ಟೊಮೆಟೊ ಬೆಳೆಗಾರರಿಗೆ ಶುರುವಾಗಿದೆ ಶುಕ್ರದೆಸೆ

By Web DeskFirst Published Jan 10, 2019, 11:56 AM IST
Highlights

ರಾಜ್ಯದಲ್ಲಿ ಚಳಿಯ ಎಫೆಕ್ಟ್ ನಿಂದಾಗಿ ಟೊಮೆಟೊ ಬೆಲೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದು, ರೈತರಿಗೆ ಶುಕ್ರದೆಸೆ ಆರಂಭವಾಗಿದೆ. 

ಕೋಲಾರ: ಪ್ರತಿ ಬಾರಿಯೂ ಬೆಲೆ ಕುಸಿತ ದಿಂದ ನಷ್ಟ ಮಾಡಿಕೊಳ್ಳುತ್ತಿದ್ದ ಟೊಮೆಟೋ ಬೆಳೆಗಾರರಿಗೀಗ ಶುಕ್ರದೆಸೆ. ವಾರದ ಹಿಂದೆ 20,  30ಕ್ಕೆ ಮಾರಾಟ ವಾಗುತ್ತಿದ್ದ ಪ್ರತಿ ಕೆ.ಜಿ.ಟೊಮೆಟೋ ಈಗ ದುಪ್ಪಟ್ಟು ದರಕ್ಕೆ ಖರೀದಿಯಾಗುತ್ತಿದೆ. 

"

ಕೆಲ ತಿಂಗಳ ಹಿಂದಷ್ಟೇ ರೈತರು ಬೆಳೆದ ಕಾಸೂ ಗಿಟ್ಟುತ್ತಿಲ್ಲ ಎಂದು ಆರೋಪಿಸಿ ಟೊಮೆಟೋವನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದರು. ಆದರೆ ಹೊಸ ವರ್ಷದ ಆರಂಭದಲ್ಲೇ ಭಾರೀ ಬೆಲೆ ಬೆಳೆ ಖರೀದಿಯಾಗುತ್ತಿರುವುದು ರೈತರಲ್ಲಿ ಹರ್ಷ ಮೂಡಿಸಿದೆ. 

ರಾಜ್ಯದಲ್ಲೇ ಅತಿ ಹೆಚ್ಚು ಟೊಮೆಟೋ ಬೆಳೆಯುವ ಜಿಲ್ಲೆ ಕೋಲಾರ ಆಗಿದೆ.

click me!