ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ರಾಜ್ಯಾದ್ಯಂತ ಆಂದೋಲನಕ್ಕೆ ಶ್ರೀರಾಮಸೇನೆ ನಿರ್ಧಾರ

By Suvarna News  |  First Published Mar 24, 2022, 4:32 PM IST

* ಮುಸ್ಲಿಂ ವರ್ತಕರಿಗೆ ಬಹಿಷ್ಕಾರ; ರಾಜ್ಯಾದ್ಯಂತ ಆಂದೋಲನಕ್ಕೆ
* ಹಿಂದೂ ಸಮಾಜದ ಉಳಿವು, ದೇಶದ ಭದ್ರತೆಗೆ ಅಭಿಯಾನ ಎಂದ ಪ್ರಮೋದ್ ಮುತಾಲಿಕ್
* ಬಿಜೆಪಿ ಸರ್ಕಾರ ಹೇಡಿ ಸರ್ಕಾರ ಅಂತಾ ಕಿಡಿ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ, (ಮಾ.24): ಕರಾವಳಿಗೆ ಮಾತ್ರ ಸೀಮಿತವಾಗಿದ್ದ .ಹಿಂದೂ-ಮುಸ್ಲಿಂ ಮುಸುಕಿನ ಗುದ್ದಾಟದ ಕಿಚ್ಚು ಈಗ ವ್ಯಾಪಾರಕ್ಕೂ ತಗುಲಿದೆ. ಕೊರೋನಾ ರೂಪಾಂತರಿಗಳಿಗಿಂತಲೂ ವೇಗವಾಗಿ ಹರಡತೊಡಗಿದೆ.

Tap to resize

Latest Videos

ಹೌದು...ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವಂತೆ ರಾಜ್ಯಾದ್ಯಂತ ಆಂದೋಲನಕ್ಕೆ ಶ್ರೀರಾಮಸೇನೆ ನಿರ್ಧಾರ ಮಾಡಿದೆ. ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ವಿವಾದ, ಕೊರೋನಾಗಿಂತಲೂ ವೇಗವಾಗಿ ಹರಡತೊಡಗಿದ ಕೋಮು ದ್ವೇಷ

ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಉಡುಪಿಯ ಕಾಪುವಿನಿಂದ ಆರಂಭವಾದಂತಹ ಹಿಂದೂ ಉತ್ಸವ, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧ ಹೇರಿದ ವಿಚಾರ ಈಗ ಕರ್ನಾಟಕದಾದ್ಯಂತ  ಹರಡಿದೆ ಎಂದರು.

ಹಿಂದೂ ಸಮಾಜದ ಉಳಿವು, ದೇಶದ ಭದ್ರತೆಗೋಸ್ಕರ ಅಭಿಯಾನ ಮಾಡುತ್ತಿದ್ದೇವೆ. ಸಂವಿಧಾನದ ಆಧಾರದಲ್ಲಿ ಈ ದೇಶದ ಮುಸ್ಲಿಂರು ನಡೆದುಕೊಳ್ಳುತ್ತಿಲ್ಲ. ಅದು ಹಿಜಾಬ್ ಇರಬಹುದು, ಸಿಎಎ ಇರಬಹುದು. ಬಾಬರ್ ಮಸೀದಿ ಮತ್ತೆ ಅಲ್ಲೇ ಪ್ರತಿಷ್ಠಾಪನೆ ಮಾಡ್ತೀವಿ ಅನ್ನೋವಂತದ್ದು ಹಾಗೂ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ, 370 ವಿಧಿ ಪುನಃ ಸ್ಥಾಪನೆ ಮಾಡ್ತೀವಿ ಅನ್ನೋ ಮುಸ್ಲಿಂ ಮಾನಸಿಕತೆ ಇರಬಹುದು, ಇವರ ವಿಸ್ತಾರವಾದ, ಪ್ರತ್ಯೇಕತಾವಾದ ವಿರುದ್ಧ ನಮ್ಮ ಶಾಂತಿಯುತವಾದ ಅಸ್ತ್ರವೇ ಆರ್ಥಿಕ ಬಹಿಷ್ಕಾರ‌‌ ಎಂದು ಹೇಳಿದರು.

