ಸಿದ್ದು ಮಾಡಿಸಿದ್ದು ಜಾತಿ ಗಣತಿಯಲ್ಲ, ಅದು ಸಮೀಕ್ಷೆಯಷ್ಟೆ: ಶಾಸಕ ಬೆಲ್ಲದ್‌

By Kannadaprabha News  |  First Published Oct 8, 2024, 12:26 PM IST

ಹಗರಣಗಳ ಹಿನ್ನೆಲೆ ಸಿಎಂ ರಾಜೀನಾಮೆ ನೀಡುವ ಪ್ರಸಂಗ ಎದುರಾಗಿದ್ದು, ಸರ್ಕಾರದ ಮೇಲಿರುವ ಆರೋಪಗಳನ್ನು ಮುಚ್ಚಿಹಾಕಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಸಲಿಗೆ ಆ ವರದಿಯೂ ಜಾತಿಗಣತಿಯೇ ಅಲ್ಲ. ಅದು ಕೇವಲ ಚುನಾವಣಾ ಪೂರ್ವದಲ್ಲಿ ಮಾಡುವ ಸಮೀಕ್ಷೆಯಾಗಿದೆ. ಹಾಗಾಗಿ ಈ ಸಮೀಕ್ಷೆಯನ್ನು ಬಿಡುಗಡೆ ಮಾಡೋದು ಬೇಡ ಎಂದ ಶಾಸಕ ಅರವಿಂದ್ ಬೆಲ್ಲದ್


ನವದೆಹಲಿ(ಅ.08): ಜಾತಿಗಣತಿಗೆ ನಮ್ಮ ತಕರಾರಿಲ್ಲ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಸ್ಪಷ್ಟಪಡಿಸಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಮಾಡಿಸಿರುವುದು ಸಮೀಕ್ಷೆಯೇ ಹೊರತು ಜಾತಿಗಣತಿ ಅಲ್ಲ. ಇದಕ್ಕೆ ಆಯೋಗದ ಕಾರ್ಯದರ್ಶಿಯೇ ಸಹಿ ಹಾಕಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ. 

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಮೇಲೆ ಕೇಳಿಬಂದಿರುವ ಮುಡಾಮತ್ತು ವಾಲ್ಮೀಕಿ ಹಗರಣಗಳ ಚರ್ಚೆಯಿಂದ ಪಾರಾಗಲು ಸಿದ್ದರಾಮಯ್ಯ ಅವರು ಈ ಜಾತಿಗಣತಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ದೂರಿದ್ದಾರೆ. 

Tap to resize

Latest Videos

undefined

ಮುಡಾ ಹಗರಣದಿಂದ ಸಿದ್ದರಾಮಯ್ಯ ಭವಿಷ್ಯ ಅಂತ್ಯ: ಶಾಸಕ ಅರವಿಂದ ಬೆಲ್ಲದ

ಹಗರಣಗಳ ಹಿನ್ನೆಲೆ ಸಿಎಂ ರಾಜೀನಾಮೆ ನೀಡುವ ಪ್ರಸಂಗ ಎದುರಾಗಿದ್ದು, ಸರ್ಕಾರದ ಮೇಲಿರುವ ಆರೋಪಗಳನ್ನು ಮುಚ್ಚಿಹಾಕಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಸಲಿಗೆ ಆ ವರದಿಯೂ ಜಾತಿಗಣತಿಯೇ ಅಲ್ಲ. ಅದು ಕೇವಲ ಚುನಾವಣಾ ಪೂರ್ವದಲ್ಲಿ ಮಾಡುವ ಸಮೀಕ್ಷೆಯಾಗಿದೆ. ಹಾಗಾಗಿ ಈ ಸಮೀಕ್ಷೆಯನ್ನು ಬಿಡುಗಡೆ ಮಾಡೋದು ಬೇಡ ಎಂದರು.

click me!