
ನ್ಯೂಯಾರ್ಕ್(ಮೇ.04): ಟ್ವಿಟರ್ ಅಕೌಂಟ್ ಖಾತೆ ಉಳ್ಳವರು ತಕ್ಷಣವೇ ತಮ್ಮ ಪಾಸ್'ವರ್ಡ್ ಬದಲಿಸಿಕೊಳ್ಳುವಂತೆ ಸಂಸ್ಥೆಯ ತಾಂತ್ರಿಕ ಮುಖ್ಯಾಧಿಕಾರಿ ಪರಾಗ್ ಅಗರ್ವಾಲ್ ತಿಳಿಸಿದ್ದಾರೆ.
ಪಾಸ್'ವರ್ಡ್'ಗೆ ಸಂಬಂಧಿಸಿದ ದೋಷವೊಂದು ಗುರುವಾರ ಪತ್ತೆಯಾದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಈ ರೀತಿ ಆಗಬಾರದಿತ್ತು ಆದರೆ ದೋಷವನ್ನು ಸರಿಪಡಿಸಲಾಗಿದೆ. ನಮ್ಮ ಸಂಸ್ಥೆಯ ಸಿಬ್ಬಂದಿ ಸೂಕ್ತ ನಿರ್ಧಾರ ಕೈಗೊಂಡಿದ್ದು ಪ್ರತಿಯೊಬ್ಬ ಖಾತದಾರರು ತಮ್ಮ ಪಾಸ್ವರ್ಡ್'ಅನ್ನು ಬದಲಿಸಿಕೊಳ್ಳಿ ಎಂದು ಟ್ವಿಟರ್ ಸಿಇಒ ಡೇವಿಡ್ ಕೆನಡಿ ಮನವಿ ಮಾಡಿದ್ದಾರೆ.
ಸುಮಾರು 3 ಕೋಟಿಗೂ ಹೆಚ್ಚು ಟ್ವಿಟರ್ ಖಾತಾದಾರರಿದ್ದು ಬದಲಿಸಿಕೊಳ್ಳಬೇಕಿದೆ. ಒಮ್ಮೆ ಈ ರೀತಿ ಮಾಡಿಕೊಂಡರೆ ಯಾವುದೇ ರೀತಿ ಹ್ಯಾಕಿಂಗ್ ದೋಷಗಳ ತೊಂದರೆ ಉದ್ಬವಿಸುವುದಿಲ್ಲ. ಟ್ವಿಟರ್ ಖಾತದಾರರು ಖಾತೆಯನ್ನು ತೆರೆದ ತಕ್ಷಣ ಪಾಸ್ವರ್ಡ್ ಬದಲಿಸಿಕೊಳ್ಳುವ ಆಯ್ಕೆ ಬರುತ್ತದೆ ನೀವು 2 ರೀತಿಯಲ್ಲಿ ಸೆಟ್ಟಿಂಗ್'ನಲ್ಲಿ ಬದಲಿಸಿಕೊಳ್ಳಬಹುದು. ಮೊದಲನೆಯದು Settings and privacy > Password ಹಾಗೂ 2ನೇ ಆಯ್ಕೆ Settings and privacy > Account ತೆರೆದರೆ ಸೆಕ್ಯುರಿಟಿ ಸಬ್'ಸೆಕ್ಷನ್'ನಲ್ಲಿ Review your login verification methods ಆಯ್ಕೆ ಮಾಡಿಕೊಂಡು ಪಾಸ್ವರ್ಡ್ ಬದಲಿಸಿ Login verification ಮುಖಪುಟಕ್ಕೆ ಬರಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.