ಕಂಪನಿಯ ಪುನಾರಚನೆಯ ಭಾಗವಾಗಿ, ಸುಮಾರು 150 ಎಂದು ಉದ್ಯೋಗಿಗಳ ವಜಾಗೊಳಿಸಲಾಗಿದೆ ಎಂದು ಮೀಶೋ ವಕ್ತಾರರು ದೃಢಪಡಿಸಿದ್ದಾರೆ
ಫೇಸ್‌ಬುಕ್ ಬೆಂಬಲಿತ ಇ-ಕಾಮರ್ಸ್ ಸಂಸ್ಥೆ ಮೀಶೋ (Meesho) ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಉದ್ಯೋಗಿಗಳು ಕಂಪನಿಯ ದಿನಸಿ ವ್ಯಾಪಾರದ (Grocery Business) ಭಾಗವಾಗಿದ್ದರು, ಇದನ್ನು ಕಳೆದ ವಾರ ಮೀಶೋ ಸೂಪರ್‌ಸ್ಟೋರ್‌ಗೆ ಮರುನಾಮಕರಣ ಮಾಡಲಾಗಿತ್ತು. ಪುನಾರಚನೆ ಪ್ರಕ್ರಿಯೆಯಲ್ಲಿ, ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ತನ್ನ ಕಿರಾಣಿ ವಿಭಾಗವನ್ನು ಮುಖ್ಯ ಶಾಪಿಂಗ್ ಅಪ್ಲಿಕೇಶನ್‌ಗೆ ಸಂಯೋಜಿಸಿದ್ದು, ಇದು ಕೆಲವು "ರಿಡಂಡನ್ಸಿಗಳಿಗೆ" (ಹೆಚ್ಚಿನ ಕೆಲಸ ಲಭ್ಯವಿಲ್ಲದ ಕಾರಣ ಕಂಪನಿಯಲ್ಲಿ ಉದ್ಯೋಗಾವಕಾಶ ಇಲ್ಲದ ಸ್ಥಿತಿ) ಕಾರಣವಾಯಿತು ಎಂದು ಕಂಪನಿ ಹೇಳಿದೆ.
ಪುನಾರಚನೆಯ ಭಾಗವಾಗಿ, ಪ್ರಭಾವಿತ ಉದ್ಯೋಗಿಗಳ ಸಂಖ್ಯೆ ಸುಮಾರು 150 ಎಂದು ಮೀಶೋ ವಕ್ತಾರ ದೃಢಪಡಿಸಿದ್ದಾರೆ. ಈ ಎಲ್ಲಾ ಉದ್ಯೋಗಿಗಳಿಗೆ ಸೆವೆರೆನ್ಸ್ ಪ್ಯಾಕೇಜ್‌ಗಳು ಮತ್ತು ಔಟ್‌ಪ್ಲೇಸ್‌ಮೆಂಟ್ ಸಹಾಯವನ್ನು ನೀಡಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ. ಸೆವೆರೆನ್ಸ್ ವೇತನವು ವಿವಿಧ ಕಾರಣಗಳಿಂದ ಕಂಪನಿಯನ್ನು ತೊರೆಯುವ ಸಮಯದಲ್ಲಿ ಉದ್ಯೋಗದಾತರಿಂದ ಹಣದ ರೂಪದಲ್ಲಿ ಪಾವತಿಸುವ ಪರಿಹಾರ ಅಥವಾ ಪ್ರಯೋಜನವಾಗಿದೆ.
