
ನವದೆಹಲಿ(ಏ. 14): ದೇಶದಲ್ಲಿ ನಡೆಯುತ್ತಿರುವ ಡೇಟಾ ವಾರ್'ನಲ್ಲಿ ಏರ್'ಟೆಲ್ ಮತ್ತೊಂದು ಪ್ರಬಲ ಅಸ್ತ್ರ ಪ್ರಯೋಗಿಸಿದೆ. ರಿಲಾಯನ್ಸ್ ಜಿಯೋದ ಧನ್ ಧನಾ ಧನ್'ಗೆ ಪ್ರತಿಯಾಗಿ ಏರ್'ಟೆಲ್ ತನ್ನ ಗ್ರಾಹಕರಿಗೆ ಸೂಪರ್ ಆಫರ್ ಕೊಟ್ಟಿದೆ. ಕೇವಲ 244 ರೂಪಾಯಿಗೆ ಒಟ್ಟು 70 ಜಿಬಿ ಡೇಟಾ ನೀಡಲಿದೆ. ಹಗಲು-ರಾತ್ರಿ ಎನ್ನದೇ ಯಾವುದೇ ಹೊತ್ತಲ್ಲಾದರೂ ಡೇಟಾ ಬಳಸಬಹುದು. ದಿನಕ್ಕೆ 1 ಜಿಬಿಯಂತೆ 70 ದಿನಗಳ ಕಾಲ ನೀವು ಡೇಟಾ ಸುಗ್ಗಿ ಪಡೆಯಬಹುದು. ಏರ್'ಟೆಲ್'ನಿಂದ ಏರ್'ಟೆಲ್'ಗೆ ದಿನಕ್ಕೆ 300 ನಿಮಿಷಗಳ ಕಾಲ ಉಚಿತವಾಗಿ ಮಾತನಾಡಬಹುದು. ದಿನದಲ್ಲಿ 300 ನಿಮಿಷದ ಗಡಿ ದಾಟಿದರೆ ಪ್ರತೀ ನಿಮಿಷಕ್ಕೆ ಕೇವಲ 10 ಪೈಸೆಯಂತೆಯಂತೆ ಚಾರ್ಜ್ ಆಗುತ್ತದೆ. ಅಂದಹಾಗೆ, ಇದು ಪ್ರೀಪೇಡ್ ಗ್ರಾಹಕರಿಗೆ ಮಾಡಿಸಿರುವ ಏರ್'ಟೆಲ್ ಡೇಟಾ ಸುಗ್ಗಿ.
ಏರ್'ಟೆಲ್ 244 ರೂ. ಪ್ಲಾನ್:
* 70 ದಿನಗಳ ಕಾಲ ದಿನವೊಂದಕ್ಕೆ 1ಜಿಬಿ 4ಜಿ ಡೇಟಾ ಫ್ರೀ.
* ದಿನದ ಯಾವುದೇ ಸಮಯದಲ್ಲಾದರೂ ನೀವು ಡೇಟಾ ಬಳಸಬಹುದು
* ಏರ್'ಟೆಲ್'ನಿಂದ ಏರ್'ಟೆಲ್'ಗೆ ದಿನವೊಂದರಲ್ಲಿ 300 ನಿಮಿಷದವರೆಗೂ ಫ್ರೀ ಕಾಲ್.
* 300 ನಿಮಿಷದ ಗಡಿ ದಾಟಿದರೆ ಪ್ರತೀ ನಿಮಿಷಕ್ಕೆ 10 ಪೈಸೆಯಂತೆ ಚಾರ್ಜ್
ನಿಮ್ಮ ಮೊಬೈಲ್'ನಲ್ಲಿ "ಮೈಏರ್ಟೆಲ್" ಆ್ಯಪ್ ಇದ್ದರೆ ಅದನ್ನು ಓಪನ್ ಮಾಡಿದಾಗ "ಬೆಸ್ಟ್ ಆಫರ್ಸ್ ಫಾರ್ ಯೂ" ವಿಭಾಗದಲ್ಲಿ ಈ ಪ್ಲಾನ್ ಸಿಗುತ್ತದೆ. ಆ್ಯಪ್ ಇಲ್ಲದಿದ್ದರೂ ಪರವಾಗಿಲ್ಲ. ಏರ್'ಟೆಲ್ ವೆಬ್'ಸೈಟ್'ನಲ್ಲೂ ಈ ಆಫರ್ ಪಡೆಯಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.