*2 ವರ್ಷಗಳಿಂದ ಶುಭೋದಯ ಸಂದೇಶ ಸ್ವೀಕರಿಸುತ್ತಿದ್ದ ವ್ಯಕ್ತಿ
*ವಾಟ್ಸಪ್ ಲೊಕೇಶನ್ ಕಳುಹಿಸಿದ ಅಪರಿಚಿತ ಮಹಿಳೆ
*ಲೊಕೇಶನ್ ಆಧರಿಸಿ ಹೋಟೆಲ್‌ಗೆ ಹೋದ ವ್ಯಕ್ತಿಗೆ ಪಂಗನಾಮ
ಬೆಂಗಳೂರು (ನ.7) : ವಾಟ್ಸಾಪ್‌ನಲ್ಲಿ (WhatsApp) 'ಶುಭೋದಯ' ಸಂದೇಶಗಳನ್ನು ಕಳುಹಿಸುತ್ತಿದ್ದ ಅಪರಿಚಿತರನ್ನು ಭೇಟಿಯಾಗಲು ಹೋದ 50 ವರ್ಷದ ವ್ಯಕ್ತಿಯ ಖಾತೆಯಿಂದ 5 ಲಕ್ಷ ರೂ ವರ್ಗಾಯಿಸಿ (Transfer) ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಗೋವಿಂದಪುರ (Govindapur) ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, 50 ವರ್ಷದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಅಪರಿಚಿತ ಮಹಿಳೆಯೊಬ್ಬರಿಂದ 'ಶುಭೋದಯ' ಎಂದು ವಾಟ್ಸಾಪ್‌ನಲ್ಲಿ ಮೆಸೇಜ್‌ಗಳನ್ನು ಪಡೆಯುತ್ತಿದ್ದರು. ಇಲ್ಲಿಯವರೆಗೆ, ಅವರು ಸುಮಾರು 20 ಬಾರಿ ಮೆಸೇಜ್‌ಗಳನ್ನು ಸ್ವೀಕರಿಸಿದ್ದರು.
ಆನ್‌ಲೈನ್ ವಂಚನೆ ನಿಯಂತ್ರಿಸಲು ಭಾರತೀಯ ರೈಲ್ವೇಗೆ ಟ್ರೂಕಾಲರ್ ಸಹಯೋಗ!
ಅಕ್ಟೋಬರ್ 8 ರಂದು ಕೂಡ ವ್ಯಕ್ತಿ ವಾಟ್ಸಾಪ್ ಬಳಕೆದಾರರಿಂದ ಮೆಸೇಜ್ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ವಾಟ್ಸಾಪ್ ಮೆಸೇಜ್‌ನಲ್ಲಿಯೇ ಅಪರಿಚಿತ ಮಹಿಳೆ ತಾವಿರುವ ಸ್ಥಳವನ್ನು ದೂರುದಾರ ವ್ಯಕ್ತಿಗೆ ಕಳುಹಿಸಿದ್ದಾರೆ. ರಾತ್ರಿ ವೀರನಪಾಳ್ಯ ಸಮೀಪದ ಹೊಟೇಲ್‌ಗೆ (Hotel) ಆಕೆಯನ್ನು ನೋಡಲು ವ್ಯಕ್ತಿ ಹೋದಾಗ ಕೋಣೆಯೊಳಗೆ ಒಟ್ಟು ಮೂರು ಮಂದಿ ಇದ್ದುದನ್ನು ಕಂಡು ಆಶ್ಚರ್ಯಚಕಿತರಾದರು ಎಂದು ತಿಳಿದುಬಂದಿದೆ. ನಂತರ ಹೊಟೇಲ್ ಕೋಣೆಯಲ್ಲಿದ್ದ ಮೂವರು ತಮ್ಮನ್ನು ತಾವು ಪೊಲೀಸರು (Police) ಎಂದು ಪರಿಚಯಿಸಿಕೊಂಡಿದ್ದಾರೆ. ಜತಗೆ ವ್ಯಕ್ತಿಯನ್ನು ಡ್ರಗ್ ಪೆಡ್ಲರ್ (Drug pedler) ಎಂದು ಆರೋಪಿಸಿ ಬೆದರಿಸಿದ್ದಾರೆ. ತಕ್ಷಣ ಆ ಮೂವರು, ವ್ಯಕ್ತಿಯ ಕ್ರೆಡಿಟ್ ಕಾರ್ಡ್ (Credit card) ಮತ್ತು ವ್ಯಾಲೆಟ್ (Wallet) ಅನ್ನು ಕಸಿದುಕೊಂಡಿದ್ದಲ್ಲದೇ, ಅವರ ಮೊಬೈಲ್ ಫೋನ್ (Mobile Phone) ಅನ್ನು ಅನ್ಲಾಕ್ (Unlock) ಮಾಡಲು ಒತ್ತಾಯಿಸಿದ್ದಾರೆ
ವಾಟ್ಸಾಪ್ ಮೂಲಕ ಪಾವತಿಸಿದರೆ 51 ರೂ. ಕ್ಯಾಶ್‌ಬ್ಯಾಕ್?
