1 ದಿನ ಅಂದ್ರೆ 10 ಗಂಟೆ, 1 ವರ್ಷ ಅಂದ್ರೆ 29 ವರ್ಷ: ಶನಿಯ ಕೌತುಕ ತಂದ ಹರ್ಷ!

By Web Desk  |  First Published Jan 20, 2019, 11:01 AM IST

ಹಲವು ಕೌತುಕಗಳ ಆಗರ ಶನಿ ಗ್ರಹ| ಶನಿ ಗ್ರಹದ ದಿನದ ಸಮಯ ಎಷ್ಟು ಗೊತ್ತಾ? ಶನಿ ಗ್ರಹದ ಒಂದು ವರ್ಷ ಭೂಮಿಯ ಎಷ್ಟು ವರ್ಷಕ್ಕೆ ಸಮ?| ಶನಿ ಗ್ರಹದ ರಹಸ್ಯ ಬಯಲುಗೊಳಿಸಿದ ಕ್ಯಾಸಿನಿ ನೌಕೆ| ಶನಿಯ ಕಾಂತೀಯ ಕ್ಷೇತ್ರ ಮತ್ತು ಪರಿಭ್ರಮಣೀಯ ಅಕ್ಷ ಎರಡೂ ಒಂದೇ 


ವಾಷಿಂಗ್ಟನ್(ಜ.20): ನಿಮಗೆಲ್ಲಾ ಕ್ಯಾಸಿನಿ ನೌಕೆ ನೆನಪಿದೆಯಾ?. ಶನಿ ಗ್ರಹಕ್ಕೆ ಡಿಕ್ಕಿ ಹೊಡೆದು ತನ್ನ ಸುದೀರ್ಘ ಅಧ್ಯಯನ ಪ್ರವಾಸವನ್ನು ಅಂತ್ಯಗೊಳಿಸಿದ ನಾಸಾದ ಕ್ಯಾಸಿನಿ ನೌಕೆ, ಆ ಗ್ರಹದ ಹತ್ತು ಹಲವು ರಹಸ್ಯಗಳನ್ನು ಬಹಿರಂಗಗೊಳಿಸಿದೆ. 

ಅದರಂತೆ ಶನಿ ಗ್ರಹದ ದಿನದ ಸಮಯದ ಕುರಿತು ಇದುವರೆಗೂ ವಿಜ್ಞಾನಿಗಳಲ್ಲಿ ಗೊಂದಲವಿತ್ತು. ಆದರೆ ಕ್ಯಾಸಿನಿ ನೌಕೆ ಈ ಗೊಂದಲವನ್ನು ಬಗೆಹರಿಸಿದೆ. ಕ್ಯಾಸಿನಿ ನೌಕೆ ನೀಡಿದ ಮಾಹಿತಿ ಆಧರಿಸಿ ಶನಿ ಗ್ರಹದ ಒಂದು ದಿನದ ಸಮಯ 10 ಗಂಟೆ 33 ನಿಮಿಷ 38 ಸೆಕೆಂಡ್ ಎಂಬುದನ್ನು ಕಂಡು ಹಿಡಿಯಲಾಗಿದೆ.

Latest Videos

undefined

ಅಲ್ಲದೇ ಶನಿಯ ಒಂದು ವರ್ಷ ಭೂಮಿಯ 29 ವರ್ಷಗಳಿಗೆ ಸಮ ಎಂಬುದು ಕೂಡ ಬಹಿರಂಗವಾಗಿದೆ. ಅಂದರೆ ಭೂಮಿ ಸೂರ್ಯನನ್ನು ಒಂದು ಸುತ್ತು ಸುತ್ತಲು 365 ದಿನ(1 ವರ್ಷ) ತೆಗೆದುಕೊಂಡರೆ, ಶನಿ ಗ್ರಹ ಸೂರ್ಯನನ್ನು ಒಂದು ಸುತ್ತು ಸುತ್ತಲು 10585 ದಿನ(29 ವರ್ಷ) ತೆಗೆದುಕೊಳ್ಳುತ್ತದೆ.

ಮತ್ತೊಂದು ಕೌತುಕದ ಸಂಗತಿ ಎಂದರೆ ಶನಿಯ ಕಾಂತೀಯ ಕ್ಷೇತ್ರ ಮತ್ತು ಪರಿಭ್ರಮಣೀಯ ಅಕ್ಷ ಎರಡೂ ಒಂದೇ ಆಗಿದ್ದು, ಇದು ಶನಿ ಗ್ರಹವನ್ನು ಸೌರಮಂಡಲದ ವಿಶೇಷ ಗ್ರಹವನ್ನಾಗಿ ಪರಿವರ್ತಿಸಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

click me!