ಹಿಜಾಬ್ ನಿಷೇಧ ವಿರುದ್ಧದ ಹೋರಾಟ ಕಥೆ: ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಮನದಾಳದ ಮಾತು

Published : May 14, 2026, 09:47 AM IST
Alia Assadi

ಸಾರಾಂಶ

ರಾಜ್ಯದಲ್ಲಿ ಹಿಜಾಬ್ ನಿಷೇಧವನ್ನು ಹಿಂಪಡೆದಿರುವುದನ್ನು ಸ್ವಾಗತಿಸಿ, ಹಿಂದಿನ ಸರ್ಕಾರದ ನಿರ್ಧಾರದಿಂದ ಪರೀಕ್ಷೆ ಸಮಯದಲ್ಲಿ ಎದುರಾದ ಸಂಕಷ್ಟವನ್ನು ವಿದ್ಯಾರ್ಥಿನಿಯೊಬ್ಬರು ವಿವರಿಸಿದ್ದಾರೆ. ಪರೀಕ್ಷೆ ವಂಚಿತರಿಗೆ ಮರುಪರೀಕ್ಷೆ ನಡೆಸಲು ಮತ್ತು ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣವನ್ನು ಸಕಾರಾತ್ಮಕವಾಗಿ ಮುಗಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ನಿಷೇಧದ ನಿಯಮ ಹಿಂಪಡೆದಿರುವುದನ್ನು ಸ್ವಾಗತಿಸುವೆನು ಎಂದು ಕಾನೂನು ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಹೇಳಿಕೆ ನೀಡಿದ್ದಾರೆ. ಈ ಹಿಂದಿನ ಸರಕಾರ ನಮ್ಮ ಶೈಕ್ಷಣಿಕ ವರ್ಷ ಅಂದರೆ ದ್ವೀತಿಯ ಪಿ ಯು ಸಿ ಪರೀಕ್ಷೆ ಆರಂಭವಾಗಲು ಇನ್ನೇನು ಕೇವಲ ಎರಡು ತಿಂಗಳು ಇರುವಾಗ ಉಡುಪಿಯ ನಮ್ಮ ಸರಕಾರಿ ಕಾಲೇಜಿನ ಅಂದಿನ ಅಧ್ಯಕ್ಷರಾಗಿದ್ದ ರಘುಪತಿ ಭಟ್ ಮತ್ತು ಇಂದಿನ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಅವರ ಕುಮ್ಮಕ್ಕಿನಿಂದ ರಾಜ್ಯಾದ್ಯಂತ ಹಿಜಾಬ್ ನಿಷೇಧ ಮಾಡುವ ನಿರ್ಧಾರಕ್ಕೆ ಸರಕಾರ ಮುಂದಾಗಿತ್ತು ಎಂದಿದ್ದಾರೆ.

ಅಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕುವಂತೆ ಪ್ರಚೋದಿಸಿದ್ದ ಬಿಜೆಪಿ ಸರ್ಕಾರ

ನಾವು ಅಂದು ನಮ್ಮ ಪರೀಕ್ಷೆಯ ಕೊನೆಯ ದಿನದವರೆಗೂ ಅಂದಿನ ಸರಕಾದೊಂದಿಗೆ ಬೇಡಿಕೊಂಡೆವು ಆದರೆ ನಮಗೆ ಸರಕಾರ ನ್ಯಾಯ ಕೊಡುವ ಬದಲು ಬೀದಿಯಲ್ಲಿ ನಿಲ್ಲಿಸಿದರು‌. ಮತ್ತು ನಮ್ಮನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದಿಂದ ರಾಜ್ಯಾದ್ಯಂತ ಮಕ್ಕಳಿಗೆ ಕೇಸರಿ ಶಾಲು ಹಾಕುವಂತೆ ಬಿಜೆಪಿ ಸರಕಾರ ಪ್ರಚೋದಿಸಿತು ಹಾಗೂ ಕೇವಲ ನಮ್ಮ ಕಾಲೇಜಿಗೆ ಮಾಡಿದ ನಿಯಮ ರಾಜ್ಯಾದ್ಯಂತ ಜಾರಿ ಮಾಡಿದರು. ನಾವು ನ್ಯಾಯಾಲಾಯದ ಮೆಟ್ಟಿಲೇರಬೇಕಾಯಿತು.ಕೊನೆಗೆ ಇದೊಂದು ಸುಧೀರ್ಘ ಕಾನೂನು ಹೋರಾಟವಾಗಿ ಬದಲಾಯಿತು.