ಸ್ವಲ್ಪ ಸಮಯದ ನಂತರ ಆರೋಪಿಗಳು ಕೊಠಡಿಗೆ ಬೀಗ ಹಾಕಿಕೊಂಡು ಹೋಟೆಲ್‌ನಿಂದ ಹೊರ ಹೋಗಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಹೋಟೆಲ್ ಕೋಣೆಯಿಂದ ತಪ್ಪಿಸಿಕೊಂಡು ಮನೆಗೆ ಬಂದಾಗ ಐದು ಟ್ರಾನ್ಸ್ಯಾಕ್ಷನ್‌ಗಳಲ್ಲಿ (Transactions) ಒಟ್ಟು 3,91,812 ರೂ.ಗಳನ್ನು ತನ್ನ ಖಾತೆಯಿಂದ ವರ್ಗಾವಣೆ ಮಾಡಿರುವುದು ವ್ಯಕ್ತಿಗೆ ತಿಳಿದುಬಂದಿದೆ. ಸ್ವಲ್ಪ ಸಮಯದ ನಂತರ, ಮತ್ತೊಂದು 2 ಲಕ್ಷ ರೂ.ಗಳನ್ನು ಟ್ರಾನ್ಸ್ಯಾಕ್ಷನ್ ಆಗಿರುವ ಬಗ್ಗೆ ವ್ಯಕ್ತಿ ಸಂದೇಶವನ್ನು ಅವರು ಸ್ವೀಕರಿಸಿದ್ದಾರೆ. ದೂರುದಾರರ ಮಾಹಿತಿ ಆಧರಿಸಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ನ.1ರಿಂದ ಈ ಫೋನಲ್ಲಿ What's App ಇರೋಲ್ಲ, ಲಿಸ್ಟಲ್ಲಿ ನೀವು ಬಳಸುತ್ತಿರುವ ಫೋನ್ ಇದೆಯಾ?
ಫೇಸ್‌ಬುಕ್ (Facebook) ಒಡೆತನದ ವಾಟ್ಸಾಪ್ (WhatsApp) ನವೆಂಬರ್ 1ರಿಂದ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಹಳೆಯ ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿರುವ ಆಪಲ್, ಸ್ಯಾಮ್ಸಂಗ್ ಸೇರಿ ಕೆಲವು ಕಂಪನಿಗಳ ಫೋನುಗಳನ್ನು ಬಳಸುತ್ತಿರುವ ಬಳಕೆದಾರರಿಗೆ ಇದರಿಂದ ತೊಂದರೆಯಾಗಲಿದೆ. ತುರ್ತು ಸಂದೇಶ ರವಾನೆಯ ಸಂಹನದಲ್ಲಿ ಕ್ರಾಂತಿಯನ್ನು ಸೃಷ್ಟಿಸಿರುವ ವಾಟ್ಸಾಪ್ (Whatsapp) ಹಲವು ಅಪ್‌ಡೇಟ್‌ಗಳನ್ನು ಮಾಡುವ ಗ್ರಾಹಕರ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೆಯೇ, ಹಳೆಯ ಆಪರೇಟಿಂಗ್ ಸಾಫ್ಟ್‌ವೇರ್‌ಗಳಲ್ಲಿ ವಾಟ್ಸಾಪ್ ಕಾರ್ಯವನ್ನು ನಿಲ್ಲಿಸುತ್ತದೆ. ಅದೇ ರೀತಿ, ನವೆಂಬರ್ 1ರಿಂದ ಆಪಲ್ (Apple), ಸ್ಯಾಮ್ಸಂಗ್ (Samsung) ಸೇರಿದಂತೆ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಈ ಪಟ್ಟಿಯಲ್ಲಿ ನೀವು ಬಳಸುತ್ತಿರುವ ಫೋನ್ ಇದೆಯಾ ಚೆಕ್ ಮಾಡಿಕೊಳ್ಳಿ.
ಸೋಷಿಯಲ್ ಮೀಡಿಯಾ ದೈತ್ಯ ಕಂಪನಿ ಫೇಸ್‌ಬುಕ್ (Facebook) ಒಡೆತನದ ವಾಟ್ಸಾಪ್ ನವೆಂಬರ್ 1ರಿಂದ ಆಂಡ್ರಾಯ್ಡ್ ಒಎಸ್.4.1 ಮತ್ತು ಅದಕ್ಕಿಂತ ಮೇಲ್ಪಟ್ಟ ಹಾಗೂ ಐಒಎಸ್ 10ಕ್ಕಿಂತ ಮೇಲ್ಪಟ್ಟ ಒಎಸ್ ಆವೃತ್ತಿಗಳನ್ನು ಹೊಂದಿರದ ಫೋನುಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿದೆ ಎಂದು ಕೆಲವು ಸುದ್ದಿತಾಣಗಳು ವರದಿ ಮಾಡಿವೆ. ಹಾಗಾಗಿ, ಹಳೆಯ ಫೋನು ಬಳುಸತ್ತಿರುವವರು ಈಗ ಸ್ವಲ್ಪ ವರೀ ಮಾಡಬೇಕಾಗುತ್ತದೆ. ಯಾಕೆಂದರೆ, ಅವರ ಸ್ಮಾರ್ಟ್‌ಫೋನು(Smartphone)ಗಳಲ್ಲಿ ನವೆಂಬರ್ 1ರಿಂದ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಈ ಪಟ್ಟಿಯಲ್ಲಿ ನೀವು ಬಳಸುತ್ತಿರುವ ಫೋನ್ ಇದೆಯಾ ಚೆಕ್ ಮಾಡಿಕೊಳ್ಳಿ