Covid Vaccination : 2022ರ ಜನವರಿಯೊಳಗೆ ಲಸಿಕಾಕರಣ ಪೂರ್ಣ

By Kannadaprabha NewsFirst Published Dec 6, 2021, 6:19 AM IST
Highlights
  •  2022ರ ಜನವರಿಯೊಳಗೆ ಲಸಿಕಾಕರಣ ಪೂರ್ಣ
  •  ಜನತೆ ತಪ್ಪದೆ ಕೋವಿಡ್‌ ನಿಯಮ ಪಾಲಿಸಬೇಕು: ಸಚಿವ ಡಾ.ಕೆ.ಸುಧಾಕರ್‌ ಹೇಳಿಕೆ

ಚಿಕ್ಕಬಳ್ಳಾಪುರ (ಡಿ.06): ರಾಜ್ಯದಲ್ಲಿ 2022ರ ಜನವರಿ ವೇಳೆಗೆ ಲಸಿಕಾಕರಣದಲ್ಲಿ (vaccination) ಶೇ.100 ರಷ್ಟು ಪ್ರಗತಿ ಸಾಧಿಸಲಿದ್ದೇವೆ. ಆಗ ಯಾವುದೇ ಪ್ರಭೇದ ಬಂದರೂ ತೊಂದರೆಯಾಗದಂತೆ ಕ್ರಮ ವಹಿಸಬಹುದು. ಅಲ್ಲಿಯವರೆಗೂ ಜನ ಜಾಗೃತಿಯಿಂದ ಇರಬೇಕು ಎಂದು ರಾಜ್ಯ ಆರೋಗ್ಯ (Health Minister) ಸಚಿವ ಡಾ.ಕೆ.ಸುಧಾಕರ್‌ (Sudhakar) ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ (Chikkaballapura) ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರದವರೆಗೆ ಶೇ.93ರಷ್ಟು ಮೊದಲ ಡೋಸ್‌ (Dose) ಆಗಿದೆ. ಶೇ.64ರಷ್ಟು ಜನ ಎರಡು ಡೋಸ್‌ ಲಸಿಕೆ (vaccine)  ಪಡೆದಿದ್ದಾರೆ. ಲಸಿಕಾಕರಣದಲ್ಲಿ ಕರ್ನಾಟಕ (karnataka) ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಜನತೆ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ, ಮುಂದಿನ ದಿನಗಳಲ್ಲಿ ಎದುರಾಗುವ ಅನಾಹುತ ನಿಯಂತ್ರಿಸಬಹುದಾಗಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಒಮಿಕ್ರೋನ್‌ (Omicron) ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಮದ (karnataka Govt) ಉತ್ತಮ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆ, ಪತ್ತೆ ಸೇರಿದಂತೆ ಎಲ್ಲ ವಿಷಯದಲ್ಲೂ ವಿಶೇಷವಾಗಿ ಗಮನಿಸುತ್ತಿದ್ದೇವೆ. ಯಾವುದೇ ಕಾರ್ಯಕ್ರಮಗಳಲ್ಲಿ 500ಕ್ಕೂ ಹೆಚ್ಚು ಮಂದಿ ಸೇರಬಾರದೆಂದು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದರು.

ಮೊಟ್ಟೆ ಸೇವನೆ ಬಲವಂತ ಇಲ್ಲ

ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ (Egg) ನೀಡುತ್ತಿರುವುದಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ನಾವು ಯಾರಿಗೂ ಒತ್ತಾಯಪೂರ್ವಕವಾಗಿ ಏನನ್ನೂ ನೀಡಲು ಆಗುವುದಿಲ್ಲ. ಮಕ್ಕಳ ಆರೋಗ್ಯಕ್ಕೆ ಹಾಗೂ ದೈಹಿಕ ಬೆಳವಣಿಗೆಗೆ ಸರ್ಕಾರ ಮೊಟ್ಟೆ, ಹಾಲನ್ನು ನೀಡುತ್ತಿದೆ. ಕೆಲವರು ಹಾಲನ್ನು, ಮೊಸರನ್ನು ಸ್ವೀಕರಿಸುವುದಿಲ್ಲ. ಅವರನ್ನು ವೇಗನ್ಸ… ಎನ್ನುತ್ತೇವೆ. ಇನ್ನು ಕೆಲವರನ್ನು ಎಗೆಟೇರಿಯನ್‌ ಎನ್ನುತ್ತಾರೆ. ಅವರವರ ಆಹಾರ ಪದ್ಧತಿ ಅವರಿಗೆ ಬಿಟ್ಟವಿಚಾರ. ಆದರೆ ತಿನ್ನಲೇಬೇಕು, ಕೊಡಲೇಬೇಕು ಎಂಬ ಭಾವನೆ ಸರ್ಕಾರದ ಮುಂದಿಲ್ಲ. ಧಾರ್ಮಿಕ, ಧರ್ಮದ ವಿಚಾರಗಳು, ನಂಬಿರುವ ನಂಬಿಕೆಯಿಂದ ಮೊಟ್ಟೆತೆಗೆದುಕೊಳ್ಳಬಾರದು ಎಂದು ನಿರ್ಧರಿಸಿದ್ದರೆ, ಅದಕ್ಕೆ ಸರ್ಕಾರ ಗೌರವ ನೀಡಲಿದೆಂದ ಸಚಿವ ಸುಧಾಕರ್‌ ಹೇಳಿದರು.

