
ವಿಜಯಪುರ (ಮೇ.21): ಮಹಿಂದ್ರಾ ಎಸ್.ಯು.ವಿ ಕಾರು, ಖಾಸಗಿ (ವಿ.ಆರ್.ಎಲ್) ಬಸ್, ಕಂಟೇನರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಆರು ಜನ ಸಾವನ್ನಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಬೆಳಗಿನ ಜಾವ ಸಂಭವಿಸಿದೆ.
ಸೊಲ್ಲಾಪುರದ ಕಡೆ ಹೊರಟ್ಟಿದ್ದ ಮಹಿಂದ್ರಾ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಹೆದ್ದಾರಿ ವಿಭಜಕ ಹಾರಿ ಎದುರಿಗೆ ಬರುತ್ತಿದ್ದ ಮುಂಬೈಯಿಂದ ಬಳ್ಳಾರಿ ಕಡೆಗೆ ಹೊರಟ್ಟಿದ್ದ ವಿ.ಆರ್.ಎಲ್.ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಂದ್ರಾ ಎಸ್.ಯು.ವಿ ಕಾರಿನಲ್ಲಿದ್ದ ಚಾಲಕ ಹೊರ್ತಿಯ ವಿಕಾಸ ಶಿವಪ್ಪ ಮಕನಿ, ಪ್ರಯಾಣಿಕರಾದ ತೆಲಂಗಾಣ ಗಡವಾಲ ಮೂಲದ ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರನ್ ಮಲಕಂಠನ್, ಪತ್ನಿ ಪವಿತ್ರಾ, ಮಗ ಅಭಿರಾಮ, ಮಗಳು ಜೋಸ್ನಾ ಐವರು ಸ್ಥಳದಲ್ಲೇ ಸಾವಿಗೀಡಾಗಿ ಮತ್ತೊಬ್ಬ ಮಗ ಪ್ರವೀಣ ತೇಜ ಗಂಭೀರ ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ಖಾಸಗಿ ವಿ.ಆರ್.ಎಲ್. ಬಸ್ ಚಾಲಕ ಕಲಗುಟಗಿ ತಾಂಡಾದ ಬಸವರಾಜ ರಾಠೋಡ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಚಿತ್ರ ಎಂದರೆ ಕಳೆದ 15 ದಿನಗಳ ಹಿಂದಷ್ಟೇ ಟಿ ಭಾಸ್ಕರ್ ಹೊರ್ತಿಯ ಕೆನರಾ ಬ್ಯಾಂಕ್ ಗೆ ವರ್ಗಾವಣೆಗೊಂಡು ಬಂದಿದ್ದ. 4 ದಿನ ರಜೆ ಪಡೆದು ಆಂಧ್ರಪ್ರದೇಶದ ಟೂರ್‌ಗೆ ತೆರಳಿದ್ದ, ಇಂದು ವಾಪಸ್ ಆಗುವ ವೇಳೆ ನಸುಕಿನ ಜಾವ ಅಪಘಾತದಲ್ಲಿ ಇಡೀ ಕುಟುಂಬವೇ ಸರ್ವನಾಶವಾಗಿದೆ. ಇನ್ನೂ ಘಟನಾಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಅಡಿಷನ್ ಎಸ್ಪಿ ಶಂಕರ ಮಾರಿಹಾಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಇದಕ್ಕಿದ್ದಂತೆ ರಿವರ್ಸ್ ಬಂದ ಲಾರಿ: ಸಾವಿನ ದವಡೆಯಿಂದ ಯುವತಿ ಜಸ್ಟ್ ಮಿಸ್
ರಸ್ತೆ ಅಪಘಾತ: ಪಿಎಸ್‌ಐ ಸೇರಿ ಇಬ್ಬರ ಸಾವು: ಕೆಎಸ್‌ಆರಟಿಸಿ ಬಸ್ ಪಲ್ಟಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಪಿಎಸ್‌ಐ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಕನಕಪುರ ರಾಷ್ಟ್ರೀಯ ಹೆದ್ದಾರಿ ಕಗ್ಗಲೀಪುರದ ಮಯೂರ ಬೇಕರಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ತಾಲೂಕಿನ ಮಲ್ಲಾಪುರ ಗ್ರಾಮಸ್ಥ ಹಾಗೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು ಮೃತಪಪಟ್ಟವರು. ಅಪಘಾತದಲ್ಲಿ ಗಾಯಗೊಂಡ ನಾಲ್ವರ ಪೈಕಿ, ಓರ್ವ ಗಾಯಾಳುವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಮೂವರು ಗಾಯಾಳುಗಳನ್ನು ಹಾರೋಹಳ್ಳಿಯ ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