ಹೊಂಡಾ ಆಕ್ಟೀವಾ ಐ ಸ್ಕೂಟರ್ ಮತ್ತೆ ಬಿಡುಗಡೆಯಾಗಿದೆ. ಈ ಬಾರಿ ಹೊಸ ವಿನ್ಯಾಸ, ಬಣ್ಣ ಹಾಗೂ ಆಕರ್ಷಕ ಬೆಲೆಯಲ್ಲಿ ಆಕ್ಟೀವಾ ಐ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಐ ಸ್ಕೂಟರ್ ಬೆಲೆ ಎಷ್ಟು? ಮೈಲೇಜ್ ಹೇಗಿದೆ? ಇಲ್ಲಿದೆ ವಿವರ.
ಬೆಂಗಳೂರು(ಜು.23): ಭಾರತದ ಜನಪ್ರೀಯ ಸ್ಕೂಟರ್ ಹೊಂಡಾ ಇದೀಗ ನೂತನ ಆಕ್ಟೀವಾ ಐ ಸ್ಕೂಟರ್ ಬಿಡುಗಡೆ ಮಾಡಿದೆ. 2013ರಲ್ಲಿ ಆಕ್ಟೀವಾ ಐ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದೀಗ ಹೊಸ ರೂಪದಲ್ಲಿ ಮತ್ತೆ ಬಿಡುಗಡೆಯಾಗಿದೆ.
ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಿರುವ ಆಕ್ವೀವಾ ಐ ಬೆಲೆ 5010 ರೂಪಾಯಿ(ಎಕ್ಸ್ ಶೋರೂಂ). ನೂತನ ಆಕ್ಟೀವಾ ಐ, 5 ಬಣ್ಣಗಳಲ್ಲಿ ಲಭ್ಯವಿದೆ. ನೂತನ ಆಕ್ಟೀವಾ ಐ ಸ್ಕೂಟರ್ ಫೋರ್ ಇನ್ ಒನ್ ಇಗ್ನಿನೀಶನ್ ಕೀ ಹೊಂದಿದೆ.
109 ಸಿಸಿ ಇಂಜಿನ್ ಹೊಂದಿರು ಆಕ್ಟೀವಾ ಐ, 8 ಹೆಚ್ಪಿ ಹಾಗೂ 9ಎನ್ಎಂ ಟಾರ್ಕ್ಯೂ ಹೊಂದಿದೆ. ಎರಡು ಟ್ಯೂಬ್ಲೆಸ್ ಟೈಯರ್ ಅಳವಡಿಸಲಾಗಿದೆ. ಕಂಪೆನಿ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್ಗೆ 60 ಕೀಲೋ ಮೀಟರ್ ಪ್ರಯಾಣಿಸಲಿದೆ.
ಹಳೇ ಆಕ್ಟೀವಾ ಐ ಹಾಗೂ ನೂತನ ಆಕ್ಟೀವಾ ಐ ಸ್ಕೂಟರ್ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಆದರೆ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಮಹಿಳೆಯರಿಗಾಗಿ ಅತ್ಯಾಕರ್ಷವಾಗಿ ನಿರ್ಮಿಸಲಾಗಿರುವ ಆಕ್ಟೀವಾ ಐ ಇತರ ಸ್ಕೂಟರ್ಗಳಿಗೆ ಪೈಪೋಟಿ ನೀಡಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನು ಓದಿ:ನೂತನ ಹೊಂಡಾ ನವಿ ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?
ಇದನ್ನು ಓದಿ: ಸುಜುಕಿ ಬರ್ಗಮನ್ ಸ್ಕೂಟರ್ ಬಿಡುಗಡೆ-ಆಕ್ಟೀವಾಗೆ ತೀವ್ರ ಪೈಪೋಟಿ!