AK-47 ಗನ್ ಕಂಪೆನಿಯಿಂದ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ

By Web DeskFirst Published Aug 28, 2018, 4:43 PM IST
Highlights

AK 47 ಗನ್ ಕಂಪೆನಿ ಇದೀಗ ಗನ್ ಮಾರಾಟದ ಜೊತೆಗೆ ಎಲೆಕ್ಟ್ರಿಕಲ್  ವಾಹನ ತಯಾರಿಕೆಗೆ ಮುಂದಾಗಿದೆ. ವಿಶ್ವ ಮಹಾಯುದ್ಧದಿಂದಲೂ ವಿಶ್ವಕ್ಕೆ ಗನ್ ಮಾರಾಟ ಮಾಡೋ ಸಂಸ್ಥ ಇದೀಗ ಅತ್ಯಾಕರ್ಷಕ ಎಲೆಕ್ಟ್ರಿಕಲ್ ಬೈಕ್ ಅನಾವರಣಗೊಳಿಸಿದೆ. ಇಲ್ಲಿದೆ ನೂನತ ಎಲೆಕ್ಟ್ರಿಕಲ್ ಬೈಕ್ ವಿವರ.

ಮಾಸ್ಕೋ(ಆ.28): ರಷ್ಯಾದ ಕಲಶಿನ್ಕೋವ್ ಕಂಪೆನಿ ಮಶಿನ್ ಗನ್‌ಗಳ ತಯಾರಿಕಾ ಕಂಪೆನಿ. ಇವರ ಜನಪ್ರಿಯ ಗನ್ ಎಕೆ-47 ಈಗಲೂ ಹೆಚ್ಚು ಮಾರಾಟವಾಗುತ್ತಿರುವ ಗನ್. ಇದೀಗ ಕಲಶಿನ್ಕೋವ್ ಕಂಪೆನಿ ಎಲೆಕ್ಟ್ರಿಕಲ್ ವಾಹನಗಳ ತಯಾರಿಕೆಗೆ ಮುಂದಾಗಿದೆ. 

ಇತ್ತೀಚೆಗಷ್ಟೆ ಎಲೆಕ್ಟ್ರಿಕಲ್ ಕಾರು ಅನಾವರಣಗೊಳಿಸಿದ ಕಲಶಿನ್ಕೋವ್ ಇದೀಗ ಎಲೆಕ್ಟ್ರಿಕಲ್ ಬೈಕ್ ಅನಾವರಣಗೊಳಿಸೋ ಮೂಲಕ ಎಲೆಕ್ಟ್ರಿಕಲ್ ಬೈಕ್ ಕಂಪೆನಿಗಳಿಗೆ ಭಾರಿ ಪೈಪೋಟಿ ನೀಡಿದೆ.

AK 47 ಗನ್ ತಯಾರಿಸುತ್ತಿದ್ದ ಕಂಪೆನಿ ಇದೀಗ ಪ್ರಸಕ್ತ ಮಾರುಟಕ್ಕೆಗೆ ಅನುಗುಣವಾಗಿ ಎಲೆಕ್ಟ್ರಿಕಲ್ ವಾಹನಗಳನ್ನ ಪೂರೈಸಲು ನಿರ್ಧರಿಸಿದೆ. ಇದೀಗ ಅನಾವರಣಗೊಳಿಸಿರುವ  ನೂತನ ಎಲೆಕ್ಟ್ರಿಕಲ್ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 150 ಕೀಮಿ ಪ್ರಯಾಣಿಸಬಹುದಾಗಿದೆ.

ನೂತನ ಎಲೆಕ್ಟ್ರಿಕಲ್ ಬೈಕ್ ಗರಿಷ್ಠ ವೇಗಿ 90 ಕೀಮಿ. ಲೀಥಿಯಂ ಬ್ಯಾಟರಿ ಅಳವಡಿಸಿರುವ ಈ ಬೈಕ್ ಹೆಚ್ಚು ಪವರ್‌ಫುಲ್ ಹಾಗೂ  ಬಲಿಷ್ಠವಾಗಿದೆ.  ಆದರೆ ಸದ್ಯ ಅನಾವರಣಗೊಳಿರುವ ಎಲೆಕ್ಟ್ರಿಕಲ್ ಬೈಕ್ ಮಿಲಿಟರಿ ಸೈನ್ಯಕ್ಕೆ ಮಾತ್ರ ತಯಾರಿಸಲಾಗಿದೆ. 

ಇದನ್ನೂ ಓದಿ: AK-47 ಮಶಿನ್ ಗನ್ ಕಂಪೆನಿಯಿಂದ ಎಲೆಕ್ಟ್ರಿಕಲ್ ಕಾರು ಬಿಡುಗಡೆ

click me!