 ಇದನ್ನ ಇಡೀ ರಾಜ್ಯಾದ್ಯಂತ ನಾವು ಪಸರಿಸೋರು, ಆಂದೋಲನ ರೂಪವಾಗಿ ಮಾಡೋರು. ಕರಪತ್ರ ಮುದ್ರಣ ಮಾಡ್ತೀವಿ, ಮುಸ್ಲಿಂ ಅಂಗಡಿ, ಬೇರೆ ಬೇರೆ ಆರ್ಥಿಕ ವ್ಯವಹಾರಗಳ ಪಟ್ಟಿ ಮಾಡ್ತೀವಿ.‌ ಅದನ್ನು ಹಿಂದೂ ಸಮಾಜಕ್ಕೆ ತಿಳಿಸುತ್ತೇವೆ‌‌.‌ ಗೋಹತ್ಯೆ ನಿಷೇಧ ಕಾನೂನು ಇದ್ರೂ ಗೋಹತ್ಯೆ, ಗೋವು ಕಳ್ಳತನ, ಗೋಮಾಂಸ ಮಾರಾಟ ನಡೀತಿದೆ ಎಂದು ಕಿಡಿಕಾರಿದರು.‌

 ಈ ದೇಶಕ್ಕೆ ಗೌರವ ಕೊಡೋದು ಎಳ್ಳಷ್ಟು ಇಲ್ಲ ಅಂದ್ರೆ ಇದನ್ನ ಹೇಗೆ ಒಪ್ಪೋದು? ಬೆಳಗಿನ ಜಾವ ಐದು ಗಂಟೆಗೆ ಆಜಾನ್ ಕೂಗೋದು ಸುಪ್ರೀಂಕೋರ್ಟ್ ಉಲ್ಲಂಘನೆ‌.‌ ಅದನ್ನ ಹೇಗೆ ಒಪ್ಪೋದು? ಎಷ್ಟು ಕಿರಿಕಿರಿ, ತೊಂದರೆ ಆಗುತ್ತೆ. ಮಕ್ಕಳು, ವ್ಯಾಪಾರಸ್ಥರು, ಕಾರ್ಮಿಕರಿಗೆ ತೊಂದರೆ ಆಗ್ತಿದೆ ಅದನ್ನ ನಿಲ್ಲಿಸೋ ಪ್ರಕ್ರಿಯೆ ಮಾಡ್ತಿಲ್ಲ. ಈ ರೀತಿ ನೂರಾರು ಇವೆ. ಎಲ್ಲಿಯವರೆಗೂ ಕಾನೂನು ಉಲ್ಲಂಘನೆ ಮಾಡ್ತೀರಾ ಅಲ್ಲಿಯವರೆಗೂ ಆರ್ಥಿಕ ಬಹಿಷ್ಕಾರ ಮುಂದುವರೆಯುತ್ತೆ ಎಂದು ಎಚ್ಚರಿಸಿದರು. 

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಗೊತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದೆ‌. ಬಿಜೆಪಿಯ ಸಿಎಂ ಹಿಡಿದು ಎಲ್ಲರಿಗೂ ಗೊತ್ತಾಗ್ತಿಲ್ವಾ? ಕಿವಿ ಕೇಳಿಸಲ್ವಾ.‌ ಪೊಲೀಸ್ ಇಲಾಖೆಗೆ ಎಲ್ಲಿ ಕಸಾಯಿಕಾನೆ ಇದೆ ಅಂತಾ ಗೊತ್ತಿಲ್ವಾ? ಅವರ ಮೂಲಕ ಹಿಡಿದು ತರಲು ಆಗಲ್ವಾ ಅಂತಾ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.

ಸರ್ಕಾರದ ಮೇಲೆ ಒತ್ತಡ ಹಾಕಲು ಮುಸ್ಲಿಂರಿಗೆ ಆರ್ಥಿಕ ಬಹಿಷ್ಕಾರ ಹಾಕುತ್ತಿದ್ದು ಶಾಂತಿಯುತವಾದಂತಹ ಗದ್ದಲ ಗಲಾಟೆ ಅಲ್ಲ ದಂತಹ ಶಸ್ತ್ರ ಇದು, ಈ ಶಸ್ತ್ರದ ಮೂಲಕ ಸರ್ಕಾರ, ಇಸ್ಲಾಂ ಮೇಲೆ ಒತ್ತಡ ತರಲು ಮಾಡ್ತಿದೇವೆ. ಹಿಂದೂ ಸಮಾಜ ಎಂದೂ ಕಾನೂನು ಉಲ್ಲಂಘನೆ ಮಾಡಲ್ಲ. ಕೊಲೆ, ಸುಲಿಗೆ, ದರೋಡೆ, ತಲ್ವಾರ್ ಹಿಡಿದಿಲ್ಲ. ಎಂದೂ ಬೇರೆ ದೇಶ ಮೇಲೆ ದಾಳಿ ಮಾಡಿಲ್ಲ ಮಸೀದಿ ಒಡೆದಿಲ್ಲ‌‌ . ನಾವು ಯಾವತ್ತು ಕೋಮು ಸೌಹಾರ್ದ ಹಾಳು ಮಾಡಿಲ್ಲ‌‌ ಎಂದು ತಿಳಿಸಿದರು.

