ಸಣ್ಣ ವಿಚಾರಕ್ಕೆ ತಮ್ಮನ್ನು ಪರೀಕ್ಷೆಗೆ ಇಟ್ರಲ್ಲ ಎನ್ನುವುದು ನೋವಿದೆ. ಇದನ್ನು ಸಮರ್ಥನೆ ಮಾಡುವುದು ಒಳ್ಳೆಯದಲ್ಲ, ಮಾಡಲೂಬಾರದು. ಇತಿಹಾಸ ಎಲ್ಲರಿಗೂ ಇರುವುದಿಲ್ಲ, ಅವರ ಇತಿಹಾಸವನ್ನು ಅವರೇ ಕಳೆದುಕೊಳ್ಳುತ್ತಾರೆ ಎಂದರೆ ಏನೂ ಮಾಡಲು ಅಗುವುದಿಲ್ಲ. ಅವರಿಗೇ ಇದೆಲ್ಲ ಗೊತ್ತಿದೆ: ಕೇಂದ್ರ ಸಚಿವ ಸಚಿವ ವಿ.ಸೋಮಣ್ಣ
ಮಂಗಳೂರು(ಜು.17): ಹಳೆಯ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ನಿಮ್ಮ ಜೊತೆಯಲ್ಲಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ. ಯಾವುದೋ ಹತ್ತು ಹದಿನೈದು ಸೈಟ್‌ಗೆ ಈ ಮಟ್ಟಕ್ಕೆ ಯೋಜನೆ ಮಾಡ್ತಾರೆ ಎಂದು ಗೊತ್ತಿರಲಿಲ್ಲ. ಇವತ್ತು ನಾನು ಅವರಿಗೆ ಮನವಿ ಮಾಡುತ್ತೇನೆ. ಶರಣಾಗಿ ಇಲ್ಲ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರೋದು ಒಳ್ಳೆಯದು ಎಂದು ಕೇಂದ್ರ ಸಚಿವ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ.ಸೋಮಣ್ಣ, ಸಣ್ಣ ವಿಚಾರಕ್ಕೆ ತಮ್ಮನ್ನು ಪರೀಕ್ಷೆಗೆ ಇಟ್ರಲ್ಲ ಎನ್ನುವುದು ನೋವಿದೆ. ಇದನ್ನು ಸಮರ್ಥನೆ ಮಾಡುವುದು ಒಳ್ಳೆಯದಲ್ಲ, ಮಾಡಲೂಬಾರದು. ಇತಿಹಾಸ ಎಲ್ಲರಿಗೂ ಇರುವುದಿಲ್ಲ, ಅವರ ಇತಿಹಾಸವನ್ನು ಅವರೇ ಕಳೆದುಕೊಳ್ಳುತ್ತಾರೆ ಎಂದರೆ ಏನೂ ಮಾಡಲು ಅಗುವುದಿಲ್ಲ. ಅವರಿಗೇ ಇದೆಲ್ಲ ಗೊತ್ತಿದೆ ಎಂದು ಹೇಳಿದ್ದಾರೆ.
ಬೆನ್ನು ಬೆನ್ನಿಗೆ ಎರಡು ಕಂಟಕ.. ! ಅವಳಿ ಕಂಟಕದ ಸುಳಿಯಲ್ಲಿ ಸಿಲುಕಿದರಾ ಸಿಎಂ ಸಿದ್ದರಾಮಯ್ಯ?
ವಾಲ್ಮೀಕಿ ನಿಗಮದ ಹಗರಣದ ನೈತಿಕತೆಯನ್ನು ಸಿಎಂ ಸಿದ್ದರಾಮಯ್ಯ ಅವರೇ ತೆಗೆದುಕೊಳ್ಳಬೇಕು. ನಾಗೇಂದ್ರ ತಪ್ಪು ಮಾಡಿದ್ದು ಸಾಬೀತು ಅಗುವ ಹಾಗೆ ಇದೆ. ಸಿದ್ದರಾಮಯ್ಯ ಮೇಲೆ ಗೌರವವಿದೆ. ಆದರೆ ತಪ್ಪಾಗಿದೆ, ತಪ್ಪನ್ನು ಅವರು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.