ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಮಕ್ಕಳಿದ್ದಾರೆಂಬುದಾಗಿ ಕೆಲವರು ಆರೋಪ ಮಾಡಿದ್ದು, ಸ್ವಾಮೀಜಿ ಹಾಗೂ ಆ ಮಕ್ಕಳ ಡಿಎನ್‌ಎ ಪರೀಕ್ಷೆ ಮಾಡಿಸೋಣ ಎಂಬುದಾಗಿ ವಾಲ್ಮೀಕಿ ಸಮಾಜದ ನಾಯಕ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆ (ಅ.2): ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಮಕ್ಕಳಿದ್ದಾರೆಂಬುದಾಗಿ ಕೆಲವರು ಆರೋಪ ಮಾಡಿದ್ದು, ಸ್ವಾಮೀಜಿ ಹಾಗೂ ಆ ಮಕ್ಕಳ ಡಿಎನ್‌ಎ ಪರೀಕ್ಷೆ ಮಾಡಿಸೋಣ ಎಂಬುದಾಗಿ ವಾಲ್ಮೀಕಿ ಸಮಾಜದ ನಾಯಕ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹರಿಹರ ತಾಲೂಕು ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಶ್ರೀಮಠ, ಟ್ರಸ್ಟ್, ಗುರುಗಳು, ಧರ್ಮದರ್ಶಿಗಳ ವಿರುದ್ಧ ಗೊಂದಲ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ, ಹೇಳಿಕೆಗಳಿಗೆ ಸ್ಪಷ್ಟೀಕರಣ ನೀಡಲು ಕರೆದಿದ್ದ ಸಮಾಜದ ರಾಜ್ಯಮಟ್ಟದ ಸಭೆಯಲ್ಲಿ ಮಾತನಾಡಿ, ಸ್ವಾಮೀಜಿ ಹಾಗೂ ಆ ಮಕ್ಕಳ ಡಿಎನ್‌ಎ ಪರೀಕ್ಷೆ ಕಾನೂನಾತ್ಮಕವಾಗಿ ಮಾಡಿಸಬೇಕಾ ಅಥವಾ ಖಾಸಗಿಯಾಗಿ ಮಾಡಿಸಬೇಕಾ ಎಂಬ ಬಗ್ಗೆ ಚರ್ಚಿಸೋಣ ಎಂದರು.
ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದಾಗ ಜಾತಿ ವಿಚಾರ ಬರಲಿಲ್ಲ, ಈಗ ಬಂದಿದೆ: ಸತೀಶ್ ಜಾರಕಿಹೊಳಿ
ಇನ್ನು ಮೂರು ತಿಂಗಳಲ್ಲೇ ಸ್ವಾಮೀಜಿ ಹಾಗೂ ಆ ಮಕ್ಕಳ ಡಿಎನ್‌ಎ ಟೆಸ್ಟ್ ನಡೆದು ಹೋಗಬೇಕು. ಆಗ ಎಲ್ಲವೂ ಸ್ಪಷ್ಟವಾಗಲಿದೆ. ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬಹಳ ಸ್ಪಷ್ಟವಾಗಿ ನಿಮ್ಮ ಅನುಮಾನಗಳಿಗೆ ಉತ್ತರ ನೀಡಿದ್ದಾರೆ. ಸ್ವಾಮೀಜಿ ಮದುವೆಯಾಗಿದ್ದಾರೆಂಬ ಆರೋಪದ ಬಗ್ಗೆ ಸ್ವಾಮೀಜಿ ಅದನ್ನು ಅಲ್ಲಗೆಳೆದಿದ್ದಾರೆ. ಆಸ್ತಿ ಪಾಸ್ತಿ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.
ಸ್ವಾಮೀಜಿ ಆಪ್ತ ಸಹಾಯಕರ ಬಗ್ಗೆಯೂ ಚರ್ಚೆಯಾಗಿದೆ. ಇಂತಹ ಆರೋಪ, ಪ್ರತ್ಯಾರೋಪಗಳೇನೂ ಹೊಸದಲ್ಲ. ಸತ್ಯ ಹರಿಶ್ಚಂದ್ರನ ಕಾಲದಿಂದಲೂ ಇದೆಲ್ಲಾ ಇದೆ. ಒಳ್ಳೆಯದು ಮಾಡುವುದಕ್ಕೆ ಮುಂದಾದಾಗ ಇಂತಹ ಆರೋಪಗಳೆಲ್ಲವೂ ಸಹಜ. ಸಮುದಾಯವನ್ನು ಪ್ರಗತಿಯತ್ತ ಕೊಂಡೊಯ್ಯಬೇಕಷ್ಟೆ ಎಂದು ತಿಳಿಸಿದರು.
