ಯಾವುದೇ ಬಂಡಾಯ, ಅಸಮಾಧಾನ ನಮ್ಮಲ್ಲಿಲ್ಲ: ಭೈರತಿ ಬಸವರಾಜ್

By Kannadaprabha News  |  First Published Jun 10, 2020, 11:06 AM IST

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಬಿಜೆಪಿ ವರಿಷ್ಠರು ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆಗೆ ಟಿಕೆಟ್‌ ನೀಡಿದ್ದಾರೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಯಾರನ್ನೂ ಕಡೆಗಣಿಸಿಲ್ಲ. ನಮ್ಮಲ್ಲಿ ಯಾವುದೇ ಬಂಡಾಯ, ಅಸಮಾಧಾನವೂ ಇಲ್ಲ ಎಂದು ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ(ಜೂ.10): ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತರಿಗೆ ವರಿಷ್ಠರ ತೀರ್ಮಾನದಂತೆ ಟಿಕೆಟ್‌ ನೀಡಲಿದ್ದು, ಟಿಕೆಟ್‌ ಹಂಚಿಕೆ ಬಗ್ಗೆ ಯಾವುದೇ ಅಸಮಾಧಾನವೂ ಇಲ್ಲ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಸ್ಪಷ್ಟಪಡಿಸಿದರು.

ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬುದು ವರಿಷ್ಠರ ತೀರ್ಮಾನವಾಗಿದೆ ಎಂದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಬಿಜೆಪಿ ವರಿಷ್ಠರು ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆಗೆ ಟಿಕೆಟ್‌ ನೀಡಿದ್ದಾರೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಯಾರನ್ನೂ ಕಡೆಗಣಿಸಿಲ್ಲ. ನಮ್ಮಲ್ಲಿ ಯಾವುದೇ ಬಂಡಾಯ, ಅಸಮಾಧಾನವೂ ಇಲ್ಲ ಎಂದು ಹೇಳಿದರು.

Latest Videos

undefined

ಮಂಡ್ಯ ಜಿಲ್ಲೆಯಲ್ಲಿ 235 ಸೋಂಕಿತರು ಮಂದಿ ಗುಣಮುಖ

ರಾಜಕಾರಣದಲ್ಲಿ ಪ್ರತಿಯೊಬ್ಬರಿಗೂ ಸ್ಥಾನಮಾನ ಪಡೆಯುವ ಆಸೆ ಇದ್ದೇ ಇರುತ್ತದೆ. ಇದು ಸಹ. ಆದರೆ, ವ್ಯಕ್ತಿಗಿಂತಲೂ ಪಕ್ಷ ದೊಡ್ಡದು. ರಮೇಶ್‌ ಕತ್ತಿ, ಪ್ರಕಾಶ ಶೆಟ್ಟಿ, ಪ್ರಭಾಕರ ಕೋರೆ ರಾಜ್ಯಸಭೆಗೆ ಟಿಕೆಟ್‌ ಕೇಳಿದ್ದರು. ಕೋರೆಯವರ ಜೊತೆಗೆ ಫೋನ್‌ನಲ್ಲಿ ಮಾತನಾಡಿದ್ದೆ. ಟಿಕೆಟ್‌ ಸಿಗದ ಬಗ್ಗೆ ಬೇಸರವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂಬುದಾಗಿ ವಿವರಿಸಿದರು.

ಕೊರೋನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸಾಮೂಹಿಕ ಪ್ರಯತ್ನದಿಂದ, ಜನರೂ ಜಾಗೃತರಾಗಿದ್ದಾರೆ. ಇದರಿಂದ ಸೋಂಕಿನ ಪ್ರಮಾಣವೂ ಕಡಿಮೆ ಆಗುತ್ತಿದೆ ಎಂದು ಭೈರತಿ ಬಸವರಾಜ ಶ್ಲಾಘಿಸಿದರು.
 

click me!