ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ ಘೋಷಣೆ ಕೂಗಿದ ಕಿಡಿಗೇಡಿಗಳು!

By Ravi Janekal  |  First Published Sep 25, 2023, 9:34 PM IST

ಮಸೀದಿ ಆವರಣ ಪ್ರವೇಶಿಸಿ ಜೈ ಶ್ರೀರಾಮ ಘೋಷಣೆ ಕೂಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳ ಗ್ರಾಮದಲ್ಲಿ ನಡೆದಿದೆ.


ದಕ್ಷಿಣ ಕನ್ನಡ (ಸೆ.25) ಮಸೀದಿ ಆವರಣ ಪ್ರವೇಶಿಸಿ ಜೈ ಶ್ರೀರಾಮ ಘೋಷಣೆ ಕೂಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳ ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಘಟನೆ ರಾತ್ರಿ ವೇಳೆ ಬೈಕ್ ಮೂಲಕ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಕಾಂಪೌಂಡ್ ಪ್ರವೇಶಿಸಿರುವ ಇಬ್ಬರು ಕಿಡಿಗೇಡಿಗಳು ಜೈ ಶ್ರೀರಾಮ ಘೋಷಣೆ ಕೂಗಿ ಕೃತ್ಯ.  ಘೋಷಣೆ ಕೂಗಿದ ಬಳಿಕ ಮಸೀದಿ ಆವರಣದಲ್ಲಿ ಬೈಕ್ ಹಿಂತಿರುಗಿಸಿ ತೆರಳಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Tap to resize

Latest Videos

ಬೀದರ್‌ ಮಸೀದಿ ಮೇಲೆ ಕೇಸರಿ ಬಾವುಟ ಹಾರಿಸಿದ ಹಿಂದೂ ಯುವಕರು: ಇವರ ಹಿನ್ನೆಲೆ ಏನು ಗೊತ್ತಾ?

ಯಾವುದೋ ಕಾರ್ಯಕ್ರಮ ನಿಮಿತ್ತ ಆಲಂಕರಿಸಲಾಗಿದ್ದ ಮಸೀದಿ. ರಾತ್ರಿ ವೇಳೆ ಒಳಬಂದು ಘೋಷಣೆ ಕೂಗಿ ಪರಾರಿಯಾಗಿರುವ ಕಿಡಿಗೇಡಿಗಳು ಈ ಘಟನೆ ಸಂಬಂಧ ಮಸೀದಿ ಧರ್ಮಗುರು ದೂರು ನೀಡಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.  

ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

click me!