ಈ ಅಪಾಯಕಾರಿ ಕೊರಿಯರ್ ಡೆಲಿವರಿ ಮೇಸೆಜ್‌ಗಳನ್ನು ಅಪ್ಪಿತಪ್ಪಿಯೂ ಓಪನ್‌ ಮಾಡ್ಬೇಡಿ!

By Suvarna News  |  First Published Jan 29, 2022, 3:54 PM IST

ಫೆಡ್‌ಎಕ್ಸ್ (FedEx) ಮತ್ತು ಇತರ ಕಂಪನಿಗಳಿಂದ ಕೊರಿಯರ್ ಡೆಲಿವರಿ ಟ್ರ್ಯಾಕಿಂಗ್ ವಿನಂತಿಯಂತೆ ಕಂಡುಬರುವ ನಕಲಿ ಎಸ್‌ಎಮ್‌ಎಸ್ (SMS) ಮತ್ತು ಇಮೇಲ್‌ಗಳನ್ನು ಕಳುಹಿಸಿ ವಂಚಿಸುವ ಹೊಸ ಸ್ಕ್ಯಾಮ್‌ ಈಗ ಬೆಳಕಿಗೆ ಬಂದಿದೆ.


Tech Desk: ಇಂಟರ್‌ನೆಟ್ ಬಳಕೆ ಹೆಚ್ಚಾದಂತೆಲ್ಲಾ ಇದೇ ಇಂಟರ್‌ನೆಟ್ ಬಳಸಿ ಜನರಿಗೆ ಮೋಸ ಮಾಡುವ ವಂಚಕರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅಂತರ್ಜಾಲದಲ್ಲಿ ಪ್ರತಿ ದಿನ ಒಂದಿಲ್ಲೊಂದು ಹೊಸ ಸ್ಕ್ಯಾಮ್‌ ಬೆಳಕಿಗೆ ಬರುತ್ತದೆ. ಈಗ ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯಲು ಸ್ಕ್ಯಾಮರ್‌ಗಳು  ಹೊಸ ವಿಧಾನವನ್ನು ಬಳಸುತ್ತಿದ್ದಾರೆ.  ಫೆಡ್‌ಎಕ್ಸ್ (FedEx) ಮತ್ತು ಇತರ ಕಂಪನಿಗಳಿಂದ ಕೊರಿಯರ್ ಡೆಲಿವರಿ ಟ್ರ್ಯಾಕಿಂಗ್ ವಿನಂತಿಯಂತೆ ಕಂಡುಬರುವ ನಕಲಿ ಎಸ್‌ಎಮ್‌ಎಸ್ (SMS) ಮತ್ತು ಇಮೇಲ್‌ಗಳನ್ನು ಕಳುಹಿಸಿ ವಂಚಿಸುವ ಹೊಸ ಸ್ಕ್ಯಾಮ್‌ ಈಗ ಬೆಳಕಿಗೆ ಬಂದಿದೆ. ಮೇಸೇಜ್‌ ಸ್ವೀಕರಿಸುವವರಲ್ಲಿ ನಂಬಿಕೆ ಮೂಡಿಸಲು ಎಸ್‌ಎಮ್‌ಎಸ್ ಅಥವಾ ಇಮೇಲನ್ನು ಕಳುಹಿಸುವಾಗ ಸ್ಕ್ಯಾಮರ್‌ಗಳು ಬಳಕೆದಾರರ ನಿಜವಾದ ಹೆಸರನ್ನು ಕೂಡ ಸೇರಿಸುತ್ತಿದ್ದಾರೆ. 

ಉದಾಹರಣೆಗೆ, Hi, Nikhil, your FedEx package with tracking code IC-3498-8391-PJ89 is waiting for you to set delivery preferences <URL>" ಅಥವಾ Dear Customer,7348 is your One Time Password (OTP) for the Tracking page Please enter the OTP to proceed. Regards ಎಂಬ  ನಕಲಿ ಸಂದೇಶವನ್ನು ನೀವು ಸ್ವೀಕರಿಸಬಹುದು.  ಸಂದೇಶದಲ್ಲಿ ನೀಡಲಾಗಿರುವಮ ಯುಆರ್‌ಎಲ್ (URL) ಅನ್ನು ಕ್ಲಿಕ್ ಮಾಡಿದಾಗ, ನಿಮ್ಮ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕೇಳುವ ದುರುದ್ದೇಶಪೂರಿತ ವೆಬ್‌ಸೈಟ್‌ಗೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ.

Latest Videos

ಇದನ್ನೂ ಓದಿ: ATM Safety Tips : ಎಟಿಎಂ ಬಳಸುವ ಮುನ್ನ ಹಸಿರು ಲೈಟ್ ಬಗ್ಗೆ ಗಮನವಿರಲಿ!

ಈ ವೈಯಕ್ತಿಕ ಮಾಹಿತಿಯು ಕದಿಯಲ್ಪಟ್ಟಾಗ ಆಕ್ರಮಣಕಾರರು ಯಾವುದೇ ಕ್ಲಾಸಿಕ್ ಫಿಶಿಂಗ್ ದಾಳಿಯಂತೆ ( Classic Phishing Attack) ನೀವು ಹಂಚಿಕೊಂಡಿರುವ ವಿವರಗಳನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯಲು ಪ್ರಯತ್ನಿಸುತ್ತಾರೆ.