ನಮ್ಮ 30 ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ, ಲವ್ ಜಿಹಾದ್ ಮೂಲಕ ನಮ್ಮ ಹಿಂದೂ ಯುವತಿಯರು ಸಿಲುಕಿಕೊಂಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ನಿಯಮದಲ್ಲಿ ಬಹಳ ಕ್ಲಿಯರ್ ಇದೆ. ಹಿಂದೂಯೇತರಿಗೆ ದೇವಸ್ಥಾನ ಆವರಣದಲ್ಲಿ ಯಾವುದೇ ರೀತಿ ವ್ಯವಹಾರಕ್ಕೆ ಅವಕಾಶ ಇಲ್ಲ ಅಂತಾ ಸ್ಪಷ್ಟವಾದ ಆದೇಶ ಇದೆ. ಅದರ ಆಧಾರ ಮೇಲೆ ಮುಜಾರಾಯಿ ಇಲಾಖೆಯ ಅಧೀನದಲ್ಲಿರುವ 32 ಸಾವಿರ ದೇವಸ್ಥಾನಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮುಸ್ಲಿಂ, ಕ್ರಿಶ್ವಿಯನ್‌ರ ಅಂಗಡಿ ಇರೋ ಹಾಗೇ ಇಲ್ಲ‌. ಇದನ್ನು ಸಂಬಂಧಪಟ್ಟ ಮಂತ್ರಿಗಳಿಗೆ ಮನವಿ ಕೊಟ್ಟು ನೋಟಿಸ್ ಕೊಡಿಸುತ್ತೇವೆ.‌ ಎಲ್ಲಾ ದೇವಸ್ಥಾನಗಳಲ್ಲಿ ಹಿಂದೂಯೇತರಿಗೆ ಅವಕಾಶ ಕೊಡೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಆ್ಯಕ್ಷನ್ ಗೆ ರಿಯಾಕ್ಷನ್, ಕ್ರಿಯೆಗೆ ಪ್ರತಿಕ್ರಿಯೆ
ಇನ್ನು ಮುಸ್ಲಿಂ ವಿಸ್ತಾರವಾದ, ಪ್ರತ್ಯೇಕವಾದ ಈ ದೇಶಕ್ಕೆ ಗಂಡಾಂತರವಿದ್ದು ಈ ಹಿನ್ನೆಲೆಯಲ್ಲಿ ಈ ರೀತಿ ಪ್ರಕ್ರಿಯೆ ನಡೆಯುತ್ತಿದೆ ಅಂತಾ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆ ಬೆಂಬಲ‌ ಇದೆ.‌ ಮುಸ್ಲಿಂರ ಮಾನಸಿಕತೆ, ಕ್ರೌರ್ಯ ಮೊದಲಿನಿಂದಲೂ ಬಂದಿದೆ.‌ ಇದನ್ನ ನಿಲ್ಲಿಸುವವರೆಗೂ ಈ ರೀತಿ ಪ್ರಕ್ರಿಯೆ ನಡೆಯುತ್ತಿರುತ್ತವೆ ಎಂದರು.

