KSRTC ವೋಲ್ವೋಗೆ ಅಂಬಾರಿ ಉತ್ಸವ ಹೆಸರಿಟ್ಟವರು ಇವರೇ?: 10 ಸಾವಿರ ರೂ. ಬಹುಮಾನ ಕೊಟ್ಟ ನಿಗಮ

Published : Feb 21, 2023, 05:38 PM ISTUpdated : Feb 21, 2023, 06:59 PM IST
KSRTC ವೋಲ್ವೋಗೆ ಅಂಬಾರಿ ಉತ್ಸವ ಹೆಸರಿಟ್ಟವರು ಇವರೇ?: 10 ಸಾವಿರ ರೂ. ಬಹುಮಾನ ಕೊಟ್ಟ ನಿಗಮ

ಸಾರಾಂಶ

ಕೆಎಸ್‌ಆರ್‌ಟಿಸಿ ವೋಲ್ವೋ ಮಲ್ಟಿ ಆಕ್ಸೆಲ್  ಬಿಎಸ್  4 -9600 ಸ್ಲೀಪರ್ ಬಸ್ಸುಗಳಿಗೆ 'ಅಂಬಾರಿ ಉತ್ಸವ' ಎಂದು ಹೆಸರು ಸೂಚಿಸುವ ಮೂಲಕ ಚಿಕ್ಕನಾಯಕನಹಳ್ಳಿಯ ವ್ಯಕ್ತಿ ನಿಗಮದಿಂದ 10 ಸಾವಿರ ರೂ. ನಗದು ಬಹುಮಾನ ಸ್ವೀಕರಿಸಿದ್ದಾರೆ.

ಬೆಂಗಳೂರು (ಫೆ.21): ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯಿಂದ ಇಂದು ಚಾಲನೆ ನೀಡಲಾಗಿರುವ ವೋಲ್ವೋ ಮಲ್ಟಿ ಆಕ್ಸೆಲ್  ಬಿಎಸ್  4 -9600 ಸ್ಲೀಪರ್ ಬಸ್ಸುಗಳಿಗೆ 'ಅಂಬಾರಿ ಉತ್ಸವ' ಎಂದು ಹೆಸರು ಸೂಚಿಸುವ ಮೂಲಕ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊನ್ನೆಬಾಗಿಯ ಎಚ್.ಎಸ್‌. ಮಧುಕರ್‌ ಬ್ರ್ಯಾಂಡಿಂಗ್‌ ನೇಮ್‌ ಕಂಟೆಸ್ಟ್‌ನ ವಿಜೇತರಾಗಿದ್ದಾರೆ. ಈ ಮೂಲಕ ಸಾರಿಗೆ ನಿಗಮದಿಂದ ಬರೋಬ್ಬರಿ 10 ಸಾವಿರ ರೂ. ನಗದು ಬಹುಮಾನವನ್ನೂ ತಮ್ಮದಾಗಿಸಿಕೊಂಡಿದ್ದಾರೆ. 

ಕಳೆದ ವರ್ಷ ನವೆಂಬರ್‌ ತಿಂಗಳ ವೇಳೆ ಕೆಎಸ್‌ಆರ್‌ಟಿಸಿ ವತಿಯಿಂದ ರಸ್ತೆಗೆ ಇಳಿಯಲಿರುವ ಎಲೆಕ್ಟ್ರಿಕ್‌ ಬ್ಯಾಟರಿ ಚಾಲಿತ ಬಸ್‌ಗಳು ಹಾಗೂ ವೋಲ್ವೋ ಮಲ್ಟಿ ಆಕ್ಸೆಲ್  ಬಿಎಸ್  4 -9600 ಸ್ಲೀಪರ್ ಬಸ್ಸುಗಳಿಗೆ ಬ್ರ್ಯಾಂಡಿಂಗ್‌ ನೇಮ್‌ ಸೂಚಿಸಲು ಸಲಹೆ ನೀಡುವಂತೆ ರಾಜ್ಯದ ಜನತೆಗೆ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ನೂರಾರು ಹೆಸರುಗಳನ್ನು ಸೂಚಿಸಲಾಗಿತ್ತು. ಅದರಲ್ಲಿ, ಚಿಕ್ಕನಾಯಕನಹಳ್ಳಿ ತಾಲೂಕಿನ ಹೊನ್ನೆಬಾಗಿಯ ಶ್ರೀ ಎಚ್.ಎಸ್.ಮಧುಕರ್‌ ಎನ್ನುವವರು "ಅಂಬಾರಿ ಉತ್ಸವ" ಎಂದು ಹೆಸರು ಸೂಚಿಸಿದ್ದರು. ಅವರು ಸೂಚಿಸಿದ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದ ಸಾರಿಗೆ ಸಂಸ್ಥೆಯು ಇಂದು 20 ವೋಲ್ವೋ ಸ್ಲೀಪರ್‌ ಕೋಚ್‌ ಬಸ್‌ಗಳ ಸಂಚಾರಕ್ಕೆ ಚಾಲನೆಯನ್ನು ನೀಡಿದೆ.