ಈ ಬೆನ್ನಲ್ಲೇ FedEx ಜನರಿಗೆ ವಿಶೇಷ ಮಾಹಿತಿ ನೀಡಿದ್ದು "FedEx ಇಮೇಲ್ ಅಥವಾ ಮೇಸೆಜ್‌ ಮೂಲಕ, ಸಾಗಣೆಯಲ್ಲಿ ಅಥವಾ FedEx ಕಸ್ಟಡಿಯಲ್ಲಿರುವ ಸರಕುಗಳಿಗೆ ಪ್ರತಿಯಾಗಿ ಪಾವತಿ ಅಥವಾ ವೈಯಕ್ತಿಕ ಮಾಹಿತಿಯ  ವಿನಂತಿಸುವುದಿಲ್ಲ. ಅನುಮಾನಾಸ್ಪದ ಸಂದೇಶಗಳನ್ನು ತೆರೆಯದೆಯೇ ಡಿಲೀಟ್‌ ಮಾಡಬೇಕು ಮತ್ತು abuse@fedex.comಗೆ ವರದಿ ಮಾಡಬೇಕು" ಎಂದು ಕಂಪನಿ ಎಚ್ಚರಿಸಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿರುತ್ತೇ ಮಾಹಿತಿ:  ಸ್ಕ್ಯಾಮರ್‌ಗಳು ಜನರನ್ನು ವಂಚಿಸಲು FedEx ಬ್ರ್ಯಾಂಡನ್ನು ಬಳಸುತ್ತಿದ್ದಾರೆ. ಆದರೆ FedEx ಮಾತ್ರವಲ್ಲದೇ ಯಾವುದೇ ಕೊರಿಯರ್ ಕಂಪನಿಯು ಕೇವಲ ಎಸ್‌ಎಮ್‌ಎಸ್ ಕಳುಹಿಸುವ ಮೂಲಕ ಪಾವತಿ ಅಥವಾ ಯಾವುದೇ ಇತರ ಸೇವೆಗಳಿಗೆ ವಿನಂತಿಸುವುದಿಲ್ಲ. ಇಂಥಹ ಮೇಸೆಜ್‌ ಸ್ವೀಕರಿಸಿದಾಗ ಸಂದೇಹವಿದ್ದಲ್ಲಿ, ನೀವು ನೋಂದಾಯಿತ ಗ್ರಾಹಕ ಸೇವಾ ಸಂಖ್ಯೆಯೊಂದಿಗೆ ಸಂಪರ್ಕಿಸಬಹುದು ಅಥವಾ ವಿಷಯವನ್ನು ಪರಿಶೀಲಿಸಲು ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಕೂಡ ಮಾಡಬಹುದು.

ಇದನ್ನೂ ಓದಿ: Government Website Hack: ಹೋಟೆಲ್‌ ಐಡಿ ಬಳಸಿ ಸರ್ಕಾರಿ ಹಣಕ್ಕೇ ಕನ್ನ ಹಾಕಿದ ಶ್ರೀಕಿ..!

“ಮೋಸದ ಇಮೇಲ್‌ಗಳು ಆನ್‌ಲೈನ್ ಸ್ಕ್ಯಾಮ್‌ಗಳ ಜನರನ್ಸಾನು ವಂಚಿಸುವ ಸಾಮಾನ್ಯ ಮಾರ್ಗವಾಗಿದೆ. ಅಂತಹ ಇಮೇಲ್‌ಗಳು ಪ್ರತಿಷ್ಠಿತ ಮೂಲದಿಂದ ಬಂದಂತೆ ನಟಿಸುವ ಮೂಲಕ ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತವೆ. ಸೂಕ್ಷ್ಮ ವೈಯಕ್ತಿಕ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳಲು ಅಥವಾ ಪಾವತಿಯನ್ನು ಕಳುಹಿಸಲು ಇದರಲ್ಲಿ ಕೇಳಲಾಗಿರುತ್ತದೆ" ಎಂದು ಫೆಡ್ಎಕ್ಸ್ ಎಚ್ಚರಿಸಿದೆ. 

ಕೆಲವೊಮ್ಮೆ ನೀವು ನಕಲಿ ಕಸ್ಟಮರ್ ಕೇರ್ ಸಂಖ್ಯೆಯಿಂದ ಕರೆಗಳನ್ನು ಕೂಡ ಸ್ವೀಕರಿಸಬಹುದು ಮತ್ತು ನಿಮ್ಮ ವಿಳಾಸದಲ್ಲಿ ಪ್ಯಾಕೇಜ ಡಿಲಿವರಿಗಾಗಿ ಕಾಯುತ್ತಿದೆ ಎಂದು ಹೇಳಿ ವಿತರಣೆಯನ್ನು ಪ್ರಕ್ರಿಯೆಗೊಳಿಸಲು ನೀವು ಸಣ್ಣ ತೆರಿಗೆ ಮೊತ್ತವನ್ನು ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ. ಈ ಮೊತ್ತವು ತುಂಬಾ ಕಡಿಮೆಯಿದ್ದರೂ, ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಕದಿಯುವುದು ಇದರ ಹಿಂದಿನ ನಿಜವಾದ ಉದ್ದೇಶವಾಗಿರಬಹುದು. ಹಾಗಾಗಿ ಇಂಥಹ ಯಾವುದೇ ಮೇಸೆಜ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಜಾಗೃತರಾಗಿರುವುದ ಅತ್ಯವಶ್ಯಕ.

click me!