ಮುಂದಿನ ದಿನಗಳಲ್ಲಿ ಮುಸ್ಲಿಂರ ಜತೆಗೆ ವ್ಯಾಪಾರ ವಹಿವಾಟು ನಡೆಸದಂತೆ ಬಹಿಷ್ಕಾರ ಹಾಕ್ತೇವೆ.ಗೋಹತ್ಯೆ, ಗೋಮಾಂಸ ತಿನ್ನುವುದನ್ನ ನಿಲ್ಲಿಸುವವರೆಗೂ ಈ ಬಹಿಷ್ಕಾರ ಮುಂದುವರೆಯುತ್ತೆ. ಹಿಜಾಬ್ ವಿವಾದದಲ್ಲಿ ಕೋರ್ಟ್ ಆದೇಶವನ್ನ ಧಿಕ್ಕರಿಸಿದ್ರು. ಎಸ್‌ಡಿಪಿಐ ಸಂಘಟನೆ ಸೇರಿ ದೇಶದ್ರೋಹಿ ಸಂಘಟನೆಗಳು ಕೋರ್ಟ್ ಆದೇಶ ಒಪ್ಪಲಿಲ್ಲ. ಜಡ್ಜ್‌ಗಳಿಗೆ ಕೊಲ್ಲುತ್ತೇವೆ ಅಂತಾ ಬೆದರಿಕೆ ಹಾಕ್ತಾರೆ. 32 ವರ್ಷದ‌ ಹಿಂದೆ ಕಾಶ್ಮೀರ ವಿಚಾರದಲ್ಲಿ ಇದ್ದ ಮುಸ್ಲಿಂರ ಮಾನಸಿಕತೆ ಈಗಲೂ ಮುಂದುವರೆದಿದೆ. ಈ ಮಾನಸಿಕತೆ ಬದಲಾವಣೆ ಆಗುವವರೆಗೂ ಆರ್ಥಿಕ ಬಹಿಷ್ಕಾರ ನಿರ್ಣಯ ಮಾಡಿದ್ದೇವೆ. ಇಡೀ ರಾಜ್ಯಾದ್ಯಂತ ಆರ್ಥಿಕ ಬಹಿಷ್ಕಾರ ಹಾಕಲು ಶ್ರೀರಾಮ ಸೇನೆ ಆಂದೋಲನ ಮಾಡುತ್ತೆ.‌ಆ್ಯಕ್ಷನ್ ಗೆ ರಿಯಾಕ್ಷನ್, ಕ್ರಿಯೆಗೆ ಪ್ರತಿಕ್ರಿಯೆ ನಾವು ಕೊಡುತ್ತಿದ್ದೇವೆ. ಬಹುಸಂಖ್ಯಾತ ಹಿಂದು ಸಮಾಜದ ಗೌರವದಿಂದ ಕಾಣುವ ಪ್ರಕ್ರಿಯೆ ಆಗಬೇಕು. ನಮ್ಮ ದೇವರನ್ನ ಒಪ್ಪದ ನೀವು ನಮ್ಮ ಜಾತ್ರೆಯಲ್ಲಿ ಯಾಕೆ ಬರುತ್ತೀರಿ? ಈ ದೇಶದ ಕಾನೂನು, ಸಂವಿಧಾನ, ಪೊಲೀಸ್ ನಿಯಮ ಪಾಲಿಸುವವರೆಗೂ ಬಹಿಷ್ಕಾರ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿರೋದು ಹೇಡಿ ಸರ್ಕಾರ ಎಂದ ಮುತಾಲಿಕ್
ಇನ್ನು ಬೆಳಗ್ಗೆ ಆಜಾನ್ ಮಾಡಬಾರದು ಅಂತಾ ಸುಪ್ರೀಂಕೋರ್ಟ್ ಆದೇಶವಿದ್ದರೆ ಸರ್ಕಾರ ಏಕೆ ಅದನ್ನ ಜಾರಿ ಮಾಡ್ತಿಲ್ಲ ಹಾಗಾದ್ರೆ ಅಂತಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಮುತಾಲಿಕ್ 'ಹೇಡಿ ಸರ್ಕಾರ' ಆಜಾನ್ ನಿಲ್ಲಿಸುತ್ತಿಲ್ಲ ಅಂತಾ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಎಲ್ಲಾ ಬಿಜೆಪಿ ಎಂಎಲ್‌ಎ, ಎಂಪಿ ಮುಖ್ಯಮಂತ್ರಿಗಳ ಕಿವಿಗೆ ಆಜಾನ್ ಹೋಗ್ತಿದೆ.‌ ಆಜಾನ್ ನಿಂದ ಜನರಿಗೆ ಎಷ್ಟು ಕಿರಿಕ್ ಆಗ್ತಿದೆ. ಇದು ಹೇಡಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯ ದೇವಸ್ಥಾನಗಳಲ್ಲೂ ಮುಸ್ಲಿಂ ವರ್ತಕರ ನಿಷೇಧ
ಬೆಳಗಾವಿಯ ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನ ಸೇರಿ ಇತರ ದೇವಸ್ಥಾನಗಳಲ್ಲೂ ಮುಸ್ಲಿಂ ವರ್ತಕರಿಗೆ ನಿಷೇಧ ಹೇರಲು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಸವದತ್ತಿ ಯಲ್ಲಮ್ಮ ಜಾತ್ರೆ, ಪಂತಬಾಳೇಕುಂದ್ರಿ ಜಾತ್ರೆ, ಹುಕ್ಕೇರಿ ತಾಲೂಕಿನ ಬಡಕುಂದ್ರಿಯ ಹೊಳೆಮ್ಮದೇವಿ ಜಾತ್ರೆ ಸೇರಿ ಎಲ್ಲೆಡೆ ಮುಸ್ಲಿಂ ವರ್ತಕರು ನಡೆಸುವ ವ್ಯಾಪಾರಕ್ಕೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದರು.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಮುಸ್ಲಿಂ ಅಂಗಡಿಗಳಿಗೆ ಮೊದಲು ಇಲಾಖೆಯಿಂದ ನೋಟಿಸ್ ಕೊಡಿಸುತ್ತೇವೆ.‌ ಒಂದು ವೇಳೆ ಅಂಗಡಿ ತೆರವು ಮಾಡದಿದ್ರೆ ಅಂಗಡಿಗಳಿಗೆ ನಾವೇ ನುಗ್ಗುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

click me!