
ದಾವಣಗೆರೆ (ಡಿ.21): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೈವಭಕ್ತರು. ನಾನೂ ಸಹ ದೈವಭಕ್ತನೇ ಆಗಿದ್ದು, ಡಿಕೆಶಿ ಮುಖ್ಯಮಂತ್ರಿ ಆಗಲೆಂದು ಬೇಡಿಕೊಂಡಿದ್ದೇನೆ. ಈಗಲೂ ಡಿಕೆಶಿ ಸಾಹೇಬರ ಜೊತೆಗಿದ್ದು, ಅವರು ಸಿಎಂ ಆಗಿ ಕಸ ಹೊಡೆಯುವಂತೆ ಹೇಳಿದರೂ ಮಾಡುತ್ತೇನೆ ಎಂದು ಶಾಸಕ ಬಸವರಾಜ ವಿ.ಶಿವಗಂಗಾ ಅವರು ಡಿಕೆ ಪರ ಬದ್ಧತೆ ಪ್ರದರ್ಶಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮುಂದೆಯೂ ಡಿ.ಕೆ.ಶಿವಕುಮಾರ್ ಸಾಹೇಬರ ಜೊತೆಗೆ ಇರುತ್ತೇನೆ. ಅಷ್ಟಕ್ಕೂ ಡಿಕೆಶಿಯವರು ದೇವಸ್ಥಾನಕ್ಕೆ ಹೋದರೆ ತಪ್ಪೇನು? ಸಂಕ್ರಾಂತಿ ವೇಳೆ ಸೂರ್ಯಪಥ ಬದಲಾವಣೆ ಆಗುತ್ತದೆ. ಆಗ ಡಿಕೆಶಿ ಸಾಹೇಬರಿಗೂ, ನಮಗೂ, ನಿಮಗೂ ಎಲ್ಲರಿಗೂ ಒಳ್ಳೆಯದು ಆಗಬಹುದು ಎಂದರು.
ಡಿಕೆಶಿ ಮುಖ್ಯಮಂತ್ರಿಯಾದರೆ ನೀವು ರಾಜಕೀಯ ಕಾರ್ಯದರ್ಶಿ ಆಗುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಸಿಎಂ ಆಗಿ ಕಾಂಗ್ರೆಸ್ ಪಕ್ಷದಲ್ಲಿ ಕಸ ಹೊಡೆಯುವ ಕೆಲಸ ಕೊಟ್ಟರೂ ನಾನು ಮಾಡುತ್ತೇನೆ ಎಂದು ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ದಲಿತ, ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಅಲ್ಪಸಂಖ್ಯಾತ ಹೀಗೆ ಎಲ್ಲಾ ಸಮುದಾಯಗಳ ಸಮರ್ಥ ನಾಯಕರಿದ್ದಾರೆ. ಆ ಎಲ್ಲರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಎಲ್ಲಾ ಮಠಾಧೀಶರೂ ತಮ್ಮ ತಮ್ಮ ಸಮುದಾಯದ ನಾಯಕರು ಮುಖ್ಯಮಂತ್ರಿ ಆಗಲೆಂದು ಹೇಳುತ್ತಾರೆ. ಅದರಲ್ಲಿ ಯಾವುದೇ ತಪ್ಪೂ ಇಲ್ಲ. ಆದರೆ, ಎಲ್ಲವೂ ಅಂತಿಮವಾಗಿ ನಿರ್ಧರಿಸುವುದು ನಮ್ಮ ಪಕ್ಷದ ಹೈಕಮಾಂಡ್ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