ಮೈಸೂರು MP VS ಮಂಡ್ಯ MP: ಪ್ರತಾಪ್ ಸಿಂಹ, ಸುಮಲತಾ ನಡುವೆ ಟೆರಿಟರಿ ವಾರ್!

By Suvarna NewsFirst Published May 23, 2022, 10:51 AM IST
Highlights

* ಮಂಡ್ಯ ವ್ಯಾಪ್ತಿಯ ಮಳೆ ಪ್ರದೇಶಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಭೇಟಿ.

* ಮಳೆಯಿಂದ ಮುಳುಗಡೆಯಾಗಿದ್ದ ಬೀಡಿ ಕಾಲೋನಿಗೆ ಪ್ರತಾಪ್ ಸಿಂಹ ಭೇಟಿ.

* ಮಳೆಯಿಂದ ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಕೊಡುವಂತೆ ಸ್ಥಳೀಯರ ಮನವಿ

ಮೈಸೂರು(ಮೇ.23): ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮಂಡ್ಯ ಸಂಸದೆ ಸುಮಲತಾ ನಡುವೆ ಶೀತಲ ಸಮರ ಶುರುವಾಗಿದೆ. ಪ್ರತಾಪ್ ಸಿಂಹ ಕೇವಲ ಮೈಸೂರು ಮಾತ್ರವಲ್ಲದೆ ಮಂಡ್ಯ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೂ ಭೇಟಿ ನೀಡುವ ಮೂಲಕ ತನ್ನ ಕ್ಷೇತ್ರದ ಕೆಲಸ ಮಾಡಲಿ, ಬೇರೆ ಕ್ಷೇತ್ರದ ಉಸಾಬರಿ ಬೇಡ ಎಂದಿದ್ದ ಮಂಡ್ಯ ಸಂಸದೆ ಸುಮಲತಾಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಇಂಡುವಾಳು ಬಳಿಯ ಮೈಸೂರು - ಬೆಂಗಳೂರು ಹೆದ್ದಾರಿ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಪ್ರತಾಪ್ ಸಿಂಹ, ಮಳೆಯಿಂದಾಗಿ ಕುಸಿದಿದ್ದ ರಸ್ತೆ ವೀಕ್ಷಿಸಿ ಶೀಘ್ರ ದುರಸ್ತಿ ನಡೆಸುವಂತೆ ಸೂಚಿಸಿದ್ದಾರೆ. ಬಳಿಕ ತೀವ್ರ ಮಳೆಯಿಂದ ಸಾವಿರಾರು ಮನೆಗಳು ಮುಳುಗಡೆ ಆಗಿದ್ದ ಬೀಡಿ ಕಾಲೋನಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದ್ದಾರೆ.

World Yoga Day: ವಿಶ್ವ ಯೋಗ ದಿನದಂದು ಮೈಸೂರಿಗೆ ಪ್ರಧಾನಿ ಮೋದಿ..!

ಕ್ರೆಡಿಟ್ ವಾರ್, ತಮ್ಮ ಕ್ಷೇತದ ಕೆಲಸ ಮಾಡುವಂತೆ ಪ್ರತಾಪ್ ಸಿಂಹಗೆ ಹೇಳಿದ್ದ ಸುಮಲತಾ

ಶಿಂಷಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.‌ ಪ್ರತಿಭಟನಾ ಜಾಗಕ್ಕೆ ಹಲವು ಬಾರಿ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರು. ‌ಕೆಲ ದಿನಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದಾದ ಬಳಿಕ ಸುಮಲತಾ ಅಂಬರೀಶ್ ಹಾಗೂ ಪ್ರತಾಪ್ ಸಿಂಹ ನಡುವೆ ಕ್ರೆಡಿಟ್ ವಾರ್ ಶುರುವಾಗಿತ್ತು. ‌ಈ ಕುರಿತು ಇಬ್ಬರು ಬಹಿರಂಗವಾಗಿಯೇ ಪರಸ್ಪರ ವಾಗ್ದಾಳಿ ನಡೆಸಿದ್ದರು. 
ಈ‌ ಕುರಿತು ಮಾತನಾಡಿದ್ದ ಸಂಸದೆ ಸುಮಲತಾ ನಾನು‌ ಮಾಡಿದ ಕೆಲಸಗಳಿಗೆ ಕ್ರೆಡಿಟ್ ತೆಗೆದುಕೊಳ್ಳಲು ಅವರುಗಳು ಮುಂದಾಗಿದ್ದಾರೆ. ಶಿಂಷಾ ನದಿಗೆ ಸೇತು ನಿರ್ಮಾಣ ವಿಚಾರವಾಗಿ ಸಂಸದೆಯಾಗಿ‌ ನಾನು ಕೆಲಸ ಮಾಡಿದ್ದೇನೆ. ದೇವೆಗೌಡರು, ಪ್ರತಾಪ್ ಸಿಂಹ ಪ್ರಯತ್ನ ಪಟ್ಟಿಲ್ಲ ಎಂದು ಹೇಳುವುದ್ದಿಲ್ಲ. ನಾನು ನಿತಿನ್ ಗಡ್ಕರಿಯನ್ನು ಎಷ್ಟು ಬಾರಿ ಭೇಟಿಯಾಗಿದ್ದೇನೆ ಎಂಬುದನ್ನ ಅವರ ಸಚಿವಲಾಯದಿಂದ ತಿಳಿದು ಕೊಳ್ಳಬಹುದು. ಬೇರೆ ಜಿಲ್ಲೆ ಸಮಸ್ಯೆ ತೆಗೆದುಕೊಂಡು ಹೋದರೆ ನಿಮ್ಮ ಜಿಲ್ಲೆ ಸಮಸ್ಯೆ ತೆಗೆದುಕೊಂಡು ಬನ್ನಿ ಅನ್ನೋ ಉತ್ತರ ಬರುತ್ತೆ. ನನ್ನ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೇಳಿದಾಗ ಗಡ್ಕರಿಯವರು ಸ್ಪಂದಿಸಿದ್ದಾರೆ. ಈಗ ಸಂಸದರ ಕೆಲಸಕ್ಕು ಕ್ರೆಡಿಟ್ ತೆಗೆದುಕೊಳ್ಳಲು‌ ಮುಂದಾಗುತ್ತಿದ್ದಾರೆ. ಆದ್ರೆ ಅವರು ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದ್ದರು.

