ಪ್ರತಿಭಾವಂತ ವಿದ್ಯಾರ್ಥಿಗಳಿಗೆ 44 ಮನೆ ಕಟ್ಟಿಸಿಕೊಟ್ಟ ಉಡುಪಿಯ ವಿದ್ಯಾಪೋಷಕ್

By Ravi JanekalFirst Published Aug 29, 2023, 6:00 PM IST
Highlights

ಪ್ರತಿಭಾವಂತ ಬಡ ಮಕ್ಕಳಿಗೆ ವಿದ್ಯೆ ಮತ್ತೆ ಆಸರೆ ನೀಡುವ ಅಪರೂಪದ ಕಾರ್ಯಕ್ರಮವೊಂದು ಉಡುಪಿಯಲ್ಲಿ ನಡೆಯುತ್ತಿದೆ. ಇಂತಹ ನಿಸ್ವಾರ್ಥ ಪ್ರಯತ್ನಗಳಿಂದಲೇ ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಮಹಾದಾನಿಗಳ ನೆರವಿಲ್ಲದೆ, ತಮ್ಮ ಒಡನಾಟದಲ್ಲಿರುವ ಜನರಿಂದಲೇ ಹಣ ಸಂಗ್ರಹ ಮಾಡಿ 44 ಮನೆ ಕಟ್ಟಿಸಿರುವ,  ಸಂಸ್ಥೆಯೊಂದರ ಸಾಹಸಗಾತೆ ಇಲ್ಲಿದೆ ನೋಡಿ.

ಉಡುಪಿ (ಆ.29) : ಪ್ರತಿಭಾವಂತ ಬಡ ಮಕ್ಕಳಿಗೆ ವಿದ್ಯೆ ಮತ್ತೆ ಆಸರೆ ನೀಡುವ ಅಪರೂಪದ ಕಾರ್ಯಕ್ರಮವೊಂದು ಉಡುಪಿಯಲ್ಲಿ ನಡೆಯುತ್ತಿದೆ. ಇಂತಹ ನಿಸ್ವಾರ್ಥ ಪ್ರಯತ್ನಗಳಿಂದಲೇ ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಮಹಾದಾನಿಗಳ ನೆರವಿಲ್ಲದೆ, ತಮ್ಮ ಒಡನಾಟದಲ್ಲಿರುವ ಜನರಿಂದಲೇ ಹಣ ಸಂಗ್ರಹ ಮಾಡಿ 44 ಮನೆ ಕಟ್ಟಿಸಿರುವ,  ಸಂಸ್ಥೆಯೊಂದರ ಸಾಹಸಗಾತೆ ಇಲ್ಲಿದೆ ನೋಡಿ.

ಇದು ವಿದ್ಯಾರ್ಥಿಗಳ ಆನಂದ ಭಾಷ್ಪದ ಕ್ಷಣ! ಸಾವಿರಾರು ವಿದ್ಯಾರ್ಥಿಗಳ ಸಂತಸದ ಕಣ್ಣೀರಿಗೆ ಕಾರಣವಾಗಿದ್ದು ಉಡುಪಿಯ ಯಕ್ಷಗಾನ ಕಲಾರಂಗ(Udupi yakshagana kalaranga) ಎಂಬ ಸಂಸ್ಥೆ. ಈ ಸಂಸ್ಥೆ ನಡೆಸುವ ವಿದ್ಯಾ ಪೋಷಕ ಯೋಜನೆ. ಉಡುಪಿಯ ಈ ಸಂಸ್ಥೆಯು ಹಲವು ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಅಪರೂಪದ ಮೂಳೆ ಮಜ್ಜೆಯ ಕಸಿ ಯಶಸ್ವಿ..!

ಮೂಲತಃ ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಈ ಸಂಸ್ಥೆ ದಶಕಗಳ ಹಿಂದೆ ಬಡ ವಿದ್ಯಾರ್ಥಿಗಳ ನೆರವಿಗೆ ವಿದ್ಯಾ ಪೋಷಕ ಯೋಜನೆ ಆರಂಭಿಸಿತು. ಉತ್ತಮ ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ, ಅವರ ಆರ್ಥಿಕ ಸ್ಥಿತಿಯಲ್ಲಿ ಮಾನದಂಡವಾಗಿಟ್ಟುಕೊಂಡು ಸ್ಕಾಲರ್ಶಿಪ್ ನೀಡುವ ಅಪರೂಪದ ಯೋಜನೆ ಇದು. 

