ಶತಮಾನದ ಸಂತನಿಗೆ ಕನ್ನಡ ಪತ್ರಿಕೆಗಳ ಅಕ್ಷರ ನಮನ

First Published Jan 22, 2019, 1:34 PM IST

ತ್ರಿವಿಧ ದಾಸೋಹಿ, ಕಾಯಕಯೋಗಿ, ಕಲ್ಪತರು ನಾಡು ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು 111 ವರ್ಷಗಳ ಸುದೀರ್ಘ, ಸಾರ್ಥಕ ಜೀವನ ಪ್ರಯಾಣವನ್ನು ಮುಗಿಸಿದ್ದಾರೆ. ಅದೆಷ್ಟೋ ಜನರ ಬಾಳಲ್ಲಿ ಬೆಳಕಾಗಿದ್ದ ಕರುನಾಡಿನ ನಂದಾ ದೀಪವಾಗಿದ್ದ ಸಿದ್ಧಗಂಗಾ ಅಗಲಿಕೆಯಿಂದ ನಾಡಿನೆಲ್ಲೆಡೆ ಶೋಕ ಮಡುಗಟ್ಟಿದೆ. ಇವರ ನಿಧನಕ್ಕೆ ಲಕ್ಷಾಂತರ ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ನ್ಮಮ ರಾಜ್ಯದ ಪ್ರಮುಖ ಸುದ್ದಿ ಪತ್ರಿಕೆಗಳೂ ಕಾಯಕಯೋಗಿಗೆ ವಿಶೇಷ ಹಾಗೂ ವಿಶಿಷ್ಟವಾಗಿ ನಮನ ಸಲ್ಲಿಸಿದ್ದಾವೆ. ಇಂದಿನ ದಿನ ಪತ್ರಿಕೆಗಳ ಮುಖಪುಟದ ಒಂದು ನೋಟ 

'ದೇವರ ನಡಿಗೆ ದೇವರ ಕಡೆಗೆ' ಕಾಯಕಯೋಗಿಗೆ 'ಕನ್ನಡಪ್ರಭ' ತನ್ನ ಮೊದಲ ಪುಟದಲ್ಲಿ ಸಲ್ಲಿಸಿದ ನುಡಿನಮನ
undefined
’ವಿಜಯ ಕರ್ನಾಟಕ’ ದಿನಪತ್ರಿಕೆಯ ಮೊದಲ ಪುಟದಲ್ಲಿ ಶತಮಾನದ ಸಂತನಿಗೆ ಸಾಷ್ಟಾಂಗ ನಮಸ್ಕಾರ
undefined
'ಶಿವಸಾಯುಜ್ಯ' ಇದು ಹೊಸ ದಿಗಂತ ಪತ್ರಿಕೆ ತ್ರಿವಿಧ ದಾಸೋಹಿಗೆ ಸಲ್ಲಿಸಿದ ನಮನ
undefined
'ದೇವರ ಲೋಕಕ್ಕೆ ಮರಳಿದ ದೇವರು' ದಿನಪತ್ರಿಕೆ 'ವಿಶ್ವವಾಣಿ’ ಸಲ್ಲಿಸಿದ ನಮನ
undefined
'ಮಹಾಶರಣನ ನಿರ್ಗಮನ' ಇದು 'ವಾರ್ತಾ ಭಾರತಿ' ಬಡವರ ಬಂಧುವಿಗೆ ಸಲ್ಲಿಸಿದ ನಮನ.
undefined
'ಅನಂತದೆಡೆಗೆ ನಡೆದ ದೇವರು' ಇದು 'ಪ್ರಜಾವಾಣಿ'ಯ ಮುಖಪುಟದಲ್ಲಿ ಸಲ್ಲಿಸಿದ ನುಡಿ ನಮನ
undefined
'ಓ ದೇವರೇ' ಕಲ್ಪತರು ನಾಡಿನ ಸಂತನಿಗೆ ಉದಯವಾಣಿಯ ಅಂತಿಮ ನಮನ
undefined
'ಮತ್ತೆ ಅವತರಿಸು ದೇವ' ಮಹಾಯೋಗಿಗೆ 'ವಿಜಯವಾಣಿ'ಯ ಅಕ್ಷರ ನಮನ
undefined
click me!