HPಯಿಂದ 3 ಹೊಸ ಮಾದರಿಯ ಪ್ರಿಂಟರ್; ಮೊಬೈಲ್‌ನಿಂದಲೇ ಎಲ್ಲಾ ಕಂಟ್ರೋಲ್!

By Web Desk  |  First Published Jun 13, 2019, 10:29 PM IST

ವಿದ್ಯಾರ್ಥಿಗಳಾಗಿರಲಿ, ಶಾಲಾ-ಕಾಲೇಜುಗಳಾಗಿರಲಿ ಅಥವಾ ಯಾವುದೇ ವ್ಯಾಪಾರ ವಹಿವಾಟುಗಳಾಗಿರಲಿ, ಪ್ರಿಂಟರ್‌ಗಳು ಅವಿಭಾಜ್ಯ ಅಂಗ. ಬದಲಾಗುತ್ತಿರುವ ಆದ್ಯತೆ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಪ್ರಿಂಟರ್‌ಗಳು ಕೂಡಾ ಬದಲಾಗುತ್ತಿವೆ. HP ಹೊರತಂದಿರುವ ಹೊಸ ಪೀಳಿಗೆಯ ಹೊಸ ಪ್ರಿಂಟರ್‌ಗಳ ಸಣ್ಣ ಪರಿಚಯ ಇಲ್ಲಿದೆ.  
 


ಜನರ ಬದಲಾಗುತ್ತಿರುವ ಅವಶ್ಯಕತೆಗಳಿಗೆ ತಕ್ಕಂತೆ, ಇಲೆಕ್ಟ್ರಾನಿಕ್ ಲೋಕದ ದಿಗ್ಗಜ HP ಕಂಪನಿಯು ಹೊಸ ಪ್ರಿಂಟರ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.

ಕಚೇರಿ ಕೆಲಸಗಳಿಗೆ ಇನ್ನಷ್ಟು ವೇಗ ಮತ್ತು ಗುಣಮಟ್ಟ ತುಂಬುವ ನಿಟ್ಟಿನಲ್ಲಿ, HP Laser 108 Printer Series, HP Laser MFP 136 Series ಮತ್ತು HP Laser MFP 138fnw ಎಂಬ ಮೂರು ವಿಧದ ಪ್ರಿಂಟರ್‌ಗಳನ್ನು ಈಗ ಪರಿಚಯಿಸಿದೆ.

Tap to resize

Latest Videos

undefined

ಈ ಪ್ರಿಂಟರ್‌ಗಳು ಹೆಚ್ಚಿನ ಮುದ್ರಣ ವೇಗ ಹೊಂದಿವೆಯಲ್ಲದೇ, WiFi Direct ನಂತಹ ಮೊಬೈಲ್ ಪ್ರಿಟಿಂಗ್ ಫೀಚರ್‌ಗಳನ್ನು ಒಳಗೊಂಡಿರುವುದು ಪ್ಲಸ್ ಪಾಯಿಂಟ್.  

ಇದನ್ನೂ ಓದಿ | ಮಳೆಗಾಲದಲ್ಲಿ ನಿಮ್ಮ ಗ್ಯಾಜೆಟ್‌ಗಳ ಸುರಕ್ಷತೆಗೆ ಹೀಗ್ ಮಾಡಿ!

HP Laser 108 ಮಾಡೆಲ್ ಏಕೋದ್ದೇಶ ಪ್ರಿಂಟರ್ ಆಗಿದ್ದರೆ ಇನ್ನುಳಿದವು ವಿವಿಧೋದ್ದೇಶ ಸಾಧನಗಳಾಗಿವೆ. ಮೊಬೈಲ್ ಕೇಂದ್ರಿತ ಕಾರ್ಯಶೈಲಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಈ ಪ್ರಿಂಟರ್‌ಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ ಎಂಬುವುದು ಕಂಪನಿಯ ಭರವಸೆ.

ಸಣ್ಣ ಮತ್ತು ಮಧ್ಯಮ  ವ್ಯಾಣಿಜ್ಯ ಸಂಸ್ಥೆಗಳಿಗೆ ಹೇಳಿ ಮಾಡಿಸಿದ ಈ ಪ್ರಿಂಟರ್‌ಗಳು, ಸ್ಕ್ಯಾನಿಂಗ್ ಮತ್ತು ಕಾಪಿಯಿಂಗ್‌ಗೂ ಕೂಡಾ ಸೈ ಆಗಿವೆ.

WiFi Direct ತಂತ್ರಜ್ಞಾನ ಹೊಂದಿರುವ ಈ ಪ್ರಿಂಟರ್‌ಗಳನ್ನು ಮೊಬೈಲ್‌ನಲ್ಲಿ HP Smart App ಇನ್ಸ್ಟಾಲ್ ಮಾಡುವ  ಮೂಲಕ ಪ್ರಿಂಟಿಂಗ್, ಸ್ಕ್ಯಾನಿಂಗ್ ಮತ್ತು ಕಾಪಿಯಿಂಗ್ ಉದ್ದೇಶಕ್ಕಾಗಿ ಬಳಸಬಹುದು. ಬಳಿಕ ಅವುಗಳನ್ನು ಈ ಮೇಲ್/ ಕ್ಲೌಡ್ ಮೂಲಕ ಇತರರೊಂದಿಗೆ ಶೇರ್ ಕೂಡಾ ಮಾಡಿಕೊಳ್ಳಬಹುದು. ಇನ್ನೊಂದು ವಿಶೇಷವೆಂದರೆ, ಇಂಟರ್ನೆಟ್ ನೆಟ್ವರ್ಕ್ ಇಲ್ಲದಿದ್ದರೂ ಈ ಮೇಲಿನ ವ್ಯವಸ್ಥೆ ಕೆಲಸ ಮಾಡುತ್ತದೆ!

ಬೆಲೆ ಮತ್ತು ಲಭ್ಯತೆ:

HP Laser 108 Printer ಸೀರಿಸ್ ಬೆಲೆ ₹10960 ರಿಂದ ₹12,390 ಆಗಿದ್ದರೆ, HP Laser MFP 136 ಸೀರಿಸ್ ಮತ್ತು HP Laser MFP 138 fnw ಬೆಲೆ ₹16,560 ರಿಂದ ₹20,482 ಆಗಿದೆ.

ಈ ಎಲ್ಲಾ ಹೊಸ ಮಾಡೆಲ್‌ಗಳು ಎಲ್ಲಾ HP ಸ್ಟೋರ್ ಹಾಗೂ ಪ್ರಮುಖ ಇಲೆಕ್ಟ್ರಾನಿಕ್ ಸ್ಟೋರ್‌ಗಳಲ್ಲಿ ಲಭ್ಯವಿದೆ

click me!