ವಾಜಪೇಯಿ ಕಾಲದಲ್ಲಿ ಪ್ರಧಾನಿಗೆ ಅಂಬಾಸಿಡರ್‌ನಿಂದ BMW ಕಾರು !ಯಾಕೆ ಗೊತ್ತಾ?

By Web DeskFirst Published Aug 17, 2018, 9:41 PM IST
Highlights

ಭಾರತದ ಪ್ರಧಾನ ಮಂತ್ರಿಗಳು ಬಳಸೋ BMW 7 ಸೀರಿಸ್ ಕಾರು ಅತ್ಯಂತ ಸುರಕ್ಷಿತ ಕಾರು. ಬಾಂಬ್ ಬ್ಲಾಸ್ಟ್ ಪ್ರೊಟೆಕ್ಷನ್, ಬುಲೆಟ್ ಪ್ರೂಫ್ ಸೇರಿದಂತೆ ಹತ್ತು ಹಲವು ವೈಶಿಷ್ಠತೆಗಳು ಈ ಕಾರಿನಲ್ಲಿದೆ. ಆದರೆ ಪ್ರಧಾನ ಮಂತ್ರಿಗಳಿಗೆ BMW 7 ಸೀರಿಸ್ ಕಾರು ಬಂದಿದ್ದು ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ. ಅಂಬಾಸಿಡರ್ ಕಾರಿನಿಂದ BMW 7 ಸೀರಿಸ್ ಕಾರಿಗೆ ವರ್ಗಾವಣೆಯಾಗಲು ಒಂದು ಕಾರಣವಿದೆ. ಇಲ್ಲಿದೆ ಇತಿಹಾಸ.

ಬೆಂಗಳೂರು(ಆ.17): ದೇಶ ಕಂಡ ಶ್ರೇಷ್ಠ ಪ್ರಧಾನಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಆಗಸ್ಟ್ 16 ರಂದು ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಭಾರತೀಯ ಸೇನೆಯ ಮೂರು ಪಡೆ, ಪೊಲೀಸ್ ತುಕಡಿಗಳಿಂದ ವಿಶೇಷ ಗೌರವ ಸಲ್ಲಿಸಿ ಅಂತಿವ ವಿದಾಯ ಹೇಳಲಾಯಿತು. 

ಅಟಲ್ ಬಿಹಾರಿ ವಾಜಪೇಯಿ ಭಾರತದ ರಾಜಕಾರಣಕ್ಕೆ, ಆಡಳಿತಕ್ಕೆ ದಿಕ್ಕು ಅಂದರೆ ತಪ್ಪಾಗಲ್ಲ. ವಾಜಪೇಯಿ ಕಾಲದಲ್ಲಿ ಹಲವು ಮಹತ್ವಪೂರ್ಣ ಯೋಜನೆಗಳು ಜಾರಿಗೆ ಬಂದು, ಭಾರತ ಹೊಸ ದಿಕ್ಕಿನತ್ತ ಕಾಲಿಟ್ಟಿತು. ವಿಶೇಷ ಅಂದರೆ ಸ್ವಾತಂತ್ರ್ಯ ನಂತರ ಭಾರತದ ಪ್ರಧಾನ ಮಂತ್ರಿಗಳಿಗೆ ಅಂಬಾಸಿಡರ್ ಕಾರು ನೀಡಲಾಗಿತ್ತು. ಆದರೆ ವಾಜಪೇಯಿ ಕಾಲದಲ್ಲಿ ಪ್ರಧಾನ ಮಂತ್ರಿಗಳಿಗೆ ಅಂಬಾಸಿಡರ್ ಕಾರಿನ ಬದಲು   BMW 7 ಸೀರಿಸ್ ಕಾರಿಗೆ ಬದಲಾಯಿಸಲಾಯಿತು.

ವಾಜಪೇಯಿ ಕಾಲದಲ್ಲಿ ಪ್ರಧಾನಿಗೆ  BMW 7 ಸೀರಿಸ್ ಕಾರಾಗಿ ಬದಲಾಯಿಸಲು ಒಂದು ಮಹತ್ವದ ಕಾರಣವಿದೆ. 2001ರಲ್ಲಿ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಿಸಿಕೊಳ್ಳೋ ದೆಹಲಿಯ ಸಂಸತಿನ ಮೇಲೆ ಉಗ್ರರ ದಾಳಿಯಾಗಿತ್ತು. ಸಂಸತ್ ದಾಳಿಯಲ್ಲಿ ಭದ್ರತಾ ಪಡೆ, ಪೊಲೀಸ್, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಓಟ್ಟು 14 ಮಂದಿ ಸಾವನ್ನಪ್ಪಿದ್ದರು. ಈ ದಾಳಿ ಬಳಿಕ ಪ್ರಧಾನಿಯ ಕಾರನ್ನ ಅಂಬಾಸಿಡರ್‌ನಿಂದ ಸುರಕ್ಷತೆಗಾಗಿ  BMW 7 ಸೀರಿಸ್ ಕಾರಿಗೆ ಬದಲಾಯಿಸಲಾಯಿತು. 

2002ರಲ್ಲಿ ಕೇಂದ್ರ ಸರ್ಕಾರ BMW 7 ಸೀರಿಸ್ ಕಾರನ್ನ ತರಿಸಿಕೊಂಡಿತು. ಈ ಕಾರು ಬುಲೆಟ್ ಪ್ರೂಫ್, ಬಾಂಬ್ ಬ್ಲಾಸ್ಟ್ ಪ್ರೊಟೆಕ್ಷನ್ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನ ಹೊಂದಿದೆ.  6.7 ಸೆಕೆಂಡ್‌ನಲ್ಲಿ ಈ ಕಾರು 0 ಯಿಂದ 100 ಕೀಮಿ ತಲುಪುತ್ತದೆ.

2002ರಲ್ಲಿ ಕೇಂದ್ರ ಸರ್ಕಾರ ಖರೀದಿಸಿದ ಈ ಕಾರಿನ ಬೆಲೆ 5 ಕೋಟಿ ರೂಪಾಯಿ. ವಾಜಪೇಯಿ ಬಳಿಕ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್, ಹಾಲಿ ಪ್ರಧಾನಿ ನರೇಂದ್ರ ಮೋದಿ ಇದೇ ಕಾರನ್ನ ಬಳಸುತ್ತಿದ್ದಾರೆ. ಅವಧಿ ಬಳಿಕ ಮಾಜಿ ಪ್ರಧಾನಿ ವಾಜಪೇಯಿ   BMW 7 ಸೀರಿಸ್ ಕಾರಿನಿಂದ ಮತ್ತೆ ಅಂಬಾಸಿಡರ್ ಕಾರಿನಲ್ಲೇ ಓಡಾಡುತ್ತಿದ್ದರು.  

click me!