ಬಾಹ್ಯಾಕಾಶದಲ್ಲಿ ಭಾರತದ ಮತ್ತೊಂದು ಸಾಹಸಕ್ಕೆ ಕ್ಷಣಗಣನೆ

By Suvarna NewsFirst Published Aug 11, 2021, 8:42 PM IST
Highlights

* ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆ ಮಾಡಲು ಮುಂದಾದ  ಭಾರತ
* ಜಿಎಸ್ ಎಲ್ ವಿ-ಎಫ್-10 ಉಡಾವಣೆಗೆ ಕ್ಷಣಗಣನೆ
* ಹತ್ತು ವರ್ಷಗಳ ಕಾಲ ಈ ಉಪಗ್ರಹ ಕೆಲಸ ಮಾಡಲಿದೆ
* ಭೂಮಿಯ ಮೇಲಿನ ವಾತಾವರಣವನ್ನು ಅಧ್ಯಯನ ಮಾಡಲಿದೆ

ಶ್ರೀಹರಿಕೋಟ( ಆ. 11)  ಭಾರತವೂ ಬಾಹ್ಯಾಕಾಶ ಜಗತ್ತಿನಲ್ಲಿ ಮತ್ತೊಂದು ಸಾಧನೆ ಮಾಡಲು ಮುಂದಾಗಿದೆ.  ಭಾರತವು ತನ್ನ ಅತ್ಯಾಧುನಿಕ ಜಿಯೋ-ಇಮೇಜಿಂಗ್ ಉಪಗ್ರಹ ಜಿಎಸ್ ಎಲ್ ವಿ-ಎಫ್ 10/ಇಒಎಸ್-03ಯನ್ನು  ಆ. 12 ಗುರುವಾರ ಬೆಳಗ್ಗೆ 5.43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾಯಿಸಲಿದೆ. 

ಹತ್ತು ವರ್ಷಕಾಲ ಕಕ್ಷೆಯಲ್ಲಿ ಉಪಗ್ರಹ ಸುತ್ತಲಿದೆ.  ರಿಯಲ್ ಟೈಮ್ ಇಮೇಜ್ ಗಳನ್ನು ಕಳಿಸಿಕೊಡುವ ಉದ್ದೇಶದಿಂದ ಉಡಾವಣೆ ಮಾಡಲಾಗುತ್ತಿದೆ.  ಇದಲ್ಲದೆ ಭೂಮಿಯ ಮೇಲೆ ನೈಸರ್ಗಿಕ ಅವಘಡಗಳು ಸಂಭವಿಸಬಹುದಾದ ಸಂದರ್ಭದಲ್ಲಿ ಮುನ್ನೆಚ್ಚರಿಕೆ..ನೀರಿನ ಮೂಲ, ಅರಣ್ಯ  ಈ  ರೀತಿ  ಹಲವು ಅಂಶಗಳನ್ನು ಹೊಸ ಉಪಗ್ರಹ ಮಾನಿಟರ್ ಮಾಡಲಿದೆ.

ಈಗ ಉಡಾವಣೆಯಾಗುತ್ತಿರುವ ಉಪಗ್ರಹದ ಲಾಭಗಳು ಏನು?

ಇಒಎಸ್-03 ಉಪಗ್ರಹವನ್ನು ಜಿಎಸ್ ಎಲ್ ವಿ-ಎಫ್-10ನ್ನು ಹೊತ್ತೊಯ್ಯಲಿದೆ ಎಂದು ಇಸ್ರೊ ತಿಳಿಸಿದೆ. 2 ಸಾವಿರದ 268 ಕೆಜಿ ತೂಕದ ಜಿಎಸ್ ಎಲ್ ವಿ-ಎಫ್ 10 ಇಒಎಸ್ -3, ಜಿಯೋ-ಉಪಗ್ರಹಗಳ ಹೊಸ ಸರಣಿಯ ಭಾಗವಾಗಿದೆ, ಇದು ನಾಗರಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಇಸ್ರೋದ ಜಿಎಸ್‌ಎಲ್‌ವಿ-ಎಫ್ 10 ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಿದೆ. 

ಕಳೆದ ಫೆಬ್ರವರಿ 28 ರಂದು, ಇಸ್ರೋ 18 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಬ್ರೆಜಿಲ್‌ನ ಅಮೆಜೋನಿಯಾ -1 ಉಪಗ್ರಹ ಮತ್ತು ಕೆಲವು ದೇಸಿ ಉಪಗ್ರಹಗಳು ಇದ್ದವು. ಕೊರೋನಾ ನಂತರದ ಕಾಲದಲ್ಲಿ ಬಾಹ್ಯಾಕಾಶ ಚಟುವಟಿಕೆಗಳು ಬಂದ್ ಆಗಿದ್ದವು .

ವಾಸ್ತವದಲ್ಲಿ 2,268 ಕೆಜಿ ತೂಕದ ಜಿಸಾಟ್ -1 ಉಪಗ್ರಹವನ್ನು ಕಳೆದ ವರ್ಷ ಮಾರ್ಚ್ 5ರಂದೇ ಕಕ್ಷೆಗೆ ಕಳುಹಿಸಬೇಕಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಉಪಗ್ರಹ ಉಡಾವಣೆಯನ್ನು ಮುಂದಕ್ಕೆ ಹಾಕಲಾಗಿತ್ತು.

click me!