ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಕೋಟ್ಯಂತರ ರು. ಬಳಕೆ ಹಣ ವರ್ಗಾವಣೆ ಪ್ರಕರಣದಲ್ಲಿ ಹವಾಲಾ ಹಣದ ವ್ಯವಹಾರ ನಡೆದಿರುವುದು ಬಹಿರಂಗಗೊಂಡಿದ್ದು, 20 ರು. ನೋಟನ್ನು ವ್ಯವಹಾರಕ್ಕೆ ಬಳಕೆ ಮಾಡಲಾಗಿದೆ.
ಬೆಂಗಳೂರು (ಅ.17): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಕೋಟ್ಯಂತರ ರು. ಬಳಕೆ ಹಣ ವರ್ಗಾವಣೆ ಪ್ರಕರಣದಲ್ಲಿ ಹವಾಲಾ ಹಣದ ವ್ಯವಹಾರ ನಡೆದಿರುವುದು ಬಹಿರಂಗಗೊಂಡಿದ್ದು, 20 ರು. ನೋಟನ್ನು ವ್ಯವಹಾರಕ್ಕೆ ಬಳಕೆ ಮಾಡಲಾಗಿದೆ. ಆರೋಪಿ ನೆಕ್ಕಂಟಿ ನಾಗರಾಜ್ ಮೊಬೈಲ್‌ನಲ್ಲಿನ ಸ್ಟೀನ್‌ಶಾಟ್ ಮೂಲಕ ಈ ವಿಚಾರ ಬೆಳಕಿಗೆ ಬಂದಿದೆ. ಬಂಧನಕ್ಕೊಳಗಾಗಿ ಮೂರು ತಿಂಗಳ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರ ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಹಗರಣದ ಮತ್ತಷ್ಟು ಅಂಶ ಹೊರಬಂದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇ.ಡಿ. (ಜಾರಿ ನಿರ್ದೇಶನಾಲಯ) ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ಎಲ್ಲ ಅಂಶಗಳಿವೆ.
ಚುನಾವಣೆ ವೇಳೆ ಬಳ್ಳಾರಿ ಕ್ಷೇತ್ರಕ್ಕೆ ಇ.ಡಿ. ಅಧಿಕಾರಿಗಳು ಆರೋಪಿ ನೆಕ್ಕಂಟಿ ನಾಗರಾಜ್ ನ ಐಫೋನ್ ಪರಿಶೀಲನೆ ನಡೆಸಿದಾಗ 20 ರು. ನೋಟಿನ ಒಂದೂವರೆ ಕೋಟಿ ರು. ಹಂಚಿಕೆ ಮಾಡಲಾಗಿದೆ. ವಿಜಯ್ ನಗದು ಪಡೆದುಕೊಂಡಿದ್ದ ಎಂಬ ಅಂಶವು ಆರೋಪಪಟ್ಟಿ ಯಲ್ಲಿ ಉಲ್ಲೇಖಿಸಲಾಗಿದೆ. 20 ರು. ಮುಖ ಬೆಲೆಯ ನೋಟಿನ 300042317 ನಂಬರ್ ಆಗಿದ್ದು, ಹವಾಲಾ ವಹಿವಾಟಿಗೆ ಬಳಕೆ ಫೋಟೋ ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಡಲಾಗಿದೆ. ಇದೇ ರೀತಿ ಕೋಟ್ಯಂತರ ವಿಚಾರಣೆ ನಡೆಸಿದಾಗ ಹವಾಲಾ ವ್ಯವಹಾರಕ್ಕೆ 20 ರು. ನೋಟು ಬಳಸಲಾಗಿದೆ ಎಂಬುದು ಗೊತ್ತಾಗಿದೆ.
ಈ ನೋಟನ್ನು ನೆಕ್ಕಂಟಿ ನಾಗರಾಜ್ ತನ್ನ ಸಹೋದರ ನೆಕ್ಕಂಟಿ ರಮೇಶ್‌ಗೆ ನೀಡಿ, ಮತ್ತೋರ್ವ ಆರೋಪಿ ಸತ್ಯನಾರಾಯಣ ವರ್ಮಾಗೆ ಈ ನೋಟು ಕೊಟ್ಟರೆ ಒಂದೂವರೆ ಕೋಟಿ ರು. ನಗದು ಕೊಡುತ್ತಾನೆ ಎಂಬ ಮಾಹಿತಿ ನೀಡಿದ್ದ. ಅದರಂತೆ ನೆಕ್ಕಂಟಿ ರಮೇಶ್ 20 ರು. ಅನ್ನು ಚುನಾವಣೆಗಾಗಿ ಬಳಸಲಾಗಿದೆ. ಇದೆಲ್ಲದರ ಮಾಹಿತಿಯು ಮಾಜಿ ಸಚಿವ ನಾಗೇಂದ್ರ ಅವರಿಗೆ ಇತ್ತು. ಅಲ್ಲದೇ, ನಾಗೇಂದ್ರ ಅವರ ಆಪ್ತ ಸಹಾಯಕ ವಿಜಯಕುಮಾರ್‌ಗೌಡಗೆ ಚುನಾವಣೆ ವೇಳೆ ಹಣ ಹಂಚುವ ಹೊಣೆಯನ್ನು ವಹಿಸಲಾಗಿತ್ತು.ಈ ಬಗ್ಗೆ ವಿಜಯಕುಮಾರ್ ಗೌಡ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಒಳಮೀಸಲಿಗೆ ಅಡ್ಡಿ ಇದೆ, ಯಾರಿಂದ ಅಂತ ಗೊತ್ತಿಲ್ಲ: ಎಚ್.ಆಂಜನೇಯ ಸಂದರ್ಶನ
ನಾಗೇಂದ್ರ ಸೂಚನೆ ಮೇರೆಗೆ ಪಕ್ಷದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕುಮಾರ್ ಮೊಬೈಲ್ ಫೋನ್‌ಲ್ಲಿ ಕಂತೆ ಕಂತೆ ಹಣದ ಫೋಟೋ ಪತ್ತೆಯಾಗಿದೆ ಎಂದು ತಿಳಿಸಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಕ್ಷೇತ್ರಗಳಿಗೆ ಎಷ್ಟೆಷ್ಟು ಹಣ ನೀಡಲಾಗಿದೆ ಎಂಬುದರ ಪಟ್ಟಿಯು ಮೊಬೈಲ್‌ನಲ್ಲಿ ಲಭ್ಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ತುಕಾರಾಂ ಮತದಾರರಿಗೆ ಹಣ ಹಂಚಲಾಗಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ 5.23 ಕೋಟಿ ರು., ಬಳ್ಳಾರಿ ನಗರ ಕ್ಷೇತ್ರಕ್ಕೆ 3.75 ಕೋಟಿ ರು., ಕಂಪ್ಲಿ ಕ್ಷೇತ್ರಕ್ಕೆ 3.38 ಕೋಟಿ ರು., ಕೂಡ್ಲಿಗಿ ಕ್ಷೇತ್ರಕ್ಕೆ 3.16 ಕೋಟಿ ರು. ಹಂಚಿಕೆ ಮಾಡಲಾಗಿದೆ. ಚುನಾವಣೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ 15 ಕೋಟಿರು. ಬಳಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.