ದತ್ತಪೀಠದ ಎಲ್ಲ ಬೇಲಿಗಳು ನಿವಾರಣೆಯಾಗಬೇಕು, ಅದು ನಮ್ಮ ಅಪೇಕ್ಷೆ, ಆಸೆಯಾಗಿದೆ, ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕಮಗಳೂರು (ಆ.31): ದತ್ತಪೀಠದ ಎಲ್ಲ ಬೇಲಿಗಳು ನಿವಾರಣೆಯಾಗಬೇಕು, ಅದು ನಮ್ಮ ಅಪೇಕ್ಷೆ, ಆಸೆಯಾಗಿದೆ, ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಹುಣ್ಣಿಮೆ ಪೂಜೆಯ ಅಂಗವಾಗಿ ಇಂದು ಚಿಕ್ಕಮಗಳೂರು ತಾಲೂಕಿನ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಆಯೋಜಿಸಿದ್ದ ಹೋಮದಲ್ಲಿ ಭಾಗವಹಿಸಿ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ದತ್ತ ಪಾದುಕೆಯ ದರ್ಶನ ಪಡೆದರು.
ಬಳಿಕ ಮಾತನಾಡಿ, ದತ್ತ ಪೀಠದಲ್ಲಿಂದು ಹುಣ್ಣಿಮೆಯ ಪೂಜೆ ಬಹಳ ವಿಜೃಂಭಣೆಯಯಿಂದ ನಡೆದಿದೆ. ದತ್ತ ಪಾದುಕೆಯನ್ನು ಆರಾಧನೆ ಮಾಡಿ ಎಲ್ಲರಿಗೂ ತುಂಬಾ ಖುಷಿಯಾಗಿದೆ. ದತ್ತಾತ್ರೇಯರಿಗೆ ತ್ರಿಕಾಲ ಪೂಜೆಯಾಗಬೇಕು ಇದು ನಮ್ಮ ಅಪೇಕ್ಷೆಯಾಗಿದೆ. ನಮ್ಮೆಲ್ಲ ಕಾರ್ಯಕರ್ತರ ಹೋರಾಟ, ದತ್ತಪೀಠಕ್ಕಾಗಿ ಹಲವಾರು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಯಶಸ್ಸು ಸಿಕ್ಕಿದೆ. ಆದರೂ, ಕೆಲವು ಬೇಲಿಗಳಿವೆ, ಆ ಎಲ್ಲ ಬೇಲಿಗಳಿಂದ ಹೊರಬಂದು, ಎಲ್ಲ ಸಮಸ್ಯೆಗಳೂ ನಿವಾರಣೆಯಾಗಬೇಕು ಎನ್ನುವ ಆಸೆಯಿದೆ. ದತ್ತಪೀಠ ನಮ್ಮದು, ದತ್ತಪೀಠ ಬೇಲಿ ರಹಿತವಾಗಬೇಕೆಂಬುದು ನಮ್ಮ ಸಂಕಲ್ಪವಾಗಿದೆ.
undefined
ಜನರ ಮಧ್ಯೆ ಇರುವುದು ಕಾಂಗ್ರೆಸ್ಸಿಗೆ ಅಪರಾಧ ಅನಿಸುತ್ತೆ: ಸಿ.ಟಿ.ರವಿ
ಈ ಸಂಕಲ್ಪ ಆದಷ್ಟು ಬೇಗ ಈಡೇರಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಇವತ್ತು ಅತ್ಯಂತ ಶುಭ ದಿನ, ತಂಗಿ ಅಣ್ಣನಿಗೆ ರಾಖಿ ಕಟ್ಟುವ ದಿನ, ದೇಶಭಕ್ತರು ದೇಶಕ್ಕಾಗಿ ಪರಸ್ಪರ ಒಟ್ಟಾಗಿ ಕೆಲಸ ಮಾಡೋಣ ಎನ್ನುವುದನ್ನು ಸ್ಮರಿಸುವ ಸಲುವಾಗಿ ಪರಸ್ಪರ ರಾಖಿ ಕಟ್ಟು ದಿನ. ಈ ದಿನ ನಾವು ದತ್ತ ಪೀಠಕ್ಕೆ ಬಂದಿದ್ದೇವೆ. ದತ್ತಪೀಠದ ಬೇಲಿಗಳಿಂದ ದತ್ತನನ್ನು ಆಚೆ ತಂದು ದೇಶದಾದ್ಯಂತ ಎಲ್ಲ ದತ್ತ ಭಕ್ತರು ಇಲ್ಲಿಗೆ ಬರುವಂತಾಗಬೇಕೆಂಬ ಸಂಕಲ್ಪ ಮಾಡಿದ್ದೇವೆ. ಇದಕ್ಕೆ ದತ್ತಾತ್ರೇಯರು ಹರಸುತ್ತಾರೆಂಬ ನಂಬಿಕೆ ನಮಗಿದೆ ಎಂದು ಹೇಳಿದರುಈ ವೇಳೆ ನಗರ ಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸುಮಂತ್, ಶಶಿ ಸೇರಿದಂತೆ ಇತರರು ಸಾಥ್ ನೀಡಿದರು.