
ಬೆಂಗಳೂರು : ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಂಚಲನವನ್ನು ಉಂಟು ಮಾಡಿದ್ದ ರಿಲಾಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡಲು ಹಲವು ಟೆಲಿಕಾಂ ಕಂಪನಿಗಳು ನಿರಂತರವಾಗಿ ಯತ್ನಿಸುತ್ತಲೇ ಇವೆ. ಇದೀಗ ವೊಡಾಫೋನ್ ಕೂಡ ಭರ್ಜರಿ ಆಫರ್’ಗಳನ್ನು ಪರಿಚಯಿಸುತ್ತಿದೆ.
ವೊಡಾಫೋನ್ ತನ್ನ ಹಳೆಯ 349 ರು.ಗೆ ಪ್ರೀಪೇಯ್ಡ್ ಫ್ಲಾನ್’ನ್ನು ಪರಿಷ್ಕರಣೆ ಮಾಡಿದೆ. ಈ ಪ್ಲಾನ್’ನಲ್ಲಿ ಮೊದಲು ಸಿಗುತ್ತಿರುವುದಕ್ಕಿಂದ ಈಗ ಹೆಚ್ಚುವರಿಯಾಗಿ ಪ್ರತಿದಿನ 500 ಎಂಬಿ ಡೇಟಾವನ್ನು ನೀಡಲಾಗುತ್ತಿದೆ. ಈ ಮೊದಲು ಪ್ರತಿದಿನ 2.5 ಜಿಬಿ 3ಜಿ/4ಜಿ ಡೇಟಾವನ್ನು ನೀಡಲಾಗುತ್ತಿತ್ತು. ಇದೀಗ ಇದಕ್ಕೆ ಮತ್ತೆ ಹೆಚ್ಚುವರಿಯಾಗಿ ಎಂಬಿಯನ್ನು ಸೇರಿಸಲಾಗಿದೆ.
ಒಟ್ಟು 28 ದಿನಗಳ ಕಾಲ ಈ ಪ್ಲಾನ್ ಅವಧಿಯಾಗಿದ್ದು, ಒಟ್ಟು 84 ಜಿಬಿ ಡೇಟಾ ಸೌಲಭ್ಯ ಒದಗಿಸಲಾಗುತ್ತಿದೆ. ಅಲ್ಲದೇ ಪ್ರತಿದಿನ ಗ್ರಾಹಕರು 100 ಉಚಿತ ಎಸ್ ಎಂಎಸ್ ಮಾಡುವ ಅವಕಾಶವನ್ನೂ ಕೂಡ ಒದಗಿಸಿದೆ.
ಈ ಮೂಲಕ ವೊಡಾಫೋನ್ ಗ್ರಾಹಕರು ತಮ್ಮ ಹೊಸ ಆಫರ್’ನೊಂದಿಗೆ ಎಂಜಾಯ್ ಮಾಡಬಹುದಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.