳೇ ಉರುಳಿದೆ. ಆದರೆ ಈಗಲೂ ಯಮಹ RX100 ವ್ಯಾಲ್ಯೂ ಮಾತ್ರ ಕಡಿಮೆಯಾಗಿಲ್ಲ. ಇಲ್ಲಿದೆ ಕಸ್ಟಮೈಸಡ್ ಯಮಹ RX100. ಈ ವೀಡಿಯೋ ನೋಡಿದ ಮೇಲೆ ನೀವು ಯಮಹಾ RX100 ಬೈಕ್‌ಗಾಗಿ ನೀವು ಹುಡುಕಾಡೋದು ಖಚಿತ.

ಬೆಂಗಳೂರು(ಆ.28): ಬೈಕ್ ಪ್ರೀಯರಿಗೆ ಯಮಹಾ RX100 ಹೆಸರು ಕೇಳಿದರೆ ಸಾಕು ಅದೇನೋ ಪ್ರೀತಿ. ಇನ್ನು ಬೈಕ್ ಸೌಂಡ್ ಕೇಳಿದರೆ ಒಮ್ಮೆ ತಿರುಗಿ ನೋಡಲೇಬೇಕು. ಅಷ್ಟರಮಟ್ಟಿಗೆ ಯಮಹ RX100 ಭಾರತದಲ್ಲಿ ಮೋಡಿ ಮಾಡಿದೆ.

ಸದ್ಯ ಯಮಹ RX100 ಬೈಕ್ ನಿರ್ಮಾಣ ಕಾರ್ಯ ನಿಲ್ಲಿಸಿದೆ.  ಆದರೆ ಈಗಲೂ ಯಮಹಾ RX100 ಬೈಕ್‌ಗೆ ಇರೋ ವ್ಯಾಲ್ಯೂ ಮಾತ್ರ ಕಡಿಮೆಯಾಗಿಲ್ಲ. ದುಬಾರಿ ಬೈಕ್‌ಗಳ ಮೇಲಿಲ್ಲದ ವಿಶೇಷ ವ್ಯಾಮೋಹ ಯಮಹಾ RX100 ಬೈಕ್ ಮೇಲಿದೆ.

ಯಮಹಾ RX100 ಬೈಕ್ ಪ್ರೀಯರು ಈ ಕಸ್ಟಮೈಸಡ್ ಬೈಕ್ ವೀಡಿಯೋ ನೋಡಲೇಬೇಕು. ನೀವು ಯಮಹಾ RX100 ಪ್ರೀಯರಾಗಿದ್ದರೆ  ಈ ಕಸ್ಟಮೈಸಡ್ ಬೈಕ್ ನೋಡಿದರೆ ಫಿಧಾ ಆಗೋದು ಖಚಿತ.

ಭಾರತದಲ್ಲಿ 1985ರಿಂದ 1996ರ ವರೆಗೆ ಯಮಹಾ RX100 ನಂಬರ್ 1 ಬೈಕ್ ಆಗಿ ಹೊರಮ್ಮಿತ್ತು. ಬಳಿಕ ಮಾಲಿನ್ಯ ನಿಯಂತ್ರಣ ಕಾಯ್ದಿ ಪ್ರಕಾರ 2 ಸ್ಟ್ರೋಕ್ ಇಂಜಿನ್ ಬೈಕ್ ನಿಷೇಧಿಸಲಾಗಿದೆ. ಹೀಗಾಗಿ 1996ರ ಬಳಿಕ ಯಮಹ ಸಂಸ್ಥೆ ತನ್ನೆಲ್ಲಾ 2 ಸ್ಟ್ರೋಕ್ ಇಂಜಿನ್ ಬೈಕ್ ನಿರ್ಮಾಣ ಕಾರ್ಯ ನಿಲ್ಲಿಸಿತು.

PREV
click me!