ರಾಜ್ಯದಲ್ಲಿ ಅಕ್ರಮ ಬಾಂಗ್ಲನ್ನರ ಲೆಕ್ಕವೇ ಇಲ್ಲ!

By Kannadaprabha NewsFirst Published Jan 21, 2020, 9:03 AM IST
Highlights

ಬಗಲ್‌ ಮೆ ಬಾಂಗ್ಲಾ ದುಷ್ಮನ್‌| ರಾಜ್ಯದಲ್ಲಿ ಅಕ್ರಮ ಬಾಂಗ್ಲನ್ನರ ಲೆಕ್ಕವೇ ಇಲ್ಲ| ಖಾಸಗಿ ಸಂಸ್ಥೆಗಳ ಪ್ರಕಾರ 2 ಲಕ್ಷ ಅಕ್ರಮ ವಲಸಿಗರು| ಸರ್ಕಾರದ ಲೆಕ್ಕದಲ್ಲಿ ಕೆಲವು ನೂರು ಮಾತ್ರ!| ಸರ್ಕಾರದ ಯಾವ ಇಲಾಖೆ ಬಳಿಯೂ ಅಕ್ರಮ ವಲಸಿಗರ ದಾಖಲೆ ಇಲ್ಲ

ಬೆಂಗಳೂರು[ಜ.21]: ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಹಿಂದೂ ಪರ ಸಂಘಟನೆಗಳು ಹಾಗೂ ಖಾಸಗಿ ಸಂಘ ಸಂಸ್ಥೆಗಳ ಸಮೀಕ್ಷಾ ವರದಿಗಳು ಸಾಕಷ್ಟುಪ್ರಕಟವಾಗುತ್ತಿದ್ದರೂ ಇದುವರೆಗೆ ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ನಿಖರ ಅಂಕಿ-ಅಂಶಗಳೇ ಇಲ್ಲ.

ಅಕ್ರಮ ಬಾಂಗ್ಲನ್ನರಿಗೂ ಪಡಿತರ: ರಾಜಕಾರಣಿಗಳಿಗೆ ಮತಬ್ಯಾಂಕ್‌, ದಲ್ಲಾಳಿಗಳಿಗೆ ಹಣದ ಮೂಲ

ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ), ಗುಪ್ತಚರ, ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಪೊಲೀಸರು ಹೀಗೆ ವಲಸಿಗರ ಮೇಲೆ ನಿಗಾ ವಹಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಇದುವರೆಗೆ ರಾಜ್ಯದ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನೇ ಕಲೆ ಹಾಕಿಲ್ಲ ಎನ್ನಲಾಗಿದೆ.

ಒಮ್ಮೆ ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಅಕ್ರಮ ವಲಸಿಗ ಎಂಬುದಾಗಿ ಉಲ್ಲೇಖವಾದರೆ ಸದರಿ ವ್ಯಕ್ತಿಯನ್ನು ರಾಜ್ಯದಿಂದ ಗಡೀಪಾರು ಮಾಡಬೇಕಾಗುತ್ತದೆ. ಇದೊಂದು ಸುದೀರ್ಘವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಹೀಗಾಗಿ ಪೊಲೀಸರು ಮಾನವ ಸಂಪನ್ಮೂಲ ಕೊರತೆ ಮತ್ತು ಕಾರ್ಯದೊತ್ತಡದ ಕಾರಣಗಳನ್ನು ಮುಂದೊಡ್ಡಿ ಅಕ್ರಮ ವಲಸಿಗರ ಪತ್ತೆದಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳಿವೆ.

