ಕರ್ನಾಟಕದಲ್ಲಿ ಮೊದಲ ಬಾರಿ ವಿಶೇಷ ಮೀನು ಪತ್ತೆ

By Web DeskFirst Published Feb 1, 2019, 11:21 AM IST
Highlights

ರಾಜ್ಯದಲ್ಲಿ ಮೊದಲ ಬಾರಿಗೆ ವಿಶೇಷ ಮೀನೊಂದು ಪತ್ತೆಯಾಗಿದೆ. ಈ ಮೀನಿಗೆ ಯೂನಿಕಾರ್ನ್ ಫಿಶ್ ಎಂದು ಹೆಸರಿಸಲಾಗಿದ್ದು, ಪಾಚಿಯನ್ನು ತಿಂದು ಬದುಕುತ್ತದೆ. 

ಕಾರವಾರ: ಕರ್ನಾಟಕದಲ್ಲಿ ಎಲ್ಲಿಯೂ ಇದುವರೆಗೂ ಕಾಣದ ಬ್ಲೂಪಿನ್‌ ಯುನಿಕಾರ್ನ್‌ ಮೀನು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಮಾಜಾಳಿ ಗಾಬಿತವಾಡ ಕಡಲಿನಲ್ಲಿ ಮೀನುಗಾರರ ಬಲೆಗೆ ಸಿಕ್ಕಿದೆ. 

ಕುದುರೆಗೆ ಹೋಲಿಕೆ ಇರುವುದರಿಂದ ವೈಜ್ಞಾನಿಕವಾಗಿ ಯುನಿಕಾರ್ನ್‌ ಫಿಶ್‌ ಎನ್ನಲಾಗುತ್ತದೆ. ಸ್ಥಳೀಯವಾಗಿ ಘೋಡೆ ಫಿಶ್‌ ಎನ್ನುತ್ತಾರೆ. ಪಾಚಿಯನ್ನು ತಿಂದು ಬದುಕುವ ಮೀನಾಗಿದ್ದು, ಕರ್ನಾಟಕದ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಬೆನ್ನಿನ ಮೇಲೆ ಮುಳ್ಳುಗಳು ಇರುತ್ತದೆ. ಈ ಮೀನಿನ ಮುಖದ ಭಾಗ ಹಂದಿ ಮುಖದ ಹೋಲಿಕೆ ಇದೆ. ಜತೆಗೆ ಹಣೆಯ ಭಾಗದಲ್ಲಿ ಉದ್ದವಾದ ಚುಂಚು ಇದೆ. ನೋಡಲು ವಿಚಿತ್ರವಾಗಿದ್ದು, ಅಲಂಕಾರಿಕಾ ಬಳಕೆಯ ಜತೆಗೆ ಉಳಿದ ಮೀನುಗಳಂತೆ ಆಹಾರವನ್ನಾಗಿಯೂ ಬಳಕೆ ಮಾಡಲಾಗುತ್ತದೆ.

ತಿನ್ನಲು ರುಚಿಕರವಾಗಿರುತ್ತದೆ. ಜತೆಗೆ ಮುಂಭಾಗದಲ್ಲಿ ಕೊಂಬು ಇರುವುದರಿಂದ ಅಲಂಕಾರಿಕವಾಗಿಯೋ ಈ ಮೀನನ್ನು ಬಳಕೆ ಹೆಚ್ಚು. ಹಿಂದೂ ಹಾಗೂ ಫೆಸಿಫಿಕ್‌ ಮಹಾಸಾಗರದಲ್ಲಿ ಹೆಚ್ಚು ಕಾಣಸಿಗುತ್ತದೆ. ಪಾಚಿಯನ್ನು ತಿಂದು ಬದುಕುವ ಮೀನಾಗಿದೆ. ಕರ್ನಾಟದ ಕರಾವಳಿಯಲ್ಲಿ ಇದುವರೆಗೂ ಕಂಡುಬಂದ ದಾಖಲೆ ಇಲ್ಲ.

-ಡಾ.ಶಿವಕುಮಾರ ಹರಗಿ, ಕಡಲ ಜೀವ ಶಾಸ್ತ್ರ ಪ್ರಾಧ್ಯಾಪಕ

click me!