ನಾವು ಪದೇ ಪದೇ ಪ್ರಸ್ತುತ ಸರಕಾರವನ್ನು ಒತ್ತಾಯಿಸುತ್ತಿದ್ದೆವು, ಆದರೆ ಎರಡು ವರ್ಷಗಳ ನಂತರ ನಮಗೆ ಅವಕಾಶ ಮಾಡಿಕೊಟ್ಟಿದೆ. ಅದರ ಜೊತೆಗೆ ಎಲ್ಲಾ ಧರ್ಮದ ವಸ್ತ್ರ ಸಂಹಿತೆಗೆ ಅವಕಾಶ ಕಲ್ಪಿಸಿರುವುದು ಕೂಡ ಸ್ವಾಗತಾರ್ಹ. ಆದರೆ ಪಿಯುಸಿ ತನಕ ಹಿಜಾಬ್ ನಿಷೇಧ ಹೊರತು ಬೇರೆ ಯಾರಿಗೂ ಈ ಸಮಸ್ಯೆ ಎದುರಾಗಿರಲಿಲ್ಲ ಎಂಬುವುದು ವಾಸ್ತವವಾಗಿದೆ.

ಇದೊಂದು ಸಂತೋಷದ ದಿನ

 ಏನೇ ಆದರು ಕರ್ನಾಟಕದ ವಿದ್ಯಾರ್ಥಿಗಳ ಪಾಲಿಗೆ ಇದೊಂದು ಸಂತೋಷದ ದಿನ ಇದರ ಜೊತೆಗೆ ಅಂದು ಪರೀಕ್ಷೆಯಿಂದ ವಂಚಿತರಾಗಿದ್ದ ಹಲವು ವಿದ್ಯಾರ್ಥಿನಿಗಳಿಗೆ ಮರು ಪರೀಕ್ಷೆ ನಡೆಸಲು ಸೂಕ್ತ ಕ್ರಮ ಸರಕಾರ ಕೈಗೊಳ್ಳಲಿ, ಮತ್ತು ಸುಪ್ರೀಂ ಕೋರ್ಟ್ ನಲ್ಲಿರುವ ಈ ಪ್ರಕರಣವನ್ನು ಸರಕರವೇ ಮುಂದೆ ನಿಂತು ಸಕಾರಾತ್ಮಕ ವಾದ ಮಂಡಿಸಿ ಪ್ರಕರಣವನ್ನು ಮುಗಿಸಿ ಬಿಡಲಿ ಎಂದು ಸಲಹೆ ನೀಡುತ್ತಿದ್ದೇನೆ. ರಾಜ್ಯ ಶಿಕ್ಷಣ ಇಲಾಖೆಗೆ ಧನ್ಯವಾದಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸರ್ಕಾರಿ ನೌಕರಿ ಕನಸು ಕಂಡವರಿಗೆ ಬಂಪರ್ ನ್ಯೂಸ್: 56 ಸಾವಿರ ಸರ್ಕಾರಿ ನೇಮಕಾತಿಗೆ ಗ್ರೀನ್‌ ಸಿಗ್ನಲ್‌!
ಜೀವನಾಂಶ ಕೊಡದ ಗಂಡಂದಿರಿಗೆ ಹೈಕೋರ್ಟ್‌ ಶಾಕ್‌! ಪತ್ನಿಗೆ ಹಣ ನೀಡದಿದ್ದರೆ ಜೈಲು ಫಿಕ್ಸ್‌? ಹೈ ಮಹತ್ವದ ತೀರ್ಪು, ಏನಿದು ಪ್ರಕರಣ?