ಕೋವಿಡ್‌ ವ್ಯಾಕ್ಸಿನೇಷನ್‌ಗೆ ಯಾರೇ ಹಣ ಪಡೆದರೂ ಅತಂಹವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಅಂತಹವರನ್ನು ಸೇವೆಯಿಂದ ಅಮಾನತು ಮಾಡಲಾಗುವುದು.

-ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ.

ಎರಡು ಡೊಸ್ ಪಡೆದರಷ್ಟೆ ಎಂಟ್ರಿ :  

 ಬಿಬಿಎಂಪಿ(BBMP) ನಿರ್ದೇಶನದ ಬೆನ್ನೆಲ್ಲೆ ಎಚ್ಚೆತ್ತುಕೊಂಡ ನಗರದ ಮಾಲ್‌ಗಳಲ್ಲಿ(Shopping Mall) ಸಿಬ್ಬಂದಿ ಶನಿವಾರ ಕೊರೋನಾ ನಿಯಮ ಪಾಲನೆಗಾಗಿ ಕಠಿಣ ಕ್ರಮ ಕೈಗೊಂಡಿದ್ದು, ಎರಡು ಡೋಸ್‌ ಕೊರೋನಾ ಲಸಿಕೆ ಪಡೆದವರಿಗಷ್ಟೇ ಮಾಲ್‌ ಪ್ರವೇಶಿಸುವುದನ್ನು ಖಾತರಿ ಪಡಿಸಿಕೊಳ್ಳಲು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು ಕಂಡು ಬಂತು.

ಬಿಬಿಎಂಪಿ ಶುಕ್ರವಾರವೇ ನಗರದ ವಿವಿಧ ಮಾಲ್‌ಗಳಿಗೆ ಕೊರೋನಾ ಮಾರ್ಗಸೂಚಿ(Corona Guidelines) ಪಾಲಿಸುವಂತೆ ಹಾಗೂ ಎರಡು ಡೋಸ್‌ ಪಡೆದವರಿಗೆ ಮಾತ್ರ ಮಾಲ್‌ ಪ್ರವೇಶಕ್ಕೆ ಅವಕಾಶ ನೀಡಬೇಕು. ಇದರ ಹೊಣೆ ಸಂಪೂರ್ಣ ಆಯಾ ಮಾಲ್‌ಗಳೇ ವಹಿಸಿಕೊಳ್ಳಬೇಕೆಂದು ಸೂಚಿಸಿದ್ದರು. ಅದರಂತೆ ಶನಿವಾರ ಬೆಳಗ್ಗೆಯಿಂದಲೇ ಗುರುಡಾ ಮಾಲ್‌, ಮೆಜೆಸ್ಟಿಕ್‌ನ ಲುಲು, ಮಂತ್ರಿ, ಓರಾಯನ್‌ ಸೇರಿದಂತೆ ವಿವಿಧ ಮಾಲ್‌ಗಳಲ್ಲಿ ನಿಗಾ ವಹಿಸಲಾಯಿತು.
ಮಾಲ್‌ಗಳ ಮುಖ್ಯದ್ವಾರ, ಬೆಸ್‌ಮೆಂಟ್‌ ಪಾರ್ಕಿಂಗ್‌ ಸ್ಥಳ ಸೇರಿದಂತೆ ಸಾರ್ವಜನಿಕರು ಒಳ ಪ್ರವೇಶಿಸುವ ಎಲ್ಲ ಕಡೆಗಳಲ್ಲೂ ಸಿಬ್ಬಂದಿ ಕಾರ್ಯ ನಿರ್ವಹಿಸಿದರು. ವ್ಯಕ್ತಿಗಳಿಂದ ಕೊರೋನಾ(Coronavirus) ಎರಡು ಡೋಸ್‌ ಪಡೆದಿರುವ ಬಗ್ಗೆ ದಾಖಲೆ ಸಹಿತ ಮಾಹಿತಿ ಪಡೆದಿದ್ದಾರೆ. ದಾಖಲೆ ಇಲ್ಲವಾದಲ್ಲಿ ಆಧಾರ ಸಂಖ್ಯೆ ಪಡೆದು ಮೈ ಕೋವಿಡ್‌ ಆ್ಯಪ್‌ನಲ್ಲಿ ನಮೂದಿಸಿ ತಪಾಸಣೆ ನಡೆಸಿದ್ದಾರೆ. ಎರಡು ಡೋಸ್‌ ಪಡೆದ ಬಗ್ಗೆ ಖಚಿತತೆ ದೊರೆತ ನಂತರವೇ ಶಾಪಿಂಗ್(Shopping) ಅವಕಾಶ ನೀಡಲಾಗಿದೆ.