PM Narendra Modi: ಜೂ. 21ರಂದು ಮೈಸೂರಿಗೆ ಪ್ರಧಾನಿ ಆಗಮನ: ಕಾರಣ ಏನು ಗೊತ್ತಾ?
 
ಖಾಸಗಿ ಕಾರ್ಯಕ್ರಮ ಮುಗಿಸಿ ಮಳೆ‌ ಹಾನಿ ಪ್ರದೇಶಕ್ಕೆ ಸಂಸದೆ ಭೇಟಿ

ಅತ್ತ ತನ್ನ ವ್ಯಾಪ್ತಿಗೆ ಬರದ ಕ್ಷೇತ್ರದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಸಂತ್ರಸ್ತರ ಸಮಸ್ಯೆ ಕೇಳಿದ್ರೆ. ಮಂಡ್ಯ ಸಂಸದೆ ಸುಮಲತಾ ನಿನ್ನೆ ತನ್ನ ಖಾಸಗಿ ಕಾರ್ಯಕ್ರಮ ಮುಗಿಸಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ರು. ಮಧ್ಯಾಹ್ನ 2.45ಕ್ಕೆ ಚಿಂದಗಿರಿ ಗ್ರಾಮಕ್ಕೆ ಬರಬೇಕಿದ್ದ ಸುಮಲತಾ ಮೈಸೂರಿನಲ್ಲಿ ಬೀಗರ ಔತಣ ಮುಗಿಸಿ 4 ಗಂಟೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ರು. ನಿಗಧಿತ ಸ್ಥಳಗಳಿಗೆ ಭೇಟಿ ನೀಡದ ಅವರು ಕೆಲವೇ ಕೆಲವು ಮಳೆ ಹಾನಿ ಪ್ರದೇಕ್ಕೆ ಭೇಟಿ ಮೈಸೂರಿನತ್ತ ಹೊರಟರು.

ಸುಮಲತಾ ಕಾಲಿಗೆ ಬಿದ್ದ ರೈತ ಮಹಿಳೆ

ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಚಿಂದಗಿರಿ ಕೊಪ್ಪಲು ಗ್ರಾಮದಲ್ಲಿ ನಮ್ಮ ಸಮಸ್ಯೆ ಬಗೆಹರಿಸಿ ಎಂದು ರೈತ ಮಹಿಳೆ ಒಬ್ಬರು ಸಂಸದೆ ಸುಮಲತಾ ಕಾಲಿಗೆ ಬಿದ್ದರು. ಮಳೆ ಬಂದ್ರೆ ನಮ್ಮ ಬೆಳೆ ಹಾಳಾಗುತ್ತವೆ. ನಮ್ಮೂರ ರಸ್ತೆಗಳೆಲ್ಲಾ ಕೊಚ್ಚಿ ಹೋಗುತ್ತವೆ. ಸರಿಯಾದ ರಸ್ತೆ ಮಾಡಿಸಿ ಮೇಡಂ ಎಂದು ಕೇಳಿಕೊಂಡರು. ನೀವುಗಳು ಯಾರು ಏನು ಮಾಡಲ್ಲ, ಬರ್ತೀರಾ ಸುಮ್ಮನೆ ಹೋಗ್ತಿರಾ. ನಮ್ಮ ಸಮಸ್ಯೆ ಕೇಳೋರು ಯಾರು ಎಂದು ಸುಮಲತಾರನ್ನ ಪ್ರಶ್ನಿಸಿದರು.

click me!