ಸ್ಕಾಲರ್‌ಶಿಪ್ ಪಡೆಯುವ ಅರ್ಹ ವಿದ್ಯಾರ್ಥಿಗಳ ಮನೆಗಳಿಗೆ ಸಂಸ್ಥೆಯ ಕಾರ್ಯಕರ್ತರು ಭೇಟಿಕೊಟ್ಟಾಗ ಹಲವು ಕುಟುಂಬಗಳ ಸಂಕಷ್ಟ ನೋಡಿ ಮರುಕ ಪಟ್ಟಿದ್ದರು. ವಾಸಕ್ಕೆ ಮನೆ ಇಲ್ಲದೆ ತಗಡು ಸಿಟಿನ ಅಡಿಯಲ್ಲಿ ಸಂಕಷ್ಟದ ಬದುಕು ನಡೆಸುವ ವಿದ್ಯಾರ್ಥಿಗಳನ್ನು ಕಂಡು ನೆರವು ನೀಡಲು ಮುಂದಾದರು. ತಮ್ಮಲ್ಲೇ ಹಣ ಸಂಗ್ರಹಿಸಿ ಮನೆ ಕಟ್ಟಿಸಿಕೊಳ್ಳಲುಆರಂಭಿಸಿದ ಅಪರೂಪದ ಯೋಜನೆ ಇದು. ಸದ್ಯ ವಿದ್ಯಾ ಪೋಷಕ ಸಂಸ್ಥೆಯು 44 ಬಡ ವಿದ್ಯಾರ್ಥಿಗಳಿಗೆ ಸ್ಥಳೀಯರ ನೆರವಿನೊಂದಿಗೆ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಟ್ಟಿದೆ. 

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ(Yashpal suvarna MLA) ಅವರ ನೆರವು ಪಡೆದು ನಿರ್ಮಿಸಿದ, 43ನೇ ಮನೆ ಹಸ್ತಾಂತರ ಕಾರ್ಯಕ್ರಮ ಅನೇಕ ಭಾವಕ ಕ್ಷಣಗಳಿಗೆ ಸಾಕ್ಷಿಯಾಯಿತು ವಿದ್ಯಾಪೋಷಕ್ ಯೋಜನೆಯಡಿಯಲ್ಲಿ ಸದ್ಯ ವಾರ್ಷಿಕ ಸುಮಾರು 90 ಲಕ್ಷ ರೂಪಾಯಿ ಹಣವನ್ನು 1000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ರೂಪದಲ್ಲಿ ನೀಡಲಾಗುತ್ತದೆ. ಒಮ್ಮೆ ವಿದ್ಯಾಪೋಷಕ ಕುಟುಂಬದ ಸದಸ್ಯರಾದರೆ, ವಿದ್ಯಾಭ್ಯಾಸ ಮುಗಿಯುವವರೆಗೂ ಈ ಸಂಸ್ಥೆ ಆಶ್ರಯವಾಗಿ ನಿಲ್ಲುತ್ತದೆ. ಉಡುಪಿ ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶಗಳನ್ನು ಉದ್ದೇಶವಾಗಿಟ್ಟುಕೊಂಡು ಮನೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. 

2047ರ ವೇಳೆಗೆ ಭಾರತ ಸೂಪರ್‌ ಪವರ್‌: ಶೋಭಾ ಕರಂದ್ಲಾಜೆ

ಈ ವರ್ಷಾಂತ್ಯಕ್ಕೆ 50 ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆಸರೆ ನೀಡುವ ಈ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ.

ಯಕ್ಷಗಾನ ಕಲರಂಗ ಸಂಸ್ಥೆಯ ಮಾತೃ ಹೃದಯದ ಈ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಸೇವೆಯಲಿ ದೇವರನ್ನು ಕಾಣುತ್ತಿರುವ ಕಾರ್ಯಕರ್ತರ ತಂಡಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು.

click me!