ತಂತ್ರಜ್ಞಾನವು ಎಲ್ಲ ಸೇವೆಗಳನ್ನು ಬೆರಳ ತುದಿಗೆ ತಂದು ನಿಲ್ಲಿಸಿದೆ. ಪ್ರೈಮ್ ಪ್ಲಸ್ ಮಾಸ್ಟರ್ ರೂಮ್ ಕಂಟ್ರೋಲ್ ಮೂಲಕ ನೀವು ಕೂತಿರುವ ಸ್ಥಳದಿಂದಲೇ ನಿಯಂತ್ರಿಸಬಹುದು
ಟಿ.ವಿ ನೋಡುತ್ತಿರುತ್ತೀವಿ. ಫ್ಯಾನ್ ಗಾಳಿಗೆ ಚಳಿಯಾಗುತ್ತಿರುತ್ತೆ. ಎದ್ದು ಸ್ವಿಚ್ ಆಫ್ ಮಾಡಲು ಆಲಸ್ಯ ಬಿಡುತ್ತಿಲ್ಲ. ಲೈಟ್ ಆಫ್ ಮಾಡಲು ಮತ್ತೊಮ್ಮೆ ಏಳ್ಬೇಕು. ನೆಮ್ಮದಿಯಾಗಿ ಕೂರಲು ಇರುವ ಇಂಥ ವಿಘ್ನಗಳನ್ನೆಲ್ಲ ನಾಶ ಮಾಡುವ ಹೊಸ ಟೆಕ್ನಾಲಜಿ ಬಂದಿದೆ.
ಹೋಗರ್ ಕಂಟ್ರೋಲ್ಸ್ ಸಿದ್ಧಪಡಿಸಿರುವ ಈ ಸಾಧನದ ಹೆಸರು ಪ್ರೈಮ್ ಪ್ಲಸ್ ಮಾಸ್ಟರ್ ರೂಮ್ ಕಂಟ್ರೋಲ್. ಇದೊಂದು ಸ್ಮಾರ್ಟ್ ಟೆಕ್ನಾಲಜಿ. ಮನೆಯಾದ್ಯಂತ ಇರುವ ಎಲ್ಲ ವಿದ್ಯುತ್ ಉಪಕರಣಗಳನ್ನೂ ಈ ಒಂದು ಸಾಧನದಿಂದ ನಿಯಂತ್ರಿಸಬಹುದು.
ಇದನ್ನೂ ಓದಿ | ಫೋಟೋ ಅಪ್ಲೋಡ್ ಮಾಡುವ ಮೊಬೈಲ್ ಬಳಕೆದಾರರ ವೈಯುಕ್ತಿಕ ಮಾಹಿತಿ ಲೀಕ್!
ಇದನ್ನು ಸ್ಮಾರ್ಟ್‌ಫೋನ್ ಹಾಗೂ ಧ್ವನಿಯ ಮೂಲಕವೂ ನಿಯಂತ್ರಿಸಬಹುದು. ಇದರ ಬೆಲೆ 8500 ರಿಂದ ಆರಂಭವಾಗುತ್ತದೆ.