ಎಣ್ಣೆಗಾಗಿ ಡಿಸಿ ಆಫೀಸ್ ಮುಂದೆ ಜಗಳ: ಕಾಮಿಡಿ ವಿಡಿಯೋ!

Published : Nov 22, 2018, 09:40 PM IST
ಎಣ್ಣೆಗಾಗಿ ಡಿಸಿ ಆಫೀಸ್ ಮುಂದೆ ಜಗಳ: ಕಾಮಿಡಿ ವಿಡಿಯೋ!

ಸಾರಾಂಶ

ಎಣ್ಣೆಗಾಗಿ ಪ್ರೊಟೆಸ್ಟ್​! ಎಣ್ಣೆ ಸಿಗದಿದ್ದರೆ ನಮ್ಮ ಗತಿ ಎನು ಶಿವಾ! ಜಿಲ್ಲಾಧಿಕಾರಿ ಕಚೇರಿ ಎದುರು ವಿಭಿನ್ನ ಪ್ರತೀಭಟನೆ! ಮದ್ಯಕ್ಕಾಗಿ ಆಗ್ರಹಿಸಿ ಕುಡುಕರ ಪ್ರತಿಭಟನೆ! ಯಾವುದೆ ಕಾರಣಕ್ಕು ಬಾರ್ ಬಂದ್ ಮಾಡದಂತೆ ಆಗ್ರಹಿಸಿದ ಮದ್ಯಪ್ರಿಯರು! ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕುಡುಕರಿಂದ  ಪ್ರತಿಭಟನೆ

ಧಾರವಾಡ(ನ.22): ಪೇಡಾ ನಗರಿ ಧಾರವಾಡದಲ್ಲಿ ಮದ್ಯ ಬೇಕು, ಬೇಡಗಳ ಜಗಳ ಜೋರಾಗಿದೆ. ಒಂದು ಗುಂಪು ಇರೋ ಬಾರ್ ಬಂದ್ ಮಾಡಿ ಅಂತಾ ಹೇಳಿದ್ರೇ, ಮತ್ತೊಂದು ಗುಂಪು ಬಾರ್​​​​ ಬಂದ್ ಮಾಡಿದರೆ ನಾವು ಸುಮ್ಮನೇ ಇರೋದಿಲ್ಲ ಅಂತಾ ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. 

"

ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿರೋ ಬಾರ್​ವೊಂದನ್ನು ಬಂದ್ ಮಾಡುವಂತೆ  ಕೆಲವರು ಈ ಹಿಂದೆ ಪ್ರೊಟೆಸ್ಟ್​ ಮಾಡಿದ್ರು. ಸುತ್ತಮುತ್ತಲಿನ ಐದು ಹಳ್ಳಿಗಳಿಗೆ ಇದೊಂದೇ ಬಾರ್. ಇದರಿಂದ ಕುಡುಕರು ಗ್ರಾಮದಲ್ಲಿ ಗಲಾಟೆ ಮಾಡ್ತಾರೆ ಅಂತಾ ಜನರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. 

ಆದ್ರೆ, ಇದೀಗ ಈ ಪ್ರತಿಭಟನೆಗೆ ವಿರುದ್ಧವಾಗಿ ಇಂದು ಕುಡುಕರು ಪ್ರತಿಭಟನೆ ನಡೆಸಿ, ಅಚ್ಚರಿ ಮೂಡಿಸಿದರು. ನಾವು ದುಡಿಯೋಕೆ ದಿನಕ್ಕೆ  ನೂರು ರೂಪಾಯಿ ಬೇಕು. ಬಾರ್​​​​ ಬಂದ್​​ ಆದ್ರೆ, ಧಾರವಾಡಕ್ಕೆ ಬಂದು ಕುಡಿದು ಹೋದರೆ ಬಸ್ ಚಾರ್ಜ್ ಗೆ ನಲವತ್ತು ರೂಪಾಯಿ ಬೇಕು. ಹೀಗಾಗಿ ಬಾರ್​​ ಬಂದ್​ ಮಾಡದಂತೆ ಕುಡುಕರು ಪ್ರತಿಭಟನೆ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್