ಭಾರತಕ್ಕೆ ಶೀಘ್ರ ಸ್ಟಾರ್‌ಲಿಂಕ್‌ ಇಂಟರ್ನೆಟ್‌

Published : Mar 12, 2025, 08:52 AM ISTUpdated : Mar 12, 2025, 08:54 AM IST
ಭಾರತಕ್ಕೆ ಶೀಘ್ರ ಸ್ಟಾರ್‌ಲಿಂಕ್‌ ಇಂಟರ್ನೆಟ್‌

ಸಾರಾಂಶ

ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಒದಗಿಸಲು ಏರ್‌ಟೆಲ್ ಮತ್ತು ಸ್ಪೇಸ್‌ಎಕ್ಸ್ ಪಾಲುದಾರಿಕೆ ಮಾಡಿಕೊಂಡಿವೆ. ಈ ಒಪ್ಪಂದದಿಂದ ಸ್ಟಾರ್‌ಲಿಂಕ್‌ನ ಸೇವೆಗಳನ್ನು ಮಾರಾಟ ಮಾಡುವ ಅಧಿಕಾರವನ್ನು ಸ್ಪೇಸ್‌ಎಕ್ಸ್ ಪಡೆಯಲಿದೆ.

ನವದೆಹಲಿ (ಮಾ.12): ಭಾರತದಲ್ಲಿ ಉಪಗ್ರಹ ಆಧರಿತ ವೇಗದ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಸಲುವಾಗಿ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್‌, ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ ಜತೆ ಪಾಲುದಾರಿಕೆಗೆ ಮಾಡಿಕೊಂಡಿರುವುದಾಗಿ ತಿಳಿಸಿದೆ. ಈ ಮೂಲಕ ಭಾರತದಲ್ಲಿ ಶೀಘ್ರ ಸ್ಟಾರ್‌ಲಿಂಕ್‌ ಇಂಟರ್ನೆಟ್‌ ಸೇವೆ ಆರಂಭವಾಗುವ ನಿರೀಕ್ಷೆ ಇದೆ. ಈ ಒಪ್ಪಂದದಿಂದ, ಭಾರತದಲ್ಲಿ ಸ್ಟಾರ್‌ಲಿಂಕ್‌ನ ಉಪಗ್ರಹ ಸಂವಹನ ಆಧಾರಿತ ಸೇವೆಗಳನ್ನು ಮಾರಾಟ ಮಾಡುವ ಅಧಿಕಾರವನ್ನು ಸ್ಪೇಸ್‌ಎಕ್ಸ್ ಪಡೆಯಲಿದೆ. ಇದರಿಂದಾಗಿ, ಏರ್‌ಟೆಲ್‌ ಮತ್ತು ಸ್ಪೇಸ್‌ಎಕ್ಸ್‌ ಜೊತೆಗೂಡಿ, ಸ್ಟಾರ್‌ಲಿಂಕ್‌ ಸೇವೆಗಳನ್ನು ಏರ್‌ಟೆಲ್‌ ಮೂಲಕ ಉದ್ಯಮಿಗಳಿಗೆ, ಸಮುದಾಯ, ಶಾಲೆ, ಆರೋಗ್ಯ ಕೇಂದ್ರಗಳನ್ನು ಪರಸ್ಪರ ಸಂಪರ್ಕಿಸಲು ಸಹಾಯವಾಗುತ್ತದೆ.

ಮುಕೇಶ್ ಅಂಬಾನಿಯನ್ನು ಸೋಲಿಸಿದ ವೊಡಾಫೋನ್; ಇತ್ತ ಏರ್‌ಟೆಲ್‌ಗೂ ಶಾಕ್!

‘ಭಾರತದ ಗ್ರಾಮೀಣ ಪ್ರದೇಶಗಳಲ್ಲಿರುವ ಏರ್‌ಟೆಲ್ ಗ್ರಾಹಕರಿಗೂ ಸ್ಟಾರ್‌ಲಿಂಕ್ ಸೇವೆ ನೀಡಲು ಸ್ಪೇಸ್‌ಎಕ್ಸ್‌ನೊಂದಿಗೆ ಕೆಲಸ ಮಾಡುವುದು ಮಹತ್ವದ ಮೈಲುಗಲ್ಲಾಗಿದ್ದು, ಮುಂದಿನ ಪೀಳಿಗೆಯ ಉಪಗ್ರಹ ಸಂಪರ್ಕಕ್ಕೆ ಕಂಪನಿಯ ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದು ಭಾರತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರಾದ ಗೋಪಾಲ್ ವಿಟ್ಟಲ್ ಹೇಳಿದರು. ಭಾರತದಲ್ಲಿ ಇಂಟರ್ನೆಟ್‌ ಸೇವೆ ಆರಂಭಿಸಲು ಸ್ಟಾರ್‌ಲಿಂಕ್‌ ಬಹುದಿನಗಳಿಂದ ಸರ್ಕಾರದ ಅನುಮತಿಗೆ ಕಾಯುತ್ತಿತ್ತು.

ಇನ್ಮೇಲೆ ಟವರ್ ಇಲ್ಲದೆ ಎಲ್ಲೆಡೆ ಮೊಬೈಲ್ ನೆಟ್‌ವರ್ಕ್ ಸಿಗುತ್ತೆ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