ದೀರ್ಘ ಸುಮಂಗಲಿ ಭವ: ಇದಕ್ಕಿಂತ ಇನ್ನೇನು ಹೆಡ್ಲೈನ್ ಬೇಕು?

By Web Desk  |  First Published Dec 2, 2018, 3:46 PM IST

ಗಂಗಾವತಿಯಲ್ಲಿ ಇಂದು ನಡೆಯಿತು ವಿಶಿಷ್ಟ ಮದುವೆ! ತೆಲಂಗಾಣ ರಾಜ್ಯಪಾಲರ ಆದೇಶದಂತೆ ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಮದುವೆ! ಜೋಡಿ ಹಕ್ಕಿಯ ಪ್ರೀತಿ ಕಂಡು ತಲೆಬಾಗಿದ ತೆಲಂಗಾಣ ರಾಜ್ಯಪಾಲ! ನಿರಂಜನಿ, ವೆಂಕಟ್ ಭಾರ್ಗವ್ ಪ್ರೀತಿಗೆ ಮನೆಯವರಿಂದ ಅಡ್ಡಿ! AIDO ಸಂಘಟನೆ ಮೊರೆ ಹೋದ ಯುವತಿ ನಿರಂಜನಿ! AIDO ಸಂಘಟನೆಯಿಂದ ತೆಲಂಗಾಣ ರಾಜ್ಯಪಾಲರಿಗೆ ಪತ್ರ! ಮದುವೆ ಮಾಡಿಸುವಂತೆ ಕನಾರ್ನಾಟಕ ಪೊಲೀಸ್ ಮಹಾ ನಿರ್ದೇಶಕರಿಗೆ ರಾಜ್ಯಪಾಲ ಆದೇಶ! ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೀತು ಪ್ರೇಮಿಗಳ ಮದುವೆ


ಗಂಗಾವತಿ(ಡಿ.02): ಒಂದು ಹುಡುಗ, ಒಂದು ಹುಡುಗಿ, ಇಬ್ಬರ ನಡುವಿನ ಪ್ರೇಮಕ್ಕೆ ಬೆಂಬಲ ನೀಡಲು ಅತಿರಥ ಮಹಾರಥರ ದಂಡು. ಇವರಿಬ್ಬರ ಪವಿತ್ರ ಪ್ರೇಮಕ್ಕೆ ಕರ್ನಾಟಕ ಸರ್ಕಾರ, ತೆಲಂಗಾಣ ರಾಜ್ಯಪಾಲರೇ ತಲೆಬಾಗಿದ್ದಾರೆ.

ಹೌದು ಗಂಗಾವತಿಯ ವಿದ್ಯಾ ನಗರದಲ್ಲಿ ಇಂದು ವಿಶಿಷ್ಟವಾದ ಮದುವೆಯೊಂದು ನಡೆದಿದೆ. ಹುಡುಗ 7th ಸ್ಟಾರ್ ಹೋಟೆಲ್ ನಲ್ಲಿ ಶೆಫ್,  ಹುಡುಗಿ ಬೆಂಗಳೂರಿನಲ್ಲಿರುವ ಅಮೆರಿಕನ್ ವೆಲ್ಸ್ ಫಾರ್ಗೋ ಬ್ಯಾಂಕ್ ಉದ್ಯೋಗಿ.

Tap to resize

Latest Videos

ವಧು ನಿರಂಜನಿ  ಗಂಗಾವತಿಯ ಸಿದ್ದಾಪುರ ಗ್ರಾಮದ ಯುವತಿ. ಮತ್ತು ವರ ವೆಂಕಟ್ ಭಾರ್ಗವ್ ಗಂಗಾವತಿಯ ಉಳೇನೂರು ಗ್ರಾಮದ ಯುವಕ. ಕಳೆದ 8 ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದು, ಇವರ ಮದುವೆಗೆ ಮನೆಯವರಿಂದ ಕಡು ವಿರೋಧ ವ್ಯಕ್ತವಾಗಿತ್ತು.

 

ಅಲ್ಲದೇ ವೆಂಕಟ್ ಭಾರ್ಗವ್ ನನ್ನು ಮರೆತು ಬಿಡುವಂತೆ ನಿರಂಜನಿಗೆ ಆಕೆಯ ಕುಟುಂಬಸ್ಥರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿರಂಜಿನಿ ಅಲ್ ಇಂಡಿಯಾ ಡೆಮೋಕ್ರೋಟಿಕ್ ಅಸೋಷಿಯನ್ ಮೊರೆ ಹೋಗಿದ್ದಳು.

ಅದರಂತೆ AIDO ಸಂಘಟನೆ ಕೂಡಲೇ ತೆಲಂಗಾಣ ರಾಜ್ಯಪಾಲ್ ಇ.ಎಸ್.ಎಲ್ ನರಸಿಂಹನ್ ಅವರಿಗೆ ಪತ್ರ ಬರೆದು ಜೋಡಿಗೆ ಸಹಾಯ ಮಾಡುವಂತೆ ಮನವಿ ಮಾಡಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ತೆಲೆಗಾಂಣ ರಾಜ್ಯಪಾಲರು, ಕೂಡಲೇ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಇಬ್ಬರ ಮದುವೆ ಮಾಡಿಸುವಂತೆ ಆದೇಶ ನೀಡಿದ್ದರು.

"

ಅದರಂತೆ ಇಂದು ವಿದ್ಯಾನಗರದ ರಾಮ ಮಂದಿರದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ನಿರಂಜನಿ ಮತ್ತು ವೆಂಕಟ್ ಭಾರ್ಗವ್ ಮದುವೆಯಾಗಿ ಹೊಸ ಜೀವನಕಕೆ ಕಾಲಿಟ್ಟರು.

  

click me!