ಪಡಿತರ ಪಡೆಯಲು ಬೆರಳಚ್ಚು (ಬಯೋಮೆಟ್ರಿಕ್) ಕಡ್ಡಾಯವಲ್ಲ..!

By Suvarna NewsFirst Published May 12, 2021, 6:02 PM IST
Highlights

* ಪಡಿತರ ಪಡೆಯಲು ಬೆರಳಚ್ಚು ಕಡ್ಡಾಯವಲ್ಲ
* ಕೊರೋನಾ ಹಿನ್ನೆಲೆಯಲ್ಲಿ (ಬಯೋಮೆಟ್ರಿಕ್ ಪಡೆಯದಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರ ಸೂಚನೆ
* 2021 ಮೇ ತಿಂಗಳ ಪಡಿತರವನ್ನು ಚೀಟಿದಾರರ ಬೆರಳು ಮುದ್ರೆ (ಬಯೋಮೆಟ್ರಿಕ್) ಪಡೆಯದೇ ವಿತರಿಸಲು ಆದೇಶ
 

ಬೆಂಗಳೂರು, (ಮೇ.12): ಕೊರೋನಾ 2 ಅಲೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೊರೋನಾವನ್ನು ನಿಯಂತ್ರಿಸಲು ಇನ್ನಿಲ್ಲದ ಕಸತ್ತು ನಡೆಸಿದೆ.

ಆರೋಗ್ಯ ಇಲಾಖೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬೆರಳಚ್ಚು (ತಂಬ್) ಕಡ್ಡಾಯವಲ್ಲ ಎಂದು ರಾಜ್ಯ ಸರ್ಕಾರ ಇಂದು (ಬುಧವಾರ) ಆದೇಶ ಹೊರಡಿಸಿದೆ.

ಸರ ಸರ ಪಡಿತರ.. 'ಒನ್ ನೇಷನ್, ಒನ್ ರೇಷನ್ ‌'..ಯಾರಿಗೆಲ್ಲ ಲಾಭ?

ರಾಜ್ಯದಲ್ಲ ಕೊರೋನಾ ಎರಡನೇ ಅಲೆ ವ್ಯಾಪಿಸುತ್ತಿರುವುದರಿಂದ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ 2021 ಮೇ ತಿಂಗಳ ಪಡಿತರವನ್ನು ಚೀಟಿದಾರರ ಬೆರಳು ಮುದ್ರೆ (ಬಯೋಮೆಟ್ರಿಕ್) ಪಡೆಯದೇ ವಿತರಿಸಲು ಸರ್ಕಾರ ತಿಳಿಸಿದೆ.

ಈಗಾಗಲೇ ನೌಕರರ ಬಯೋಮೆಟ್ರಿಕ್ ಹಾಜರಾತಿಯನ್ನೂ ಸಹ ರಾಜ್ಯ ಸರ್ಕಾರ ಕ್ಯಾನ್ಸಲ್ ಮಾಡಿದೆ. ಇದೀಗ ಪಡಿತರ ಅಂಗಡಿಯಲ್ಲೂ ಬಯೋಮೆಟ್ರಿಕ್ ಉಪಯೋಗಿಸದಂತೆ ಮಾಲೀಕರಿಗೆ ಸರ್ಕಾರ ಹೇಳಿದೆ.
"

click me!