ತುಮಕೂರು ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಹತ್ತು ದಿನಗಳ ತುಮಕೂರು ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಜಂಬೂ ಸವಾರಿ ಮೆರವಣಿಗೆಯಲ್ಲಿ ಜನರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
ತುಮಕೂರು (ಅ.12): ತುಮಕೂರು ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಹತ್ತು ದಿನಗಳ ತುಮಕೂರು ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಜಂಬೂ ಸವಾರಿ ಮೆರವಣಿಗೆಯಲ್ಲಿ ಜನರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
ತುಮಕೂರು ದಸರಾ ಜಂಬೂ ಸವಾರಿ ವೇಳೆ ದಂಪತಿ ಸಮೇತ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ತಾಯಿ ಚಾಮುಂಡೇಶ್ವರಿ ಅಂಬಾರಿ ಮುಂದೆ ಹೆಜ್ಜೆ ಹಾಕಿದರು. ಪರಮೇಶ್ವರ ಜೊತೆ ಅವರ ಅಭಿಮಾನಿಗಳು ಸಹ ನೃತ್ಯ ಮಾಡಿ ಸಾಥ್ ನೀಡಿದರು.
undefined
ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ದುರಂತ: ಒಂದಲ್ಲ ಎರಡಲ್ಲ 13 ಬೋಗಿಗಳು ಹಳಿ ತಪ್ಪಿ ಬೆಂಕಿ, 14 ಮಂದಿ ಗಂಭೀರ!
ಜಿಲ್ಲಾಡಳಿತ ವತಿಯಿಂದ 9 ದಿನಗಳಿಂದ ನಡೆದ ಅದ್ದೂರಿ ದಸರಾ ಆಚರಣೆ. ಅಶ್ವದಳದಿಂದ ಸಚಿವ ಡಾ.ಜಿ.ಪರಮೇಶ್ವರ್ ಗೆ ಗೌರವ ವಂದನೆ ಸಲ್ಲಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಜಂಬೂಸವಾರಿ ಸವಾರಿ ಸಾಗಿತು. ಕಾರ್ಯಕ್ರಮದಲ್ಲಿ 10 ಅಶ್ವದಳದ ಕುದುರೆ, ಹತ್ತಾರು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿ. ಚಾಮುಂಡಿ ದೇವಿಯ ವಿಗ್ರಹ ಹೊತ್ತು ರಾಜಗಂಭೀರ್ಯದಿಂದ ಲಕ್ಷ್ಮಿ ಹೆಸರಿನ ಆನೆ ಗಾಂಭೀರ್ಯದಿಂದ ಹೆಜ್ಜೆ ಹಾಕಿತು. ಲಕ್ಷ್ಮೀ ಆನೆಗೆ ನೊಣವಿನಕೆರೆ ಮಠದ ಮತ್ತೊಂದು ಆನೆ ಲಕ್ಷ್ಮಿ ಸಾಥ್ ಕೊಟ್ಟಿತು. ಮುಜರಾಯಿ ದೇವಾಲಯದ 50 ಕ್ಕೂ ಹೆಚ್ಚು ದೇವರಮೂರ್ತಿಗಳು ಮೆರವಣಿಗೆಯಲ್ಲಿ ಭಾಗಿಯಾದವು. ರಸ್ತೆ ಬದಿಯಲ್ಲಿ ಸಾವಿರಾರು ಜನರು ಜಂಬೂಸವಾರಿ ವೀಕ್ಷಿಸಿದರು.