ಮಠ, ಮಂದಿರಗಳೇ ಟಾರ್ಗೆಟ್, ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ 10 ಲಕ್ಷ ರೂ ಆಭರಣ ಕಳವು

Published : Oct 22, 2025, 08:37 PM IST
Raghavendra Mutt

ಸಾರಾಂಶ

ಮಠ, ಮಂದಿರಗಳೇ ಟಾರ್ಗೆಟ್, ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ 10 ಲಕ್ಷ ರೂ ಆಭರಣ ಕಳವು, ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹಲವು ಚಿನ್ನದ ಆಭರಣಗಳು, ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಲಾಗಿದೆ.

ಹಾವೇರಿ (ಅ.22) ಕಳ್ಳರು ಇದೀಗ ದೇವಸ್ಥಾನ, ಮಠ, ಮಂದಿರಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ಇತ್ತೀಚೆಗೆ ಮಠ, ಮಂದಿರಗ ಮೇಲೆ ದಾಳಿ ಮಾಡಿ, ಬೀಗ ಮುರಿದು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಹಾವೇರಿಯ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳ್ಳತನ ನಡೆದಿದೆ. ಮಠದ ಕೊಠಡಿಗಳ ಬೀಗ ಮುರಿದು ಚಿನ್ನಾಭರಣ, ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಲಾಗಿದೆ. ಸರಿಸುಮಾರು 10 ಲಕ್ಷ ಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ‌ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.

ಹಾವೇರಿ ನಗರದಲ್ಲಿರುವ ರಾಘವೇಂದ್ರಸ್ವಾಮಿಗಳ ಮಠದಲ್ಲಿರುವ ಎರಡು ಕೊಠಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮಠದಲ್ಲಿರೋ ಚಿನ್ನಭರಣ, ಬೆಳ್ಳಿಯ ಆಭರಣ,ತಾಮ್ರದ ವಸ್ತುಗಳು, ಪೂಜಾ ಸಾಮಾಗ್ರಿಗಳು ಕಳ್ಳತನವಾಗಿದೆ. ಘಟನೆಗೆ ರಾಘವೇಂದ್ರ ಸ್ವಾಮಿ ಮಠದ ಭಕ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಠಕ್ಕೆ ಕನ್ನ ಹಾಕಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.

ಕಾರಾವಾರದ ರಾಧಾಕೃಷ್ಣ ದೇವಾಲಯದಲ್ಲಿ ಕಳ್ಳತನ

ಇತ್ತೀಚೆಗೆ ಕಾರವಾರದ ರಾಧಾಕೃಷ್ಣ ದೇವಾಲಯದಲ್ಲೂ ಕಳ್ಳತನ ನಡೆದಿತ್ತು. ದೇವಸ್ಥಾನದ ಮೇಲ್ಛಾವಣಿಯ ಹಂಚು ತೆಗೆದು ದೇವರ ಬೆಳ್ಳಿಯ ಆಭರಣ ಲೂಟಿ ಮಾಡಲಾಗಿದೆ. ರಾತ್ರಿವೇಳೆ ಕಳ್ಳರು ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಪೂಜೆಗಾಗಿ ಬಾಗಿಲು ತೆರದಾಗ ದೇವರ ಬೆಳ್ಳಿಯ ಆಭರಣ, ಕವಚ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸರಿಸುಮಾರು ಐದು ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಬೆಳ್ಳಿಯ ವಸ್ತುಗಳು ಕಳ್ಳತನವಾಗಿದೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್‌ಡಿ ಕೋಟೆಯ ಮಾರಮ್ಮ ದೇವಾಲಯದಲ್ಲಿ ಕಳ್ಳತನ

ಹೆಚ್‌ಡಿ ಕೋಟೆಯಲ್ಲಿನ ಪಟ್ಟಣದ ಶ್ರೀವರಹಿ ಮಾರಮ್ಮ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಇತ್ತೀಚೆಗ ತಡ ರಾತ್ರಿ ಕಳ್ಳರು ಮಾರಮ್ಮ ದೇಗುಲ ಟಾರ್ಗೆಟ್ ಮಾಡಿ ಕಳ್ಳತನ ನಡೆಸಿದ್ದಾರೆ. ತಡ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಾಲಯದಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ. ಇದೇ ವೇಳೆ ಹುಂಡಿಯ ಹಣವನ್ನೂ ಕದ್ದು ಪರಾರಿಯಾಗಿದ್ದಾರೆ. ಪದೇ ಪದೇ ಮಾರಮ್ಮ ದೇವಾಲಯಲ್ಲಿ ಕಳ್ಳತನ ನಡೆಯುತ್ತಿದೆ. ಆದರೆ ಕಳ್ಳರನ್ನು ಹಿಡಿಯದ ಪೊಲೀಸರ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಕಳ್ಳರನ್ನು ಹಿಡಿಯುತ್ತಿಲ್ಲ, ಮತ್ತೊಂದೆಡೆ ಕಳ್ಳತನವನ್ನೂ ತಡೆಯುತ್ತಿಲ್ಲ ಎಂದು ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ಮಂದಿರ ಮಠಗಳೇ ಟಾರ್ಗೆಟ್

ದೇವಸ್ಥಾನ, ಮಠ, ಮಂದಿರಗಳು ರಾತ್ರಿ ವೇಳೆ ಮಚ್ಚಿರುತ್ತದೆ. ಇದನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ದೇವಾಲಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಪದೇ ಪದೇ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