ಇದನ್ನೂ ಓದಿ: Covid 19 Spike: ಐಫೋನ್ ತಯಾರಕ ಪೆಗಾಟ್ರಾನ್ ಸೇರಿ ಚೀನಾದಲ್ಲಿ 150ಕ್ಕೂ ಹೆಚ್ಚು ಕಂಪನಿ ಕಾರ್ಯಾಚರಣೆ ಸ್ಥಗಿತ
"ನಾವು ಏಕೀಕರಣದ ಹಾದಿಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ನೋಡುತ್ತಿರುವಾಗ, ಮೀಶೋ ಸೂಪರ್‌ಸ್ಟೋರ್‌ನಲ್ಲಿನ ಆರು ತಿಂಗಳ ಒಪ್ಪಂದಗಳ ಮೇಲೆ ಸಣ್ಣ ಸಂಖ್ಯೆಯ ಪೂರ್ಣ-ಸಮಯದ ಉದ್ಯೋಗಗಳು ಮತ್ತು ಕೆಲವು ಮೂರನೇ ವ್ಯಕ್ತಿಯ ಸ್ಥಾನಗಳನ್ನು, ಮುಖ್ಯ ವ್ಯವಹಾರದೊಂದಿಗಿನ ಪುನರಾವರ್ತನೆಗಳನ್ನು ತೆಗೆದುಹಾಕಲು ಮರು ಮೌಲ್ಯಮಾಪನ ಮಾಡಲಾಯಿತು" ಎಂದು ಕಂಪನಿಯು ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
"ಈ ಪುನಾರಚನೆಯಿಂದ ಪ್ರಭಾವಿತರಾದವರನ್ನು ಬೆಂಬಲಿಸಲು, ಕಂಪನಿಯ ಹೊರಗೆ ಹೊಸ ಅವಕಾಶಗಳನ್ನು ಪಡೆಯಲು ಅವರಿಗೆ ಸಹಾಯ ಮಾಡಲು ಮೀಶೋ ಸೆವೆರೆನ್ಸ್ ಪ್ಯಾಕೇಜ್‌ಗಳು ಮತ್ತು ಔಟ್‌ಪ್ಲೇಸ್‌ಮೆಂಟ್ ಸಹಾಯವನ್ನು ನೀಡುತ್ತಿದೆ. ಪುನರಾವರ್ತನೆಗಳು ಕೋರ್ ಮೀಶೋ ಮಾರುಕಟ್ಟೆ ವ್ಯಾಪಾರದಲ್ಲಿ ಯಾವುದೇ ಸ್ಥಾನಗಳ ಮೇಲೆ ಪರಿಣಾಮ ಬೀರುವುದಿಲ್ಲ, ಅಲ್ಲಿ ನಾವು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತೇವೆ ಮತ್ತು ಬೆಳೆಯುತ್ತೇವೆ, ”ಎಂದು ಕಂಪನಿ ತಿಳಿಸಿದೆ.
ದೇಶಾದ್ಯಂತ ವಿಸ್ತರಣೆ: ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ಆರು ರಾಜ್ಯಗಳಿಗೆ ತನ್ನ ದಿನಸಿ ವ್ಯಾಪಾರವನ್ನು ವಿಸ್ತರಿಸಿದೆ ಎಂದು ಕಂಪನಿ ಹೇಳಿದೆ. 2022 ರ ಅಂತ್ಯದ ವೇಳೆಗೆ ಕಿರಾಣಿ ವ್ಯಾಪಾರವನ್ನು ಇನ್ನೂ 12 ರಾಜ್ಯಗಳಿಗೆ ವಿಸ್ತರಿಸಲು ಇದು ಯೋಜಿಸಿದೆ. "ಕಂಪನಿಯ 100 ಮಿಲಿಯನ್+ ಮೀಶೋ ಬಳಕೆದಾರರು ಈಗ ಏಕೀಕರಣದ ಮೂಲಕ ಒಂದೇ ವೇದಿಕೆಯಲ್ಲಿ 36+ ವಿಭಾಗಗಳಲ್ಲಿ 87 ಮಿಲಿಯನ್ ಸಕ್ರಿಯ ಉತ್ಪನ್ನ ಪಟ್ಟಿಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ," ಎಂದು ಕಂಪನಿಯು ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಶಾಓಮಿ ಅವ್ಯವಹಾರ ತನಿಖೆ: ಗ್ಲೋಬಲ್ ಉಪಾಧ್ಯಕ್ಷ ಮನು ಕುಮಾರ್ ಜೈನ್‌ಗೆ ED ಸಮನ್ಸ್ ?
ಒಟ್ಟಾರೆಯಾಗಿ, ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯು ಪ್ರಸ್ತುತ ವೆಚ್ಚದ ಪುನಾರಚನೆ ಯೋಜನೆಗಳೊಂದಿಗೆ ಉದ್ಯೋಗಿಗಳನ್ನು ವಜಾಗೊಳಿಸುವಿಕೆಗೆ ಸಾಕ್ಷಿಯಾಗಿದೆ. ಕಳೆದ ವಾರವಷ್ಟೇ, ಎಡ್-ಟೆಕ್ ಸ್ಟಾರ್ಟ್ಅಪ್ ಅನಾಕಾಡೆಮಿಯು ಕಾರ್ಯಕ್ಷಮತೆಯ ಕೊರತೆ ಮತ್ತು ರಿಡಂಡನ್ಸಿಯಿಂದಾಗಿ 600 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಒಟ್ಟು ಉದ್ಯೋಗಿಗಳ ಸುಮಾರು 10 ಪ್ರತಿಶತದಷ್ಟಾಗಿದೆ. ಈ ಉದ್ಯೋಗಿಗಳು ಪ್ರಾಥಮಿಕವಾಗಿ ಗುತ್ತಿಗೆ ಕಾರ್ಮಿಕರು ಮತ್ತು ಶಿಕ್ಷಕರಾಗಿದ್ದರು.