2 ಲಕ್ಷ ಅಕ್ರಮ ವಲಸಿಗರಿರುವ ಶಂಕೆ:

ರಾಜ್ಯದಲ್ಲಿ ಅಕ್ರಮವಾಗಿ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು, ಹಿಂದೂ ಪರ ಸಂಘಟನೆಗಳು ಹಾಗೂ ಖಾಸಗಿ ಸಂಸ್ಥೆಗಳು ಹೇಳುತ್ತವೆ. ಆದರೆ ಸರ್ಕಾರಿ ಸಂಸ್ಥೆಗಳು ಮಾತ್ರ ನಿಖರವಾದ ಅಂಕಿ-ಅಂಶ ಪ್ರಕಟಿಸದೆ ಊಹಾತ್ಮಕ ವರದಿ ಮಂಡನೆ ಮಾಡುತ್ತಿವೆ.

ಅದರಂತೆ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಪ್ರಕಾರ ರಾಜ್ಯದಲ್ಲಿ 60, ಗುಪ್ತದಳದ ಲೆಕ್ಕದಲ್ಲಿ 15-20 ಸಾವಿರ ವಲಸಿಗರು ಗೂಡು ಕಟ್ಟಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ವರದಿಗಳ ಹೊರತಾಗಿಯೂ 2016ರ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂದಿನ ಗೃಹ ಸಚಿವರು ರಾಜ್ಯದಲ್ಲಿ ಕೇವಲ 270 ಮಂದಿ ಮಾತ್ರ ಅಕ್ರಮ ವಲಸಿಗರಿದ್ದಾರೆ ಎಂದು ಅಧಿಕೃತ ಹೇಳಿಕೆ ನೀಡಿದ್ದರು.

ಅಕ್ರಮ ಬಾಂಗ್ಲನ್ನರಿಗೂ ಪಡಿತರ: ರಾಜಕಾರಣಿಗಳಿಗೆ ಮತಬ್ಯಾಂಕ್‌, ದಲ್ಲಾಳಿಗಳಿಗೆ ಹಣದ ಮೂಲ

ಅಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಅಕ್ರಮ ಬಾಂಗ್ಲಾ ವಲಸಿಗರ ಕುರಿತು ನೀಡಿದ್ದ ಹೇಳಿಕೆ ಅನ್ವಯ, ರಾಜ್ಯದಲ್ಲಿ 748 ಮಂದಿ ಬಾಂಗ್ಲಾದೇಶದ ಪ್ರಜೆಗಳಿದ್ದರು. ಈ ಪೈಕಿ 270 ಮಂದಿ ಅಕ್ರಮ ವಲಸಿಗರು. ಅವರಲ್ಲಿ 56 ಮಂದಿಯನ್ನು ಪತ್ತೆಹಚ್ಚಿ ಗಡೀಪಾರು ಮಾಡಲಾಗಿದ್ದು, 50 ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ ಎಂದಿದ್ದರು. ಇದಾದ ನಂತರ ಮತ್ತೆ ಅಕ್ರಮ ವಲಸಿಗರ ಕುರಿತು ಸರ್ಕಾರ ಅಧಿಕೃತ ಮಾಹಿತಿ ಹೊರಹಾಕಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸುಧೀರ್‌ ಶೆಟ್ಟಿ.

ರಾಜ್ಯದಲ್ಲಿ 186 ದೇಶಗಳ ಸುಮಾರು 31 ಸಾವಿರ ಪ್ರಜೆಗಳು ನೆಲೆಸಿದ್ದಾರೆ. ಇದರಲ್ಲಿ ಸುಮಾರು 850 ಮಂದಿ ವೀಸಾ ಅವಧಿ ಮುಗಿದ ನಂತರವೂ ರಾಜ್ಯದಲ್ಲಿ ನೆಲೆಸಿದ್ದಾರೆ ಎಂದು ವಿದೇಶೀಯರ ಪ್ರಾದೇಶಿಕ ನೊಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಅಧಿಕಾರಿಗಳು ಹೇಳುತ್ತಾರೆ.

1 ಕೋಟಿ ಬಾಂಗ್ಲಾ ಮುಸ್ಲಿಂರನ್ನು ಹೊರ ದಬ್ಬುತ್ತೇವೆ: ಬಿಜೆಪಿಗ

click me!