ಲಕ್ಷ್ಮೀ ನನ್ನ PRO ಆಗಿದ್ದಳು: ರಮೇಶ್ ಜಾರಕಿಹೊಳಿ!

Published : Dec 10, 2018, 06:06 PM ISTUpdated : Dec 10, 2018, 06:29 PM IST
ಲಕ್ಷ್ಮೀ ನನ್ನ PRO ಆಗಿದ್ದಳು: ರಮೇಶ್ ಜಾರಕಿಹೊಳಿ!

ಸಾರಾಂಶ

ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಮಾತಿನ ಚಕಮಕಿಯೇ ಬೆಳಗಾವಿ ಚಳಿಗಾಲದ ಅಧಿವೇಶನದ ಹೈಲೆಟ್ಸ್ ಆಗುವ ಲಕ್ಷಣ ಕಾಣುತ್ತಿದೆ. ಲಕ್ಷ್ಮೀ ಹೇಳಿಕೆಗೆ ತಿರುಗೇಟು ನೀಡಿರುವ ರಮೇಶ್ ಜಾರಕಿಹೊಳಿ, 'ಲಕ್ಷ್ಮೀ ಕಳೆದ ಐದು ವರ್ಷಗಳಿಂದ ನನ್ನ ಪಿಆರ್ ಆಗಿದ್ದಳು ಈಗೇಕೆ ಅಲ್ಲ ಎನ್ನುತ್ತಿದ್ದಾಳೆ..'ಎಂದು ಗರ್ವದಿಂದಲೇ ಪ್ರಶ್ನಿಸಿದ್ದಾರೆ.

ಬೆಳಗಾವಿ(ಡಿ.10): ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿ ರಾಜಕಾರಣದ ಬಿಸಿ ಸುವರ್ಣ ಸೌಧವನ್ನು ತಟ್ಟುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಮತ್ತು ಪ್ರತಿಪಕ್ಷವನ್ನು ಕಟ್ಟಿಹಾಕಲು ಸರ್ಕಾರ ತಂತ್ರಗಾರಿಕೆ ರೂಪಿಸಿಕೊಂಡು ಕೂತಿವೆ.

ಆದರೆ ಇದೆಲ್ಲವನ್ನು ಮರೆ ಮಾಚುವಂತೆ ಮತ್ತೆ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಮಾತಿನ ಚಕಮಕಿಯೇ ಬೆಳಗಾವಿ ಚಳಿಗಾಲದ ಅಧಿವೇಶನದ ಹೈಲೆಟ್ಸ್ ಆಗುವ ಲಕ್ಷಣ ಕಾಣುತ್ತಿದೆ.

"

ಬೆಳಗಾವಿ ಅಧಿವೇಶನಕ್ಕೆ ಗೈರು ಹಾಜರಾದ ಸಚಿವ ರಮೇಶ್ ಜಾರಕಿಹೊಳಿ ಕುರಿತು ಕೇಳಲಾದ ಪ್ರಶ್ನೆಗೆ, ತಾವು ರಮೇಶ್ ಜಾರಕಿಹೊಳಿ ಅವರ ಪಿಆರ್ ಓ ಅಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾಗಿದೆ.

ಇನ್ನು ಲಕ್ಷ್ಮೀ ಹೇಳಿಕೆಗೆ ತಿರುಗೇಟು ನೀಡಿರುವ ರಮೇಶ್ ಜಾರಕಿಹೊಳಿ, 'ಲಕ್ಷ್ಮೀ ಕಳೆದ ಐದು ವರ್ಷಗಳಿಂದ ನನ್ನ ಪಿಆರ್ ಆಗಿದ್ದಳು ಈಗೇಕೆ ಅಲ್ಲ ಎನ್ನುತ್ತಿದ್ದಾಳೆ..'ಎಂದು ಗರ್ವದಿಂದಲೇ ಪ್ರಶ್ನಿಸಿದ್ದಾರೆ.

ಇನ್ನು ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸಿಎಂ ಅವರನ್ನು ಸ್ವಾಗತಿಸಲು ಹೋಗದಿರುವುದಕ್ಕೆ ಸ್ಪಷ್ಟನೆ ನೀಡಿರುವ ರಮೇಶ್, ತಾವು ಸಚಿವರಾಗಿರುವುದು ಶೋ ಆಫ್ ಮಾಡಲು ಅಲ್ಲ ಅಧಿವೇಶನಕ್ಕೆ ಸಿಎಂ ಅವರನ್ನು ಸ್ವಾಗತಿಸುವ ಪದ್ದತಿ ಇಲ್ಲ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