ಕೇರಳ ಸಂತ್ರಸ್ತರಿಗೆ 1 ಕೋಟಿ ರೂಪಾಯಿ ನೆರವು ನೀಡಿದ ಹ್ಯುಂಡೈ

By Web DeskFirst Published Aug 18, 2018, 8:37 PM IST
Highlights

ಭಾರತದಲ್ಲಿ ಹ್ಯುಂಡೈ ಕಾರು ಸಂಸ್ಥೆಯ ಯಶಸ್ಸಿನಲ್ಲಿ ಕೇರಳದ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಇದೀಗ ಹ್ಯುಂಡೈ ಸಂಸ್ಥೆ ಕೇರಳ ಸಂತ್ರಸ್ತರ ನೋವಿಗೆ ಸ್ಪಂದಿಸಿದೆ. 

ತಿರುವನಂತಪುರಂ(ಆ.18): ಕೇರಳ ಮಹಾ ಮಳೆಗೆ ಜನರು  ತತ್ತರಿಸಿದ್ದಾರೆ. ಇದ್ದ ಮನಗಳು ಕುಸಿಯುತ್ತಿದೆ. ಸಾವಿನ ಸಂಖ್ಯೆ ಏರುತ್ತಿದೆ. ರಕ್ಷಣಾ ಕಾರ್ಯ ನಡೆಯುತ್ತಿದ್ದರೂ ಕೇರಳ ಸಹಜ ಸ್ಥಿತಿಗೆ ಮರಳುತ್ತಿಲ್ಲ. ಇದೀಗ ಇಡೀ ದೇಶವೇ ಕೇರಳ ನೆರವಿಗೆ ಧಾವಿಸಿದೆ. ಇದೀಗ ಹ್ಯುಂಡೈ ಕಾರು ಸಂಸ್ಥೆ ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದೆ.

ಹ್ಯುಂಡೈ ಯಶಸ್ಸಿನಲ್ಲಿ ಕೇರಳ ಜನರ ಕೊಡುಗೆ ಅಪಾರವಾಗಿದೆ. ಇದೀಗ ಅಪಾಯದಲ್ಲಿ ಸಿಲುಕಿರುವ ಕೇರಳ ಸಂತ್ರಸ್ತರ ಪರಿಹಾರಕ್ಕೆ ಹ್ಯುಂಡೈ ಕಾರು ಸಂಸ್ಥೆ 1 ಕೋಟಿ ರೂಪಾಯಿ ನೀಡಿದೆ. ಸಿಎಂ ಪರಿಹಾರ ನಿಧಿಗೆ ಚೆಕ್ ಮೂಲಕ ಹ್ಯುಂಡೈ ಹಣ ನೀಡಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯಜನ್ ಭೇಟಿಯಾದ ಭಾರತದ ಹ್ಯುಂಡೈ ಉಪಾಧ್ಯಕ್ಷ ಸ್ಟೀಫನ್ ಸುಧಾಕರ್, ವಿಶ್ವದ ದಕ್ಷಿಣ ವಲಯ ಬ್ಯುಸಿನೆಸೆ ಹೆಡ್ ವೈಎಸ್ ಚಾಂಗ್ 1 ಕೋಟಿ ರೂಪಾಯಿ ಚೆಕ್ ವಿತರಿಸಿದರು.

ಹ್ಯುಂಡೈ ಕಾರು ಸಂಸ್ಥೆಗೂ ಮೊದಲು  ಕೇರಳ ಸಂತ್ರಸ್ತರಿಗೆ  ಟಿವಿಎಸ್ ಮೋಟಾರು ಸಂಸ್ಥೆ 1 ಕೋಟಿ ರೂಪಾಯಿ ನೀಡಿದೆ. ಇನ್ನು ಮರ್ಸಿಡಿಸ್ ಬೆಂಝ್ ಸಂಸ್ಥೆ 30 ಲಕ್ಷ ರೂಪಾಯಿ ನೀಡಿದೆ. ಈ ಮೂಲಕ ಕೇರಳ ನೋವಿಗೆ ಸ್ಪಂದಿಸಿದೆ. 

ಮಹಾ ಮಹಳೆಗೆ ಈಗಾಗಲೇ 8000 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 60ಸಾವಿರ ಜನರನ್ನ ಸುರಕ್ಷಿತ ತಾಣಗಳಿಗೆ ವರ್ಗಾವಣೆ ಮಾಡಲಾಗಿದೆ. ಇಷ್ಟಾದರು ಕೇರಳ ಸಮಸ್ಯೆ ಇನ್ನು ನಿಂತಿಲ್ಲ. 

click me!