ಖಾಸಗಿ ಸ್ಲೀಪರ್‌ ಬಸ್‌ಗೆ ಸೆಡ್ಡು ಹೊಡೆದ ಕೆಎಸ್‌ಆರ್‌ಟಿಸಿ ವೋಲ್ವೋ: ಈ ಮಾರ್ಗದಲ್ಲಿ ವಿಮಾನಯಾನದ ಅನುಭವ ನೀಡುವ ಬಸ್

ಟ್ಯಾಗ್‌ಲೈನ್‌ ವಿಜೇತರು ಮಹಿಳೆ: ವೋಲ್ವೋ ಮಲ್ಟಿ ಆಕ್ಸೆಲ್  ಬಿಎಸ್  4 -9600 ಸ್ಲೀಪರ್ ಬಸ್ಸುಗಳಿಗೆ ಸಂಭ್ರಮದ ಪ್ರಯಾಣ ಎಂಬ ಟ್ಯಾಗ್‌ಲೈನ್‌ ಅನ್ನು ನೀಡುವ ಮೂಲಕ ಬೆಂಗಳೂರಿನ ಮೀನಾ ರವೀಂದ್ರ ಅವರು ವಿಜೇತರಾಗಿದ್ದಾರೆ.

ಖಾಸಗಿ ಬಸ್‌ಗಳಿಗೆ ಸೆಡ್ಡು ಹೊಡೆಯಲು ಸಜ್ಜು: ಖಾಸಗಿ ಸ್ಲೀಪರ್ ಬಸ್‌ಗಳಿಗೆ ಸೆಡ್ಡು ಹೊಡೆಯಲು ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆ ಮುಂದಾಗಿದ್ದು, 20 ಅಂಬಾರಿ ಉತ್ಸವ ಸ್ಲೀಪರ್ ಬಸ್ ಸೇವೆ ಇಂದಿನಿಂದ ಆರಂಭಿಸಿದೆ. ವಿಮಾನಯಾನದ ಅನುಭವವನ್ನು ವೋಲ್ವೋ ಮಲ್ಟಿ ಆಕ್ಸೆಲ್  ಬಿಎಸ್ 4 - 9600 ಸ್ಲೀಪರ್ ಬಸ್ಸುಗಳ ಮೂಲಕ ನೀಡಲಾಗುತ್ತಿದೆ. ಅಂಬಾರಿ ಉತ್ಸವ ಸಂಭ್ರಮದ ಪ್ರಯಾಣ ಎಂಬ ಘೋಷಣೆಯೊಂದಿದೆ ಹೊಸ ಬಸ್ ಸೇವೆಯನ್ನು ಕೆಎಸ್‌ಆರ್‌ಟಿಸಿ ಆರಂಭಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸೆಲ್  ಬಿಎಸ್ 4 - 9600 ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು.  ಪ್ರಸ್ತುತ ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಗಳಿಗಿಂತ ಅತ್ಯುತ್ತಮ ಸೌಕರ್ಯ ಹೊಂದಿರುವ ಬಸ್ ಇದಾಗಿದೆ. ವಿಮಾನದಂತಹ ಪ್ರಯಾಣದ ಅನುಭವವನ್ನು ನೀಡುವ 15 ಮೀಟರ್ ಉದ್ದದ ಬಸ್‌ನಲ್ಲಿ ಪ್ರಯಾಣ ಅತ್ಯಂತ ಸುಖಕರ ಆಗಿರುತ್ತದೆ. ಇಂದಿನಿಂದ 20 ಮಲ್ಟಿ-ಆಕ್ಸಲ್ ವೋಲ್ವೋ 9600 ಸ್ಲೀಪರ್ ಬಸ್‌ಗಳು ರಸ್ತೆಗಿಳಿಯಲಿವೆ. 

ಏಪ್ರಿಲ್‌ 1ರಿಂದ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌: ಸಿಎಂ ಬೊಮ್ಮಾಯಿ ಸೂಚನೆ

ಅಂಬಾರಿ ಉತ್ಸವ ಬಸ್ ವಿಶೇಷತೆಗಳು 
* 40 ಆಸನಗಳುಳ್ಳ ಬಸ್ ಪ್ರಯಾಣಿಕರು ಮಲಗುವ ಮತ್ತು ಕುಳಿತುಕೊಳ್ಳುವ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯದ ಬಸ್ 
* ಪಿಯು ಫೋಮ್ ಸ್ಲೀಪರ್ ಆಸನ 
* ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯ ಅಂಬಾರಿ ಉತ್ಸವ್ ಬಸ್
* ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್, 
* USB ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯ 
* 12 ಸ್ಪೀಡ್ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್, 
* ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನ, 
* 9600 ಮಾದರಿಯಲ್ಲಿ ಕವಚ ಜೊತೆಗೆ ಸುಧಾರಿತ ಅಬ್ಸರ್ವರ್ 
* ಗರಿಷ್ಠ ಪ್ಯಾಸೆಂಜರ್ ಕಾರ್ಗೋ ಶೇಖರಣೆ ವ್ಯವಸ್ಥೆ 
* ಉನ್ನತ ದರ್ಜೆಯ ಪರೀಕ್ಷಿತ ಮತ್ತು ಮೌಲ್ಲೀಕರಿಸಿದ ವಸ್ತುಗಳ ಬಳಕೆ 
* ಸಂಪೂರ್ಣ ಪೆನೆಲಿಂಗ್, ಬಂಡಿಂಗ್ ಪ್ರಕ್ರಿಯೆ ಇರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!