
ಬೆಂಗಳೂರು (ಅ.19) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೈಲು ಸೌಲಭ್ಯಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಿದ್ದ ನಟ ದರ್ಶನ್‌ಗೆ ಮತ್ತೆ ಹಿನ್ನಡೆಯಾಗಿದೆ. ಜೈಲಿನಲ್ಲಿ ನಟ ದರ್ಶನ್‌ಗೆ ನೀಡುತ್ತಿರುವ ಕನಿಷ್ಠ ಸೌಲಭ್ಯ ವಿಚಾರದ ಕಾನೂನು ಪ್ರಾಧಿಕಾರದ ವರದಿಯಿಂದ ಕೋಲಾಹಲ ಸೃಷ್ಟಿಯಾಗಿದೆ. ಈ ವರದಿ ದರ್ಶನ್ ವಿರುದ್ಧವಾಗಿದೆ ಎಂದು ಹೇಳಿದ್ದೇ ತಡ, ಸೆಲ್‌ನಲ್ಲಿ ನಟ ದರ್ಶನ್ ಕೂಗಾಡಿದ ಘಟನೆ ನಡೆದಿದೆ. ನಾನು ಯಾರಿಗೆ ಅನ್ಯಾಯ ಮಾಡಿದ್ದೇನೆ, ನನಗೆ ಯಾಕೆ ಈ ಶಿಕ್ಷೆ, ನಾನು ಹೀಗೆ ಜೈಲಿನಲ್ಲೇ ಸಾಯಬೇಕಾ ಎಂದು ನಟ ದರ್ಶನ್ ರಂಪಾಟ ಮಾಡಿದ ಘಟನೆ ಜೈಲಿನಲ್ಲಿ ನಡೆದಿದೆ.
ಜೈಲಿನಲ್ಲಿ ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯ ಒದಗಿಸಲಾಗುತ್ತಿಲ್ಲ ಅನ್ನೋ ಆರೋಪದ ಸತ್ಯಾಸತ್ಯೆ ಅರಿಯಲು ಕಾನೂನು ಪ್ರಾಧಿಕಾರ ತನಿಖೆ ನಡೆಸಿ ವರದಿ ನೀಡಿತ್ತು. ಈ ವರದಿ ದರ್ಶನ್‌ಗೆ ವಿರುದ್ದವಾಗಿದೆ ಎಂದು ನಟ ದರ್ಶನ್‌ಗೆ ಆಪ್ತರು, ಮ್ಯಾನೇಜರ್ ಹೇಳಿದ್ದಾರೆ. ಈ ಮಾತು ಕೇಳಿಸಿಕೊಂಡು ನಟ ದರ್ಶನ್ ಗರಂ ಆಗಿದ್ದಾರೆ. ನನಗೆ ಆಗುತ್ತಿರುವ ಸಮಸ್ಯೆ, ಇಲ್ಲಿನ ಕನಿಷ್ಠ ಸೌಲಭ್ಯಗಳ ಕುರಿತು ದೂರು ನೀಡಿದ್ದೇನೆ. ಆದರೆ ಈ ವರದಿ ನನ್ನ ವಿರುದ್ಧವಾಗಿದೆ ಎಂದರೆ ಏನು? ಎಲ್ಲರಿಗೂ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಆದರೆ ನನಗೆ ಈ ರೀತಿ ಶಿಕ್ಷೆ, ನಾನು ಹೀಗೆ ಸಾಯಬೇಕಾ ಎಂದು ದರ್ಶನ್ ಜೈಲಿನಲ್ಲಿ ಸಹ ಖೈದಿಗಳ ಜೊತೆ ಕೂಗಾಡಿದ್ದಾರೆ.
ನಟ ದರ್ಶನ್ ಜೈಲಿನಲ್ಲಿ ಇಷ್ಟು ದಿನ ತೀವ್ರ ತಾಳ್ಮೆ ವಹಿಸಿದ್ದರು. ಆದರೆ ವರದಿ ವಿರುದ್ಧವಾಗಿದೆ ಎಂದಾಗ ತಾಳ್ಮೆ ಕಳೆದುಕೊಂಡಿದ್ದಾರೆ. ದರ್ಶನ್ ಕೋಪಗೊಂಡಿರುವುದು ನೋಡಿದ ಸಹಚರರು ಶಾಕ್ ಆಗಿದ್ದಾರೆ. ದರ್ಶನ್ ಮ್ಯಾನೇಜರ್ ನಾಗರಾಜ್ ನಟನ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ. ಇತರರು ದರ್ಶನ್ ಕಡೆ ನೋಡಲು ಸಾಧ್ಯವಾಗದೆ, ಸ್ಥಳದಿಂದ ತೆರಳಲು ಸಾಧ್ಯವಾಗದೇ ಪರದಾಡಿದ್ದಾರೆ.
ರಿಪೋರ್ಟ್ ಮಾಹಿತಿ ತಿಳಿದು ಗರಂ ಆದ ನಟ ದರ್ಶನ್ ಕೆಲ ಹೊತ್ತು ಸಹಚರರು ಸೇರಿದಂತೆ ಹಲವರೊಂದಿಗೆ ಗರಂ ಆಗಿದ್ದಾರೆ. ಕಿರುಚಾಡಿದ್ದಾರೆ. ಕೆಲ ಹೊತ್ತಿನ ಬಳಿಕ ದರ್ಶನ್ ಸೈಲೆಂಟ್ ಆಗಿದ್ದಾರೆ. ಬಳಿಕ ಯಾರೊಂದಿಗೆ ಬೆರೆಯದೇ ಒಂಟಿಯಾಗಿ ಕುಳಿತಿದ್ದಾರೆ. ಇದೇ ವೇಳೆ ವಕೀಲರ ಜೊತೆ ಮಾತನಾಡಬೇಕು ಎಂದು ದರ್ಶನ್ ಹೇಳಿದ್ದಾರೆ.
ನಟ ದರ್ಶನ್ ಜೈಲಿನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಹೊರಬರವು ದಾರಿಗಳೆಲ್ಲಾ ಬಂದ್ ಆಗಿದೆ. ಇದೀಗ ಪ್ರತಿ ವರದಿಗಳು ದರ್ಶನ್ ವಿರುದ್ಧವಾಗಿ ಬರುತ್ತಿದೆ. ಇದರಿಂದ ದರ್ಶನ್ ಕೋಪ ಮತ್ತಷ್ಟು ಹೆಚ್ಚಾಗಿದೆ. ಇದೀಗ ಮಾನವ ಹಕ್ಕುಗಳ ಮೊರೆ ಹೋಗಲು ದರ್ಶನ್ ನಿರ್ಧರಿಸಿದ್ದರೆ. ಈ ಕುರಿತು ವಕೀರಲ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೋಮಾವರ ಈ ಕುರಿತು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಕೋರ್ಟ್ ಸೂಚನೆಯಿಂದ ನಟ ದರ್ಶನ್‌ಗೆ ಜೈಲಿನಲ್ಲಿ ನೀಡುತ್ತಿರುವ ಕನಿಷ್ಛ ಸೌಲಭ್ಯದ ಕುರಿತು ತನಿಖೆ ನಡೆಸಿ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಈ ವರದಿ ದರ್ಶನ್ ಪರವಾಗಿಲ್ಲ ಎಂದು ಆಪ್ತರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