Covid-19 Variant: ಓಮಿಕ್ರೋನ್‌ ವಿದೇಶದಿಂದ ಬಂದಿಲ್ಲ, ಭಾರತದಲ್ಲೇ ಇದೆ : ಡಾ. ರಾಕೇಶ್‌ ಮಿಶ್ರಾ!

ಇದರ ಜತೆಗೆ ಕಡ್ಡಾಯ ಸ್ಯಾನಿಟೈಸ್‌(Sanitizer) ಬಳಕೆ ಮತ್ತು ಮಾಸ್ಕ್‌(Mask) ಧರಿಸುವಂತೆ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ಮಾಲ್‌ ಒಳಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಗತ್ಯ ಕ್ರಮ ವ್ಯವಸ್ಥೆ ಜತೆಗೆ ಥರ್ಮಲ್‌ ಸ್ಕ್ಯಾನಿಂಗ್‌ ತಪಾಸಣೆ ಮಾಡಲಾಗಿದೆ. ಸಾರ್ವಜನಿಕರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಮಾಲ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

ಅಶೋಕ್‌ ನಗರ ವ್ಯಾಪ್ತಿಯ ಗರುಡಾ ಮಾಲ್‌ನಲ್ಲಿ ಸರ್ಕಾರದ ನಿಯಮ ಪಾಲನೆ ಜತೆಗೆ ಮುಂಜಾಗೃತ ದೃಷ್ಟಿಯಿಂದ ಬಿಬಿಎಂಪಿ ಆರೋಗ್ಯ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಲಸಿಕೆ(Vaccine) ವಿತರಣೆ ನಡೆಯಿತು. ಹೊಸ ತಳಿ ಒಮಿಕ್ರೋನ್‌(Omicron) ವೈರಸ್‌ ಭಿತಿ ರಾಜ್ಯದೆಲ್ಲೆಡೆ ಹೆಚ್ಚಾಗಿದೆ. ಈ ಸಂಬಂಧ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಇದನ್ನು ಪಾಲಿಸುವ ನಿಟ್ಟಿನಲ್ಲಿ ಓರಾಯನ್‌ ಮಾಲ್‌ಗಳಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಬ್ರಿಗೇಡ್‌ ಗ್ರೂಪ್‌ ಓರಾಯನ್‌ ಮಾಲ್‌ ಕಾರ್ಯಾಚರಣೆ ಮುಖ್ಯಸ್ಥ ಸುನಿಲ್‌ ಮುನ್ಷಿ ಮಾಹಿತಿ ನೀಡಿದರು.

ಮೇಲ್ವಿಚಾರಣೆ ಅಷ್ಟೇ ಬಿಬಿಎಂಪಿ ಜವಾಬ್ದಾರಿ

ಎರಡು ಡೋಸ್‌ ಪಡೆದವರಿಗೆ ಮಾತ್ರ ಮಾಲ್‌ಗೆ ಅವಕಾಶ ವಿಚಾರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ಪ್ರತಿಕ್ರಿಯಿಸಿ, ಶುಕ್ರವಾರ ರಾತ್ರಿಯೇ ನಗರದ ಮಾಲ್‌ಗಳಿಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದೇವೆ. ಎರಡು ಡೋಸ್‌ ಲಸಿಕೆ ಪಡೆದವರ ಮಾಹಿತಿ ಪರಿಶೀಲನೆ ಹೊಣೆ ಆಯಾ ಮಾಲ್‌ಗಳ ಮುಖ್ಯಸ್ಥರಿಗೆ, ಸಿಬ್ಬಂದಿಗೆ ವಹಿಸಲಾಗಿದೆ. ಮಾಲ್‌ಗಳಲ್ಲಿ ಕೊರೋನಾ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದೆಯೋ? ಇಲ್ಲವೊ ಎಂಬುದನ್ನು ಮಾತ್ರ ಬಿಬಿಎಂಪಿ ಅಧಿಕಾರಿಗಳು ಗಮನಿಸಲಿದ್ದಾರೆ. ಪಾಲನೆ ಆಗದಿದ್ದಲ್ಲಿ ಅಂತಹ ಮಾಲ್‌ಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದೇವೆ ಎಂದು ತಿಳಿಸಿದರು.

click me!