ಶಾಂತಲಾ ರಾಜಣ್ಣ, ಡಾ.ಜಿ.ರಂಗಯ್ಯ, ಟಿ.ಒಬಳಪ್ಪ, ಡಾ.ಕೆ.ಆರ್.ಪಾಟೀಲ, ಮಲ್ಲಪ್ಪ ಕೌಲಗಿ, ಹರ್ತಿಕೋಟೆ ವೀರೇಂದ್ರ ಸಿಂಹ, ವೆಂಕಟರಮಣ, ಮಾಲೇನಹಳ್ಳಿ ಮಹೇಶ, ಬಿ.ಶಿವಪ್ಪ, ಚಳುವಳಿ ರಾಜಣ್ಣ, ಶುಭ ವೇಣುಗೋಪಾಲ, ರಾಜಾ ವೆಂಕಟಪ್ಪ ನಾಯಕ, ಬಿ.ಕಾಂತರಾಜ, ಲಿಂಗವ್ವ ನಾಗತಿಹಳ್ಳಿ ತಿಪ್ಪೇಸ್ವಾಮಿ, ಎಚ್.ಜೆ.ಕೃಷ್ಣಮೂರ್ತಿ, ಭೀಮರಾಯ ಹದ್ದಿನಾಳ, ರಘುವೀರ ನಾಯಕ, ನಂದಕುಮಾರ ಮಾಲಿ ಪಾಟೀಲ, ನಾಗರಾಜಪ್ಪ ಹಳ್ಳೆಳ್ಳಪ್ಪನವರ, ರಮೇಶ ಹೊದಿಗೆರೆ, ಪಾಲಯ್ಯ, ರಾಜಶೇಖರ ತಳವಾರ ಇತರರಿದ್ದರು.
ಕಡೆ ಕೇಸ್ ಹಾಕಿ, ಓಡಾಡಲಿ ಎಲ್ಲೆಡೆ
ಆರೋಪ ಮಾಡಿದವರು ಕೇಸ್ ದಾಖಲಿಸಿದಂತೆ ಸ್ವಾಮೀಜಿ ಪ್ರತಿ ದೂರು ನೀಡಲು ಕಾನೂನಿನಲ್ಲಿ ಅವಕಾಶ ಇದೆ. ಅಂತಹವರ ಮೇಲೆ 20 ಕಡೆ ಕೇಸ್ ಹಾಕಿ, ಓಡಾಡಲಿ ಎಲ್ಲಾ ಕಡೆ. ಸ್ವಾಮೀಜಿ ಕಾರು ಚಾಲಕನ ಜಾತಿ ಬಗ್ಗೆ ಪ್ರಶ್ನೆ ಎದ್ದಿದೆ. ಅದು ಅವರ ವೈಯಕ್ತಿಕ ವಿಚಾರ. ಸ್ವಾಮಿಗಳಾದವರ ಮೇಲೆ ಇಂತಹ ಆರೋಪ ಬಂದಿರುವುದು ಇದೇ ಮೊದಲು. ನಾಲ್ಕು ದಶಕಗಳ ಇತಿಹಾಸದಲ್ಲೇ ಇಂತಹ ಆರೋಪ ಮೊದಲ ಸಲ ಕೇಳಿ ಬಂದಿದೆ ಎಂದು ಸತೀಶ ಜಾರಕಿಹೊಳಿ ವಿವರಿಸಿದರು.
ಕೆಲವರಿಗೆ ಬೈಯ್ಯುವುದೇ ಕೆಲಸ
ಶ್ರೀ ವಾಲ್ಮೀಕಿ ಪೀಠಕ್ಕೆ ಬಂದ ನಂತರ ಸ್ವಾಮೀಜಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವುದೇ ವ್ಯಕ್ತಿಗೂ ಕೆಲಸ ಮಾಡಲು ಇತಿಮಿತಿ ಇದೆ ಸಾಮಾಜಿಕ ಜಾಲತಾಣದಿಂದ ಸ್ವಾಮೀಜಿಗೆ ಏನೂ ಆಗುವುದಿಲ್ಲ. ನಮ್ಮದು ಇತಿಮಿತಿಯೊಳಗೆ ಇರಬೇಕು. ನಮ್ಮ ಸಮುದಾಯವು ಬೇರೆ ಸಮುದಾಯದವರ ನೋಡಿ ಕಲಿಯಬೇಕು. ಕೆಲವರು ಬೈಯ್ಯುವುದೇ ಕೆಲಸ ಮಾಡಿಕೊಂಡಿರುತ್ತಾರೆ. ಅಂತಹವರ ಬಗ್ಗೆ ತಲೆ ಕೆಡಿಸಿಕೊಳ್ಳುವಂತಿಲ್ಲ.
ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಸಮಾಜದ ತೀರ್ಮಾನಕ್ಕೆ ಬದ್ಧ: ಪ್ರಸನ್ನಾನಂದ ಶ್ರೀ
ಪೂರ್ವಾಶ್ರಮ ಹೆಸರಿನಲ್ಲಿ ಆಸ್ತಿ ಮಾಡಿಕೊಂಡಿಲ್ಲ, ಆರೋಪಗಳೆನ್ನಲ್ಲ ಲಿಂಗೈಕ್ಯ ಶ್ರೀ ನೋಡಿಕೊಳ್ಳುವರು
ದಾವಣಗೆರೆ: ನನ್ನ ಮೇಲೆ ಏನೇ ಅನುಮಾನಗಳಿರಲಿ, ಸಮಾಜ ಬಾಂಧವರು ನೇರವಾಗಿ ನನ್ನೇ ಕೇಳಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಹೋಗುವುದು ಸರಿಯೇ? ನಾನು ಮುಕ್ತವಾಗಿದ್ದೇನೆ. ನೀವು ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ ಎಂದು ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.
ಹರಿಹರ ತಾ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಗೊಂದಲ, ವಿಚಾರ, ಹೇಳಿಕೆಗಳಿಗೆ ಸ್ಪಷ್ಟೀಕರಣ ನೀಡಿ ಸಮಾಜದ ರಾಜ್ಯ ಮಟ್ಟದ ಸಭೆಯಲ್ಲಿ ಮಾತನಾಡಿ, ಸ್ವಾಮೀಜಿಗಳು ತಮ್ಮ ಹೆಸರಿಗೆ ಆಸ್ತಿ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿವೆ ಎಂದು ಬೇಸರ ಹೊರ ಹಾಕಿದರು.
ಪೂರ್ವಾಶ್ರಮದ ಹೆಸರಿನಲ್ಲಿ ಆಸ್ತಿ ಇಲ್ಲ:
ಶ್ರೀಮಠದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆಂಬ ಆರೋಪ ಮಾಡಲಾಗಿದೆ. ಇಂತಹ ಆರೋಪಗಳನ್ನೆಲ್ಲಾ ಶ್ರೀಮಠದ ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ನೋಡಿಕೊಳ್ಳುತ್ತಾರೆ. ಆದರೆ, ನಮ್ಮ ಪೂರ್ವಾಶ್ರಮದ ಹೆಸರಿನಲ್ಲಿ ಯಾವುದೇ ಆಸ್ತಿಗಳೂ ಇಲ್ಲ. ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಶ್ರೀ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ ಹೆಸರಿನಲ್ಲಿ ಇದೆ ಎಂದು ತಿಳಿಸಿದರು.
ಎಲ್ಲವೂ ಮಠದ ಆಸ್ತಿ:
ಹಿಂದೆ ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಹೆಸರಿನಲ್ಲಿ ಆಸ್ತಿ ಇದ್ದವು. ನಂತರ ಆಸ್ತಿ ಪಹಣಿಗಳು ತಮ್ಮ ಹೆಸರಿಗೆ ಬಂದಿವೆ. ಪುಣ್ಯಾನಂದ ಪುರಿ ಸ್ವಾಮೀಜಿ ಕುಟುಂಬಸ್ಥರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಅದು ಮಠದ ಆಸ್ತಿಯಾಗಿದ್ದು, ಮಠಕ್ಕೆ ಸೇರಬೇಕೆಂಬುದಾಗಿ ಕೋರ್ಟ್‌ನಲ್ಲಿ ತೀರ್ಮಾನವೂ ಆಯಿತು. ಅದೇ ರೀತಿ ನನ್ನ ನಂತರ ಮುಂಬರುವ ಸ್ವಾಮೀಜಿಗೆ ವರ್ಗಾವಣೆಯಾಗುತ್ತದೆ. ಏನಾದರೂ ಅನುಮಾನವಿದ್ದರೆ ಟ್ರಸ್ಟ್ ಸಮ್ಮುಖದಲ್ಲಿ ಬಾಂಡ್ ಪೇಪರ್ ಮೇಲೆ ಬರೆದು ಕೊಡುತ್ತೇನೆ ಎಂದು ಹೇಳಿದರು.