ಉಗ್ರ ದಾಳಿಗೆ ಇಡೀ ದೇಶವೇ ಶೋಕದಲ್ಲಿರುವಾಗ, ಕ್ರೇನ್‌ನಲ್ಲಿ ಹಾರ ಹಾಕಿಸಿಕೊಂಡು ಇನ್ಸ್‌ಪೆಕ್ಟರ್ ಭರ್ಜರಿ ರೋಡ್ ಶೋ!

Published : Apr 23, 2025, 09:51 PM ISTUpdated : Apr 23, 2025, 10:02 PM IST
ಉಗ್ರ ದಾಳಿಗೆ ಇಡೀ ದೇಶವೇ ಶೋಕದಲ್ಲಿರುವಾಗ, ಕ್ರೇನ್‌ನಲ್ಲಿ ಹಾರ ಹಾಕಿಸಿಕೊಂಡು ಇನ್ಸ್‌ಪೆಕ್ಟರ್ ಭರ್ಜರಿ ರೋಡ್ ಶೋ!

ಸಾರಾಂಶ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಿಂದ ಇಡೀ ದೇಶ ಶೋಕದಲ್ಲಿ ಮುಳುಗಿರುವ ವೇಳೆ, ಗೃಹ ಸಚಿವರ ತವರು ಜಿಲ್ಲೆ ತುಮಕೂರಿನಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ಸಂಭ್ರಮಾಚರಣೆಯಲ್ಲಿ ತೊಡಗಿರುವ ಘಟನೆ ನಡೆದಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. 

ತುಮಕೂರು (ಏ.23): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಿಂದ ಇಡೀ ದೇಶ ಶೋಕದಲ್ಲಿ ಮುಳುಗಿರುವ ವೇಳೆ, ಗೃಹ ಸಚಿವರ ತವರು ಜಿಲ್ಲೆ ತುಮಕೂರಿನಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ಸಂಭ್ರಮಾಚರಣೆಯಲ್ಲಿ ತೊಡಗಿರುವ ಘಟನೆ ನಡೆದಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. 

ತುಮಕೂರು ನಗರದ ಟೌನ್‌ ಹಾಲ್‌ ಸರ್ಕಲ್‌ನಲ್ಲಿ, ಕುಶಾಲನಗರ ವೃತ್ತ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ಸಿಪಿಐ ಬಿ.ಎಸ್. ದಿನೇಶ್ ಕುಮಾರ್ ಅವರಿಗೆ ನಾಗರಿಕರ ಹಿತರಕ್ಷಣಾ ಸಮಿತಿ ಹಾಗೂ ಪ್ರಗತಿಪರ ಕನ್ನಡ ಪರ, ದಲಿತ ಪರ ಹೋರಾಟಗಾರರ ವೇದಿಕೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ದಿನೇಶ್ ಕುಮಾರ್ ಅವರು ಕ್ರೇನ್‌ನಲ್ಲಿ ಹಾರ ಹಾಕಿಸಿಕೊಂಡು, ತೆರೆದ ಜೀಪ್‌ನಲ್ಲಿ ರ್ಯಾಲಿ ನಡೆಸಿ, ಹುಲಿಯ ಚಿತ್ರವಿರುವ ಹಾರ ಧರಿಸಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ಕೈವಾಡ ಇಲ್ಲದಿದ್ರೆ ಈವರೆಗೆ ಏಕೆ ಖಂಡಿಸಿಲ್ಲ; ದೇಶದ ಪ್ರಧಾನಿಯನ್ನೇ ಪ್ರಶ್ನಿಸಿದ ಪಾಕ್ ಮಾಜಿ ಕ್ರಿಕೆಟಿಗ!

ಈ ಸಮಾರಂಭ ತುಮಕೂರು ನಗರದ ಗ್ರಂಥಾಲಯದ ಆಡಿಟೋರಿಯಂನಲ್ಲಿ ನಡೆದಿದ್ದು, ದೇಶದಾದ್ಯಂತ ಶೋಕಾಚರಣೆಯ ವಾತಾವರಣವಿರುವಾಗ ಇಂತಹ ಕಾರ್ಯಕ್ರಮ ಆಯೋಜನೆಯಾಗಿರುವುದು ಟೀಕೆಗೆ ಗುರಿಯಾಗಿದೆ. ಉಗ್ರರ ದಾಳಿ ಹಿನ್ನೆಲೆ ಐಪಿಎಲ್ 2025ರ ಇಂದಿನ ಪಂದ್ಯದಲ್ಲಿ ಡಿಜೆ, ಚಿಯರ್‌ಲೀಡರ್‌ಗಳನ್ನೇ ನಿಷೇಧಿಸಿ, ಎಲ್ಲ ಆಟಗಾರರು ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ, ಒಂದು ನಿಮಿಷದ ಮೌನಾಚರಣೆಯ ಮೂಲಕ ಉಗ್ರ ದಾಳಿಯ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಆದರೆ, ತುಮಕೂರಿನಲ್ಲಿ ನಡೆದ ಈ ಸಂಭ್ರಮಾಚರಣೆಯ ಕಾರ್ಯಕ್ರಮ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪಹಲ್ಗಾಮ್ ದಾಳಿಗೆ ಆರ್ಟಿಕಲ್ 370 ತೆಗೆದಿದ್ದೇ ಕಾರಣ; ಕಾಂಗ್ರೆಸ್ ಶಾಸಕ ವಿವಾದಾತ್ಮಕ ಹೇಳಿಕೆ!

ಕಳೆದ ಮಾರ್ಚ್ 24ರಂದು ತುಮಕೂರು ನಗರ ಪೊಲೀಸ್ ಠಾಣೆಯಿಂದ ಕುಶಾಲನಗರ ವೃತ್ತ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ದಿನೇಶ್ ಕುಮಾರ್ ಅವರಿಗೆ ಈ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಶೋಕದ ವಾತಾವರಣದಲ್ಲಿ ಇಂತಹ ಕಾರ್ಯಕ್ರಮಕ್ಕೆ ಬೇಕೇ? ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್