
ಬಳ್ಳಾರಿ (ಸೆ.01): ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ ರನ್ನು ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ. ಶನಿವಾರ ಬಳ್ಳಾರಿ ಜೈಲಿನಲ್ಲಿ ದರ್ಶನ್‌ರನ್ನು ಸಂದರ್ಶಕರ ಕೊಠಡಿಯಲ್ಲಿ ಭೇಟಿಯಾದ ವಿಜಯಲಕ್ಷ್ಮಿ, ತನ್ನ ಪತಿ ಕಿಷ್ಕಂಧ ಯಂತಿರುವ ಪುಟ್ಟ ಸೆಲ್‌ನಲ್ಲಿ ಬಂಧಿಯಾಗಿರುವುದನ್ನು ತಿಳಿದು ಕಣ್ಣೀರಿಟ್ಟಿದ್ದಾರೆ. ದರ್ಶನ್‌ರನ್ನು ನೋಡುತ್ತಿದ್ದಂತೆ ವಿಜಯಲಕ್ಷ್ಮಿ ಅವರ ಕಣ್ಣಾಲಿ ತುಂಬಿ ಬಂದಿದ್ದು, ಆರೋಗ್ಯ ಹೇಗಿದೆ?.
ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡಲು ನನ್ನಿಂದಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಪತ್ನಿಯನ್ನು ಸಂತೈಸಿ ಧೈರ್ಯ ತುಂಬಿದ ದರ್ಶನ್, ಇದೊಂದು ಕೆಟ್ಟ ಘಳಿಗೆ ದೇವರಿದ್ದಾನೆ. ಎಲ್ಲವೂ ಸರಿಹೋ ಗುತ್ತದೆ ಎಂದು ಹೇಳಿದ್ದಾರೆ. ಇಬ್ಬರೂ ಸುಮಾರು ಅರ್ಧಗಂಟೆ ಕಾಲ ಮಾತನಾ ಡಿದರು. ಇದೇ ವೇಳೆ, ವಕೀಲರ ಜತೆಗೂ ನಟ ದರ್ಶನ್ ಕೆಲ ಹೊತ್ತು ಮಾತುಕತೆ ನಡೆಸಿದರು. ವಿಜಯಲಕ್ಷ್ಮಿ ಅವರು ಎರಡು ಬ್ಯಾಗ್ ಜತೆ ದರ್ಶನ್‌ರನ್ನು ಭೇಟಿಯಾಗಲು ಆಗಮಿಸಿದ್ದರು. ಅವರು ನೀಡಿದ ಬಟ್ಟೆ ಡ್ರೈಫ್ರಟ್ಸ್ ಹೊಂದಿರುವ ಬ್ಯಾಗ್‌ನ್ನು ದರ್ಶನ್‌ಗೆ ಕೊಡಲಾಯಿತು. ಬೆಡ್‌ಶೀಟ್ ನ್ನು ವಾಪಸ್ ಕಳುಹಿಸಲಾಯಿತು.
ಬಳ್ಳಾರಿ ಜೈಲಲ್ಲಿ ಒಂಟಿಯಾದ ನಟ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಆದ ಮೇಲೆ ನಟ ದರ್ಶನ್ ಒಬ್ಬಂಟಿಯಾದಂತಾಗಿದ್ದು, ತುಸು ಮಂಕಾಗಿದ್ದಾರೆಂದು ಹೇಳಲಾಗುತ್ತಿದೆ. ಊಟ, ಉಪಹಾರವನ್ನೂ ಮಾಡದೇ ಮೌನವಾಗಿಯೇ ಕಾಲ ಕಳೆಯುತ್ತಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿದವೆ. ಜೈಲು ಸಿಬ್ಬಂದಿ ಜೊತೆಯೂ ಮಾತನಾಡದೆ ಮೌನಕ್ಕೆ ಜಾರಿರುವ ಅವರು, ಸಮಯ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ.
ದರ್ಶನ್‌ಗೆ ತಲುಪದ ಪ್ರಸಾದ: ಶಾಸ್ತ್ರಿ ಸಿನಿಮಾ ನೋಡಿದ್ದು ಬರೀ 13 ಅಭಿಮಾನಿಗಳು!
ಬಳ್ಳಾರಿ ಜೈಲು ಸೇರಿದ ಬಳಿಕ ಮೊದಲ ದಿನವಾದ ಗುರುವಾರ ರಾತ್ರಿ ಅವರು ಸರಿಯಾಗಿ ಊಟ ಮಾಡಿರಲಿಲ್ಲ. 2ನೇ ದಿನವಾದ ಶುಕ್ರವಾರ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ಮಧ್ಯಾಹ್ನ ರಾಗಿಮುದ್ದೆ, ಚಪಾತಿ ಮತ್ತು ಅನ್ನ ಸಾಂಬಾರು ಸೇವಿಸಿದ್ದಾರೆ. ಬಳ್ಳಾರಿಯಲ್ಲಿ ತಾಪಮಾನ ಹೆಚ್ಚಿದ್ದು, ಇದರಿಂದಲೂ ಸಂಕಟ ಅನುಭವಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಜತೆಗೆ ಕಾರಾಗೃಹದ ಸೊಳ್ಳೆಯೂ ನಿದ್ರೆಗೆಡಿಸಿವೆ, ಎನ್ನಲಾಗುತ್ತಿದೆ. ಬಳ್ಳಾರಿಯ ವಾತಾವರಣ ಹೊಂದಾಣಿಕೆ ಸೇರಿ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಜೈಲು ಬದಲಾವಣೆಗೆ ದರ್ಶನ್ ಕುಟುಂಬಸ್ಥರು ಭೇಟಿಯಾದ ಬಳಿಕ ನಿರ್ಧಾರ ತೆಗದೆುಕೊಳ್ಳಲಾಗುವುದು ಎಂದು ಹೇಳಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