Shed tea stall: ಬಾ ಗುರು ಶೆಡ್ ಗೆ ಟೀ ಕುಡಿಯೋಣ…. ಟೀ ಅಂಗಡಿ ಮುಂದೆ ಶೆಡ್ ಹವಾ..

Published : Aug 29, 2024, 11:16 AM ISTUpdated : Aug 29, 2024, 12:18 PM IST
Shed tea stall: ಬಾ ಗುರು ಶೆಡ್ ಗೆ ಟೀ ಕುಡಿಯೋಣ…. ಟೀ ಅಂಗಡಿ ಮುಂದೆ ಶೆಡ್ ಹವಾ..

ಸಾರಾಂಶ

ನಟ ದರ್ಶನ್ ಅವರ ಶೆಡ್ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಹಕವಾಗಿದ್ದು, ಇದೀಗ ತರಿಕೇರಿಯಲ್ಲಿ 'ಶೆಡ್ ಟೀ ಸ್ಟಾಲ್' ಆರಂಭವಾಗಿದೆ. ಈ ಟೀ ಅಂಗಡಿಯ ವಿಶಿಷ್ಟ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸ್ಯಾಂಡಲ್ವುಡ್ ಡಿ ಬಾಸ್ ದರ್ಶನ್ (Sandalwood D Bass Darshan) ಶೆಡ್ ಗಲಾಟೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ಟ್ರೆಂಡ್ ಆಗಿರೋದು ಹಳೆದಾಯ್ತು. ಶೆಡ್ (Shed) ಗೆ ಸಂಬಂಧಿಸಿದಂತೆ ಸಿಕ್ಕಾಪಟ್ಟೆ ರೀಲ್ಸ್, ವಿಡಿಯೋ ವೈರಲ್ ಆಗಿದೆ, ಆಗ್ತಾನೆ ಇದೆ. ಈ ಮಧ್ಯೆ ಜನರು ಇದನ್ನು ತಮ್ಮ ಬ್ಯುಸಿನೆಸ್ ಗೆ ಬಳಸಿಕೊಳ್ತಿದ್ದಾರೆ. ವ್ಯಾಪಾರದ ಐಡಿಯಾ (Business Idea) ಯಾವಾಗ್ಲೂ ಯುನೀಕ್ ಆಗಿರ್ಬೇಕು ಎನ್ನುವ ಮಾತಿದೆ. ಅದು ರಿಯಲ್ ಎಸ್ಟೇಟ್ ಇರ್ಲಿ ಇಲ್ಲ ಟೀ ಸ್ಟಾಲ್ (Tea Stall)  ಇರಲಿ. ಆಕರ್ಷಕ ಹೆಸರು ಕಾಣ್ತಿದ್ದಂತೆ ಅದಕ್ಕೆ ಗ್ರಾಹಕರು ಅಟ್ರ್ಯಾಕ್ಟ್ ಆಗ್ತಾರೆ. ಈಗ ವ್ಯಕ್ತಿಯೊಬ್ಬರು ತಮ್ಮ ಟೀ ಸ್ಟಾಲ್ ಗೆ ವಿಚಿತ್ರ ಹೆಸರಿಟ್ಟು ಗಮನ ಸೆಳೆದಿದ್ದಾರೆ.

ಬಾ ಗುರು ಶೆಡ್ ಗೆ ಟೀ ಕುಡಿ ಎಂಬ ಶೀರ್ಷಿಕೆ ಜೊತೆ ಶೆಡ್ ಟೀ ಸ್ಟಾಲ್ (Shed Tea Stall) ಅಂತ ಟೀಗೆ ಸ್ಟಾಲ್ ಗೆ ನಾಮಕರಣ ಮಾಡಿದ್ದಾರೆ, ಶೆಡ್ ಟೀ ಸ್ಟಾಲ್ ಇರೋದು ತರಿಕೇರಿಯಲ್ಲಿ. ಸಾಮಾಜಿಕ ಜಾಲತಾಣದಲ್ಲಿ ಈ ಶೆಡ್ ಟೀ ಸ್ಟಾಲ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಕನ್ನಡ ಬೀಟ್ ಬಾಕ್ಸ್ ನಲ್ಲಿ ಈ  ಫೋಟೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಪೋಸ್ಟ್ ನಲ್ಲಿ ನೀವು ಶೆಡ್ ಟೀ ಸ್ಟಾಲ್ ಬೋರ್ಡ್ ನೋಡ್ಬಹುದು. ಎಂ.ಜಿ. ರಸ್ತೆ ತರಿಕೇರಿಯಲ್ಲಿ ಈ ಟೀ ಅಂಗಡಿ ಇದೆ. ನಮ್ಮಲ್ಲಿ ಬೀಡಾ, ಕಾಫಿ, ಟೀ, ಬೂಸ್ಟ್ ಮತ್ತು ಹಾಲು ದೊರೆಯುತ್ತದೆ ಎಂದು ಬರೆಯಲಾಗಿದೆ. ಎಲ್ಲಕ್ಕಿಂತ ಈ ಬೋರ್ಡ್ ನಲ್ಲಿ ಬಾ ಗುರು ಶೆಡ್ ಗೆ ಟೀ ಕುಡಿ ಎನ್ನುವದು ಎಲ್ಲರ ಗಮನ ಸೆಳೆದಿದೆ. ಡಿ ಬಾಸ್ ಅಭಿಮಾನಿ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲೂ ಇದನ್ನು ಹಂಚಿಕೊಳ್ಳಲಾಗಿದೆ. ಮಾಲೀಕನ ಐಡಿಯಾಕ್ಕೆ ಗ್ರಾಹಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.

ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ಬಳ್ಳಾರಿ ಜೈಲಿನತ್ತ ನಟ ದರ್ಶನ್

ಶೆಡ್ ಗೆ ಬಾ  :  ಜೈಲಿಗೆ ಹೋದ ಪವಿತ್ರಾ ಗೌಡ (Pavithra Gowda), ಹಿಂದೆ ಹಿಂದೆ ಬರ್ತಿದ್ದ ಮಾಧ್ಯಮದವರನ್ನು ನಿಮಗೆ ಮಾಡೋಕೆ ಕೆಲ್ಸ ಇಲ್ವಾ ಅಂತಾ  ಕೇಳಿದ್ರು. ಆಗ ಮಾಧ್ಯಮದ ನಿರೂಪಕರೊಬ್ಬರು, ಇಲ್ಲ, ಬಾ ಶೆಡ್ ಗೆ ಹೋಗೋಣ ಎಂದಿದ್ದರು. ಈ ಮಾತು ಎಷ್ಟು ವೈರಲ್ ಆಯ್ತು ಅಂದ್ರೆ, ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಆಯ್ತು. ಬಹುತೇಕ ಎಲ್ಲ ಕಂಟೆಂಟ್ ಕ್ರಿಯೇಟರ್ಸ್ (Content Creators) ಈ ಡೈಲಾಗ್ ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡ್ಕೊಂಡು ತಮ್ಮದೇ ಡೈಲಾಗ್ ಸೇರಿಸಿ ರೀಲ್ಸ್, ವಿಡಿಯೋ ಮಾಡೋಕೆ ಶುರು ಮಾಡಿದ್ದರು. ಈಗ್ಲೂ ಶೆಡ್ ಹಾಗೂ ಶೆಡ್ ಗೆ ಬಾ ಡೈಲಾಗ್ ವಿಡಿಯೋ ಪೋಸ್ಟ್ ಆಗ್ತಾನೆ ಇದೆ. 

ಶೆಡ್ ಗೆ ರೆಡ್ ಮಾರ್ಕ್ : ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy murder case) ಬಯಲಾಗ್ತಿದ್ದಂತೆ ಶೆಡ್ ಗೆ ರೆಡ್ ಮಾರ್ಕ್ ಬಿದ್ದಿದೆ. ಅಪ್ಪಿತಪ್ಪಿ ಯಾರ ಬಾಯಿಂದ ಶೆಡ್ ಎನ್ನುವ ಹೆಸರು ಕೇಳಿದ್ರೂ ಜನರ ರಿಯಾಕ್ಷನ್ ಭಿನ್ನವಾಗಿರುತ್ತದೆ. ಶೆಡ್ ಗೆ ಮಾತ್ರ ಕರಿಬೇಡಪ್ಪ ಎನ್ನುವವರೇ ಹೆಚ್ಚಾಗಿದ್ದಾರೆ.  

ಜೈಲಲ್ಲಿ ರಾಜಾಥಿತ್ಯ: ನಟ ದರ್ಶನ್‌ ಸೇರಿ ಐವರನ್ನು ಪ್ರಶ್ನಿಸಿದ ಪೊಲೀಸರು

ಬಳ್ಳಾರಿ ಜೈಲು (Bellary Jail) ಸೇರಿದ ದರ್ಶನ್ : ಪವಿತ್ರಾ ಗೌಡ ಫೋಟೋಕ್ಕೆ ಕಮೆಂಟ್ ಮಾಡಿ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಸೇರಿದಂತೆ ಸಹಚರರು ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸಿದ್ದ ನಟ ದರ್ಶನ್ ಗೆ ಈಗ ಬಳ್ಳಾರಿ ಜೈಲು ಗತಿಯಾಗಿದೆ. ನಿನ್ನೆ ಅವರನ್ನು ವಿಚಾರಣೆ ಮಾಡಿದ್ದ ಅಧಿಕಾರಿಗಳು ಬೆಳಗಿನ ಜಾವ ಬಳ್ಳಾರಿಗೆ ಕರೆದೊಯ್ದಿದ್ದಾರೆ. ಸದ್ಯ ದರ್ಶನ್ ಬಳ್ಳಾರಿ ಜೈಲು ಪ್ರವೇಶ ಮಾಡಿದ್ದು, ಸೆಪ್ಟೆಂಬರ್ 9ರವರೆಗೆ ಅವರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!